ಭೌತ ವಿಜ್ಞಾನಿ ಪ್ರೊ. ಶ್ರೀಕಾಂತ ಶಾಸ್ತ್ರಿ ಅವರಿಂದ ವಿಶೇಷ ಉಪನ್ಯಾಸ
ಬೆಂಗಳೂರು, ಜೂನ್ 7: ಲೋಕಚರಿತ ಸಮುದಾಯ ಕೂಟವು ಭೌತ ವಿಜ್ಞಾನಿ ಪ್ರೊ. ಶ್ರೀಕಾಂತ ಶಾಸ್ತ್ರಿ ಅವರಿಂದ ವಿಶೇಷ ಉಪನ್ಯಾಸವನ್ನು ಜೂನ್ 10ರಂದು ಬೆಳಗ್ಗೆ 10ಗಂಟೆಗೆ ಆಯೋಜಿಸಿದೆ.
ಉಪನ್ಯಾಸವು ಮಲ್ಲೇಶ್ವರದ 15 ನೇ ಅಡ್ಡರಸ್ತೆಯಲ್ಲಿರುವ ಎಂಇಎಸ್ ಕಾಲೇಜಿನಲ್ಲಿ ನಡೆಯಲಿದೆ. ಪ್ರೊ ಶ್ರೀಕಾಂತ ಶಾಸ್ತ್ರಿ ಅವರು ವಿಜ್ಞಾನ, ಸಮಾಜ, ಭಾಷೆ ಕುರಿತು ಸಂವಾದ ನಡೆಸಿಕೊಡಲಿದ್ದಾರೆ. ಭೌತಶಾಸ್ತ್ರವು ಒಂದು ನೈಸರ್ಗಿಕ ವಿಜ್ಞಾನದ ಬಗೆ. ದ್ರವ್ಯ ನಡತೆ, ಗುಣಲಕ್ಷಣ ಮತ್ತು ವ್ಯವಹಾರದ ಬಗ್ಗೆ ಸಂಶೋಧನೆ ಮಾಡುವ ವಿಜ್ಞಾನವಾಗಿದೆ.

ಭೌತಶಾಸ್ತ್ರದಲ್ಲಿ ಬರುವ ಉಪವರ್ಗಗಳಾದ ಅಣು ವಿಜ್ಞಾನ, ಅಣುಶಕ್ತಿ, ದ್ಯುತಿ ವಿಜ್ಞಾನ, ಕಣ ಭೌತಶಾಸ್ತ್ರ, ಖಭೌತಶಾಸ್ತ್ರ ಹೀಗೆ ವಿವಿಧ ವರ್ಗಗಳ ಕುರಿತು ಮಾಹಿತಿ ಪಡೆಯಬಹುದಾಗಿದೆ.












Click it and Unblock the Notifications