Get Updates
Get notified of breaking news, exclusive insights, and must-see stories!

ಬೆಂಗಳೂರು ದಕ್ಷಿಣದಲ್ಲಿ ಮಂಗಳವಾರ ನೀರಿಲ್ಲ

ಬೆಂಗಳೂರು, ಜು.8:ಬಸವನಗುಡಿ ಜಲಾಗಾರದಿಂದ ನೀರು ಪೂರೈಕೆ ಮಾಡುತ್ತಿದ್ದ 750 ಎಂ. ಎಂ. ವ್ಯಾಸದ ಕೊಳವೆ ಮಾರ್ಗ ಜ್ಞಾನೋದಯ ಶಾಲೆಯ ಬಳಿಯಲ್ಲಿ ಸೋಮವಾರ ಒಡೆದು ಹೋಗಿದ್ದು, ಬೆಂಗಳೂರು ದಕ್ಷಿಣ ಭಾಗದಲ್ಲಿ ಮಂಗಳವಾರವೂ ನೀರು ಪೊರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ.

1974ರಲ್ಲಿ ಸ್ಥಾಪಿಸಿದ್ದ ಹಳೇಯ ಕೊಳವೆ ಮಾರ್ಗ‌ ನಾಲ್ಕು ದಿನಗಳ ಹಿಂದೆ ಒಡೆದು ಹೋಗಿದೆ. ಕೊಳವೆ ಮಾರ್ಗ‌ ಚರಂಡಿ ಕಾಲುವೆ ಕೆಳಗೆ ಹಾದು ಹೋಗಿದ್ದರಿಂದ ಸುಲಭವಾಗಿ ಯಾರ ಕಣ್ಣಿಗೆ ಬಿದ್ದಿರಲಿಲ್ಲ.

bwssb
ಈ ಭಾಗದಲ್ಲಿ ಎರಡು ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು ಕಳೆದ ನಾಲ್ಕು ದಿನಗಳಿಂದ ಜನರು ನೀರು ಬರುತ್ತಿಲ್ಲ ದೂರು ನೀಡಿದ ಹಿನ್ನಲೆಯಲ್ಲಿ ಜಲಮಂಡಳಿ ಅಧಿಕಾರಿಗಳು ಶೋಧ ಕಾರ್ಯ‌ ನಡೆಸಿದಾಗ ಪೈಪ್‌ ಒಡೆದಿರುವುದು ಗಮನಕ್ಕೆ ಬಂದಿದೆ.

ದುರಸ್ತಿ ಕಾರ್ಯವನ್ನು ಜಲ ಮಂಡಳಿ ಆರಂಭಿಸಿದೆ. ದುರಸ್ತಿ ಕಾರ್ಯಕ್ಕಾಗಿ ಮಾರ್ಗದ ನೀರು ಪೂರೈಕೆ ಸ್ಥಗಿತಗೊಳಿಸಲಾಗಿದೆ. ಕಸ್ತೂರ್ ಬಾ ನಗರ, ದೇವನಾಥ ಬಾರ್ ರಸ್ತೆ, ಚಾಮರಾಜಪೇಟೆ, ಕಲಾಸಿಪಾಳ್ಯ, ನಂಜಾಂಬ ಅಗ್ರಹಾರ, ಆಜಾದ್ ನಗರ, ರುದ್ರಪ್ಪ ಗಾರ್ಡನ್, ವಾಲ್ಮೀಕಿ ನಗರ, ರಾಘವೇಂದ್ರ ಬಡಾವಣೆ, ಮೈಸೂರು ರಸ್ತೆ, ಜೆ.ಜೆ. ನಗರ, ಪಾದರಾಯನಪುರ ಪಶ್ಚಿಮ, ಫಾರೂಕ್‌ ನಗರ, ವಿ.ಎಸ್. ಗಾರ್ಡನ್, ಛಲವಾದಿ ಪಾಳ್ಯ, ಬಿನ್ನಿಪೇಟೆ, ಮಾಗಡಿ ರಸ್ತೆ, ಗೋಪಾಲಪುರದಲ್ಲಿ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+