• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಬೆಂಗಳೂರಿನ ಪ್ರತ್ಯೇಕ ಬಸ್‌ ಪಥಕ್ಕೆ ಪ್ಲಾಸ್ಟಿಕ್ ಡಿವೈಡರ್

|

ಬೆಂಗಳೂರು, ಡಿಸೆಂಬರ್ 4: ವಾಹನಗಳ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ಪ್ರತ್ಯೇಕ ಬಸ್ ಪಥವನ್ನು ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಆರಂಭಿಸಲಾಗಿದೆ.

ಕೆಆರ್ ಪುರಂನ ಟಿನ್ ಫ್ಯಾಕ್ಟರಿ -ಸೆಂಟ್ರಲ್ ಸಿಲ್ಕ್ ಬೋರ್ಡ್ ವರೆಗೆ ನಿರ್ಮಿಸುತ್ತಿರುವ ಪ್ರತ್ಯೇಕ ಬಸ್ ಪಥದಲ್ಲಿ ಖಾಸಗಿ ವಾಹನವನ್ನು ನಿಯಂತ್ರಿಸಲು ಪ್ಲಾಸ್ಟಿಕ್ ಡಿವೈಡರ್ ಅಳವಡಿಸಲಾಗಿದೆ.

ಪ್ರತ್ಯೇಕ ಬಸ್ ಪಥದಲ್ಲಿ ಕಾರು, ಬೈಕ್ ಸಂಚಾರ, ಇದು ಬೆಂಗಳೂರು!ಪ್ರತ್ಯೇಕ ಬಸ್ ಪಥದಲ್ಲಿ ಕಾರು, ಬೈಕ್ ಸಂಚಾರ, ಇದು ಬೆಂಗಳೂರು!

ಬಿಬಿಎಂಪಿ, ಬಿಎಂಟಿಸಿ, ಸಂಚಾರ ಪೊಲೀಸ್ , ನಗರ ಭೂ ಸಾರಿಗೆ ನಿರ್ದೇಶನಾಲಯ ಸಹಯೋಗದಲ್ಲಿ 20 ಕಿ.ಮೀ ಉದ್ದದ ಮಾರ್ಗದಲ್ಲಿ ಪ್ರತ್ಯೇಕ ಬಸ್ ಪಥ ನಿರ್ಮಿಸಲಾಗುತ್ತದೆ.

3.5 ಮೀಟರ್ ಅಗಲದ ಈ ಪ್ರತ್ಯೇಕ ಪಥವನ್ನು ಬಿಎಂಟಿಸಿ ಬಸ್‌ಗಳ ಸಂಚಾರ ಪೊಲೀಸರು , ಪಾಲಿಕೆಯ ಮಾರ್ಷಲ್‌ಗಳು ಅರಿವು ಮಾಡಿಸುತ್ತಿದ್ದಾರೆ. ಆದರೆ ಚಾಲಾಕಿ ಚಾಲಕರು ಮೊದಲು ಬೇರೆ ಕಡೆ ಹೋಗಿ ಬಳಿಕ ಬಸ್‌ ಪಥದಲ್ಲಿ ಸಂಚರಿಸುತ್ತಿದ್ದಾರೆ.

ಪ್ರತ್ಯೇಕ ಬಿಎಂಟಿಸಿ ಬಸ್ ಪಥ; ಸಾಮಾನ್ಯ ಸೂಚನೆಗಳುಪ್ರತ್ಯೇಕ ಬಿಎಂಟಿಸಿ ಬಸ್ ಪಥ; ಸಾಮಾನ್ಯ ಸೂಚನೆಗಳು

ಪ್ರತ್ಯೇಕ ಪಥದಲ್ಲಿ ಇತರೆ ವಾಹನಗಳ ಸಂಚಾರ ನಿರ್ಬಂಧಿಸಿದ್ದು, ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಲು ಅವಕಾಶವಿದೆ. ಆದರೆ, ವಾಸ್ತವದಲ್ಲಿ ಸಂಚಾರ ಪೊಲೀಸರು 20 ಕಿ.ಮೀ ಉದ್ದದ ಈ ಮಾರ್ಗದಲ್ಲಿ ತಪಾಸಣೆ ನಡೆಸುವುದು ಕಷ್ಟ.

ವಾಹನ ಸವಾರರು ಸಹ ಪೊಲೀಸರು ಇರುವ ಸ್ಥಳದಲ್ಲೇ ರಸ್ತೆಯಲ್ಲೇ ಸಂಚರಿಸಿ ಸ್ವಲ್ಪ ಮುಂದೆ ಹೋಗಿ ಪಥ ಪ್ರವೇಶಿಸುತ್ತಿದ್ದಾರೆ.

English summary
A separate bus lane system has been launched to reduce traffic congestion.Plastic Divider For Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X