ಮಾಜಿ ಜೇಮ್ಸ್ ಬಾಂಡ್ 'ಪಾನ್ ' ತಿಂದು ಕಾಮಿಡಿ ಸ್ಟಾರ್ ಆಗ್ಬಿಟ್ಟ
ಹಾಲಿವುಡ್ ನ ಸ್ಟಾರ್, ಮಾಜಿ ಜೇಮ್ಸ್ ಬಾಂಡ್ ಪಿಯರ್ಸ್ ಬ್ರೋಸ್ನನ್ ಗರಂ ಆಗಿದ್ದಾರೆ.ಕ್ಯಾನ್ಸರ್ ಕಾರಕ ಉತ್ಪನ್ನದ ಬಗ್ಗೆ ಪ್ರಚಾರಕ್ಕೆ ಬಳಸಿಕೊಂಡಿದ್ದಕ್ಕೆ ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.
ಲಾಸ್ ಏಂಜಲೀಸ್, ಅಕ್ಟೋಬರ್ 21: ಹಾಲಿವುಡ್ ನ ಸ್ಟಾರ್, ಮಾಜಿ ಜೇಮ್ಸ್ ಬಾಂಡ್ ಪಿಯರ್ಸ್ ಬ್ರೋಸ್ನನ್ ಗರಂ ಆಗಿದ್ದಾರೆ. ಪಾನ್ ಮಸಾಲ ಪರ ಪ್ರಚಾರ ನಡೆಸಿ ರಾಯಭಾರಿ ಎನಿಸಿಕೊಂಡಿದ್ದ ಮಾಜಿ ಜೇಮ್ಸ್ ಬಾಂಡ್ ಅವರು ಪಾನ್ ಬಹಾರ್ ವಿರುದ್ಧ ಕಿಡಿಕಾರಿದ್ದಾರೆ.
ಪಾನ್ ಬಹಾರ್ ಜಾಹೀರಾತು ನೋಡುತ್ತಿದ್ದಂತೆ ಸಾಮಾಜಿಕ ಜಾಲ ತಾಣಗಳಲ್ಲಿ ನಗೆ ಪಟಾಲಿಗೆ ಈಡಾಗಿದ್ದು ಹಳೆ ಸಂಗತಿ. ಈಗ ಕ್ಯಾನ್ಸರ್ ಕಾರಕ ಉತ್ಪನ್ನದ ಬಗ್ಗೆ ಪ್ರಚಾರಕ್ಕೆ ಬಳಸಿಕೊಂಡಿದ್ದಕ್ಕೆ ಕಂಪನಿ ವಿರುದ್ಧ ನಟ ಪಿಯರ್ಸ್ ಬ್ರೋಸ್ನನ್ ಕೋಪ ವ್ಯಕ್ತಪಡಿಸಿದ್ದಾರೆ.

ಇದಕ್ಕಿಂತ ಹೆಚ್ಚಾಗಿ, ಪಾನ್‌ಬಾಹರ್ ಗುತ್ತಿಗೆ ನಿಯಮ ಉಲ್ಲಂಘಿಸಿ, ತಂಬಾಕು ಮಿಶ್ರಿತ ಮೌತ್ ಫ್ರೆಶ್ನರ್ ಸೇರಿದಂತೆ ಎಲ್ಲ ಉತ್ಪನ್ನಗಳಿಗೆ ಪ್ರಚಾರ ರಾಯಭಾರಿಯನ್ನಾಗಿ ತನ್ನನ್ನು ಬಳಸಿಕೊಂಡಿರುವುದು ಪಿಯರ್ಸ್ ಬ್ರೋಸ್ನನ್ ಗೆ ಕೋಪ ತಂದಿದೆ. ಈಗ ಪಾನ್ ಬಾಹರ್ ಕಂಪೆನಿ ವಿರುದ್ಧ ಕಿಡಿಕಾರಿದ್ದಾರೆ.
ಭಾರತದ ಬಗ್ಗೆ ನನಗೆ ಹೆಮ್ಮೆಯಿದೆ. ಆದರೆ, ಅಲ್ಲಿನ ಜನರಿಗೆ ಮಾರಕವಾಗುವ ಇಂಥ ಉತ್ಪನ್ನಗಳ ಪರ ನಾನು ಪ್ರಚಾರಕನಾಗಿ ಕಾಣಿಸಿಕೊಂಡಿರುವುದು ಅಪರಾಧವಾಗಿದೆ. ಇದಕ್ಕಾಗಿ ಹೃದಯಪೂರ್ವಕ ಕ್ಷಮೆ ಯಾಚಿಸುತ್ತೇನೆ ಎಂದಿದ್ದಾರೆ.
#PierceBrosnan #panbahar Name is Bond. James 'Pichaaaaaak' Bond! :P
— SidDirector (@siddarthb6) October 10, 2016
ಭಾರತದಲ್ಲಿ ತಂಬಾಕು ಉತ್ಪನ್ನಗಳು "ಕ್ಯಾನ್ಸರ್‌ಗೆ ಕಾರಣವಾಗುತ್ತದೆ" ಎಂದ ಎಚ್ಚರಿಕೆಯೊಂದಿಗೆ ಮಾರಾಟವಾಗುತ್ತವೆ.
Look what we just found in 007's car! #PanBahar #PierceBrosnan pic.twitter.com/NsXBH8GvSO
— CARS24 (@cars24india) October 10, 2016
'ನನ್ನ ಮೊದಲ ಪತ್ನಿ, ಮಗಳು ಹಾಗೂ ಅಸಂಖ್ಯಾತ ಸ್ನೇಹಿತರು ಕ್ಯಾನ್ಸರ್‌ಗೆ ಬಲಿಯಾಗಿದ್ದಾರೆ. ಮಹಿಳೆಯರ ಆರೋಗ್ಯ ಸುರಕ್ಷೆಗೆ ನಾನು ಬದ್ಧ. ಮಾನವ ಆರೋಗ್ಯ ಸುಧಾರಿಸುವ ಉದ್ದೇಶದ ಸಂಶೋಧನಾ ಕಾರ್ಯಕ್ರಮಗಳಿಗೆ ಸಂಪೂರ್ಣ ಬೆಂಬಲವಿದೆ" ಎಂದು ಸ್ಪಷ್ಟನೆ ನೀಡಿದ್ದಾರೆ.
Waiting to see #PierceBrosnan featuring in a Bhojpuri movie now😂 #PanBahar
— Your Crush (@MeinTeraHero) October 10, 2016
ಪಾನ್ ಬಾಹರ್ ಅವರು ಸಂಪೂರ್ಣ ನೈಸರ್ಗಿಕ, ತಂಬಾಕು, ಅಡಿಕೆ ಹಾಗೂ ಯಾವುದೇ ಹಾನಿಕಾರಕ ಅಂಶಗಳಿಲ್ಲದ ಉತ್ಪನ್ನಕ್ಕೆ ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಂಡಿದ್ದಾರೆ. ಆದ್ದರಿಂದ ತಕ್ಷಣವೇ ಕಂಪೆನಿಯ ಜಾಹೀರಾತುಗಳಿಂದ ತಮ್ಮನ್ನು ತೆಗೆದುಹಾಕಬೇಕು ಎಂದು 63ವರ್ಷ ವಯಸ್ಸಿನ ನಟ ಕೋರಿದ್ದಾರೆ.
-
ಮೈಸೂರು-ಮುಂಬೈ ವಂದೇ ಭಾರತ್ ರೈಲಿಗೆ ರಾಜವಂಶಸ್ಥ ಯದುವೀರ ಒಡೆಯರ್ ಒತ್ತಾಯ -
Copra: ಹೊಸ ದಾಖಲೆ ನಿರ್ಮಿಸಿದ ತಿಪಟೂರು ಉಂಡೆ ಕೊಬ್ಬರಿ, ಕ್ವಿಂಟಾಲ್ಗೆ 38,000 ರೂ. -
Review: ವಿನ್ಯಾಸ, ಗುಣಮಟ್ಟ, ಡಿಸ್ಪ್ಲೆ, ಕ್ಯಾಮೆರಾ ಎಲ್ಲದರಲ್ಲೂ ಬೆಸ್ಟ್ OnePlus Nord 6 ಫೋನ್ -
April 14 Horoscope: 12 ರಾಶಿಗಳಿಗೆ ಇಂದು ಈ ರಾಶಿಯವರ ಕೈ ಹಿಡಿಯುವುದು ಅದೃಷ್ಟ:ನಿತ್ಯ ಭವಿಷ್ಯದ ಸಂಪೂರ್ಣ ವಿವರ -
ಬೆಂಗಳೂರು ಟ್ರಾಫಿಕ್ ಪೊಲೀಸ್ ಜೊತೆ ಹಿಂದಿ ಯುವಕನ ಕಿರಿಕ್, ಪ್ರಶ್ನಿಸಿದ ಕನ್ನಡಿಗನಿಗೆ ನೀವೆಲ್ಲ ಜಾಬ್ಲೆಸ್ ಎಂದು ಅವಾಜ್ -
ಮಗನ ಜೊತೆಯಲ್ಲೇ ದ್ವಿತೀಯ PUC ಪರೀಕ್ಷೆ ಬರೆದು ಪಾಸ್ ಆದ 57 ವರ್ಷದ ತಂದೆ: 40 ವರ್ಷದ ಹಿಂದಿನ ಕನಸು ನನಸು -
Karna Serial: ಕರ್ಣ ಸೀರಿಯಲ್ಗೆ ಎಂಟ್ರಿ ಕೊಟ್ಟ ನಟ ಗಗನ್ ಚಿನ್ನಪ್ಪ, ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ -
ದ್ವಿತೀಯ PUC ಫಲಿತಾಂಶ: ಕನ್ನಡ ಮಾಧ್ಯಮಕ್ಕಿಂತ ಇಂಗ್ಲಿಷ್ ಮಾಧ್ಯಮದವರದ್ದೇ ಮೇಲುಗೈ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
Bengaluru: 'ಮುಕ್ಕಾಲ ಮುಕ್ಕಾಬುಲ' ಹಾಡಿಗೆ ಸಖತ್ ಹೆಜ್ಜೆ ಹಾಕಿದ ಗಣಿತ ಪ್ರೊಫೆಸರ್; ಡಾನ್ಸ್ ವಿಡಿಯೋ ಭಾರೀ Viral -
Naseer Ahmed: ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಿಂದ ನಸೀರ್ ಅಹ್ಮದ್ ವಜಾ; ಕಾಂಗ್ರೆಸ್ನಲ್ಲಿ ಆಂತರಿಕ ಭಿನ್ನಮತ ಸ್ಫೋಟ -
ದ್ವಿತೀಯ PUC ಪರೀಕ್ಷೆ-2: ಅನುತ್ತೀರ್ಣರಾದ ವಿದ್ಯಾರ್ಥಿಗಳಿಗಾಗಿ ಸರ್ಕಾರಿ ಕಾಲೇಜುಗಳಲ್ಲಿ ವಿಶೇಷ ತರಗತಿಗಳು ಆರಂಭ












Click it and Unblock the Notifications