ಬಸವನಗುಡಿ ಕಡ್ಲೆಕಾಯಿ ಪರಿಷೆಗೆ ಬಟ್ಟೆಯ ಬ್ಯಾಗ್

ಬೆಂಗಳೂರು, ನ. 17 : ಉದ್ಯಾನ ನಗರಿಯ ಇತಿಹಾಸ ಪ್ರಸಿದ್ಧ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಚಾಲನೆ ದೊರೆಯಲಿದೆ. ಇದೇ ಮೊದಲ ಬಾರಿಗೆ ಪ್ಲಾಸ್ಟಿಕ್ ಮುಕ್ತ ಪರಿಷೆ ನಡೆಯಲಿದ್ದು, ಕಡಲೆಕಾಯಿ ವ್ಯಾಪಾರಿಗಳಿಗೆ ಉಚಿತವಾಗಿ ಬಟ್ಟೆ ಬ್ಯಾಗ್‌ಗಳನ್ನು ವಿತರಣೆ ಮಾಡಲಾಗಿದೆ.

ಕಾರ್ತಿಕ ಮಾಸದ ಕೊನೆಯವಾರ ದೊಡ್ಡ ಗಣಪತಿ ದೇವಾಲಯದ ಆವರಣದಲ್ಲಿ ಕಡಲೆಕಾಯಿ ಪರಿಷೆ ನಡೆಯಲಿದೆ. ಬಿಎಂಎಸ್ ಎಂಜಿನಿಯರಿಂಗ್ ಕಾಲೇಜು ಮತ್ತು ಎನ್‌ಎಸ್‌ಎಸ್ ತಂಡ ಈ ಬಾರಿಯ ಪರಿಷೆಗಾಗಿ ಪ್ಲಾಸ್ಟಿಕ್ ಕವರ್ ಬಳಕೆ ಬದಲು ಬಟ್ಟೆ ಬ್ಯಾಗ್‌ಗಳನ್ನು ವಿತರಣೆ ಮಾಡಿದ್ದಾರೆ. [ಕಡ್ಲೇ ಕಾಯಿ ಪರಿಷೆ ಕ್ರೇಜ್ ಶುರು]

ಪರಿಷೆಯಲ್ಲಿ ಸುಮಾರು 190 ವ್ಯಾಪಾರಿಗಳು ಪಾಲ್ಗೊಂಡಿದ್ದಾರೆ. ಭಾನುವಾರ ಕಾಲೇಜು ವಿದ್ಯಾರ್ಥಿಗಳು ವ್ಯಾಪಾರಿಗಳಿಗೆ ಸುಮಾರು 10 ಸಾವಿರದಷ್ಟು ಬಟ್ಟೆ ಬ್ಯಾಗ್‌ಗಳನ್ನು ಉಚಿತವಾಗಿ ವಿತರಣೆ ಮಾಡಿದ್ದಾರೆ. ಸೋಮವಾರವೂ ಕೆಲವು ವ್ಯಾಪಾರಿಗಳಿಗೆ ಬ್ಯಾಗ್ ನೀಡಲಿದ್ದಾರೆ. [ಪರಿಷೆಯ ಇತಿಹಾಸ ನೋಡಿ]

ಪರಿಷೆಯಲ್ಲಿ ಕಡ್ಲೆಕಾಯಿ, ಪುರಿ ಖರೀದಿಸುವವರಿಗೆಂದೇ ಕಾಲೇಜು ವಿದ್ಯಾರ್ಥಿಗಳು ಪರಿಸರ ಸ್ನೇಹಿಯಾದ ಬಟ್ಟೆಯ ಬ್ಯಾಗ್‌ಗಳಲ್ಲಿ ವಿತರಣೆ ಮಾಡಿದ್ದಾರೆ. ಗ್ರಾಹಕರು ಬಟ್ಟೆಯ ಬ್ಯಾಗ್‌ಗಳನ್ನು ಕೇಳಿ ಪಡೆಯಿರಿ ಎಂದು ಮೈಕ್ ಮೂಲಕ ಜನರಿಗೆ ಮನವಿ ಮಾಡಲಾಗುತ್ತಿದೆ.

ಬಿಳಿ ಬಣ್ಣದ ಹಿಡಿಯುಳ್ಳ ಈ ಬ್ಯಾಗ್‌ಗಳಲ್ಲಿ ಕನಿಷ್ಠ 3 ಸೇರಿನಿಂದ 8 ಸೇರಿನ ಕಡೆಲೆಕಾಯಿ ತೆಗೆದುಕೊಂಡು ಹೋಗಬಹುದು. ಸೋಮವಾರ ಪರಿಷೆಗೆ ಚಾಲನೆ ದೊರಯಲಿದೆ. ಆದರೆ, ಭಾನುವಾರ ರಜಾ ದಿನವಾದ್ದರಿಂದ ಕಡ್ಲೆಕಾಯಿ ಪ್ರಿಯರು ಖರೀದಿಯಲ್ಲಿ ತೊಡಗಿದ್ದರು.

Basavanagudi

ಯಾರು ಪಾಲ್ಗೊಳ್ಳಲಿದ್ದಾರೆ : ಕಡ್ಲೆಕಾಯಿ ಪರಿಷೆಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಕೇಂದ್ರ ರಸಗೊಬ್ಬರ ಸಚಿವ ಅನಂತಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ, ಮೇಯರ್ ಶಾಂತಕುಮಾರಿ, ಶಾಸಕ ರವಿ ಸುಬ್ರಹ್ಮಣ್ಯ, ಆರ್.ವಿ.ದೇವರಾಜ್, ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ ಮುಂತಾದವರು ಪಾಲ್ಗೊಳ್ಳಲಿದ್ದಾರೆ.

ರೈತರು ವ್ಯಾಪರಕ್ಕೆ ಇಳಿಯುವ ಮೊದಲು ದೊಡ್ಡ ಗಣಪತಿ ಹಾಗೂ ದೊಡ್ಡ ಬಸವನಿಗೆ ತಾವು ತಂದಿರುವ ಬೆಳೆಯನ್ನು ಅರ್ಪಿಸುತ್ತಾರೆ. ದೊಡ್ಡ ಬಸವನಿಗೆ, ದೊಡ್ಡ ಗಣಪತಿಗೆ ಒಂದು ಸಾವಿರ ಕೆ.ಜಿ ಕಡಲೆಕಾಯಿಯಿಂದ, ಅಭಿಷೇಕ, ಪೂಜೆ ಮಾಡಲಾಗುತ್ತದೆ. ನಂತರ ಪ್ರಸಾದ ರೂಪದ ಈ ಕಡಲೆಕಾಯಿಯನ್ನು ಗ್ರಾಹಕರ ಮುಂದೆ ವ್ಯಾಪಾರಕ್ಕಿಡಲಾಗುತ್ತದೆ.

ಈ ಬಾರಿ ಸೇರಿಗೆ ಎಷ್ಟು ಬೆಲೆ? : ಸುಮಾರು 20 ರು.ನಿಂದ 30 ರು.ಗಳವರೆಗೆ ಒಂದು ಸೇರು ಕಡಲೆಕಾಯಿ ವ್ಯಾಪಾರವಾಗುತ್ತದೆ. ಬೆಲೆ ಹೆಚ್ಚು ಕಮ್ಮಿಯಾಗುತ್ತಲೇ ಇರುತ್ತದೆ. ಕಡಲೆಕಾಯಿ ಬೆಳೆಗಾರರು ನೇರವಾಗಿ ವ್ಯಾಪಾರ ಮಾಡಲು ಈ ಪರಿಷೆ ವೇದಿಕೆ ಒದಗಿಸುತ್ತದೆ. ತಮಿಳುನಾಡಿನ ಧರ್ಮಪುರಿ, ಕೃಷ್ಣಗಿರಿ, ಆಂಧ್ರಪ್ರದೇಶ, ತೆಲಂಗಾಣದ ವಿವಿಧ ಪ್ರದೇಶಗಳೂ ಸೇರಿದಂತೆ ರಾಜ್ಯದ ಕೋಲಾರ, ದೊಡ್ಡಬಳ್ಳಾಪುರ, ರಾಮನಗರದ ರೈತರು, ಮಾರಾಟಗಾರರು ಈ ಪರಿಷೆಯಲ್ಲಿ ಪಾಲ್ಗೊಳ್ಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+