ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕನ್ನಡ ಮಾಧ್ಯಮದಲ್ಲಿ ಇಂಜಿಯರಿಂಗ್ ಶಿಕ್ಷಣಕ್ಕೆ ಅನುಮತಿ; ಸಿಎಂ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ಅಕ್ಟೋಬರ್ 13: "ಇಂಜಿಯರಿಂಗ್​ ಕಾಲೇಜುಗಳಲ್ಲಿ 4 ವರ್ಷದ ಬಿ.ಎಸ್ಸಿ ಆನರ್ಸ್ ಆರಂಭಿಸಲು ಅನುಮತಿ ಪತ್ರ ನೀಡಲಾಗಿದೆ. ನೂತನ ಶಿಕ್ಷಣ ಪದ್ಧತಿ (ಎನ್ಇಪಿ) ಅನುಸಾರ ಇಂಜಿನಿಯರಿಂಗ್ ಶಿಕ್ಷಣ ಅನುಷ್ಠಾನ ಮಾಡಲಾಗುವುದು," ಎಂದು ವಿಧಾನಸೌಧದ ಬ್ಯಾಂಕ್ವೆಟ್​ ಹಾಲ್​ನಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

"ಕನ್ನಡ ಮಾಧ್ಯಮದಲ್ಲಿ ಇಂಜಿನಿಯರಿಂಗ್ ಶಿಕ್ಷಣಕ್ಕೆ ಒಪ್ಪಿಗೆ ಸೂಚಿಸಲಾಗಿದ್ದು, ಈ ಸಂಬಂಧ ನಾಲ್ಕು ಕಾಲೇಜುಗಳಿಗೆ ಅನುಮತಿ ಪತ್ರವನ್ನು ನೀಡಲಾಗಿದೆ. ಕನ್ನಡ ಭಾಷೆಯಲ್ಲಿ ಇಂಜಿನಿಯರಿಂಗ್ ಸಿಲೆಬಸ್ ಬಿಡುಗಡೆ ಮಾಡಿರುವುದು ಹೊಸ ಅಧ್ಯಾಯವಾಗಿದೆ. ಇದೊಂದು ಐತಿಹಾಸಿಕ ದಿನ," ಎಂದು ಸಿಎಂ ಬಸವರಾಜ ಬೊಮ್ಮಾಯಿ ಸಂತಸ ಹಂಚಿಕೊಂಡರು.

"ಅತ್ಯಂತ ಪ್ರಗತಿಪರವಾಗಿ ಎನ್​ಇಪಿ ಜಾರಿಗೊಳಿಸುವಲ್ಲಿ ಯಶಸ್ವಿ ಆಗಿದ್ದೇವೆ. ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥ್​​ ನಾರಾಯಣ ಯಶಸ್ವಿಯಾಗಿದ್ದಾರೆ. ಎನ್​ಇಪಿ ಅನುಸಾರ ಇಂಜಿನಿಯರಿಂಗ್ ಶಿಕ್ಷಣ ಅನುಷ್ಠಾನ ಮಾಡುತ್ತೇವೆ ಎಂದು ಬೊಮ್ಮಾಯಿ ಮಾಹಿತಿ ನೀಡಿದರು. ರಾಷ್ಟ್ರೀಯ ಶಿಕ್ಷಣ ನೀತಿಯಿಂದ ದೊಡ್ಡ ಬದಲಾವಣೆ ಆಗಲಿದೆ. ಕರ್ನಾಟಕದ ತಾಂತ್ರಿಕ ಶಿಕ್ಷಣದಲ್ಲಿ ದೊಡ್ಡ ಬದಲಾವಣೆ ಆಗುತ್ತದೆ. ಇಷ್ಟು ದೊಡ್ಡ ಪ್ರಮಾಣದ ಬದಲಾವಣೆ ಯಾವತ್ತೂ ಆಗಿಲ್ಲ," ಎಂದು ಅವರು ಹೇಳಿದರು.

Permission For Engineering Education In Kannada Medium; CM Basavaraj Bommai

"ಉನ್ನತ ಶಿಕ್ಷಣದಲ್ಲಿ ದೊಡ್ಡ ಪ್ರಮಾಣದಲ್ಲಿ ತಯಾರಿ ಮಾಡಿ ರಾಷ್ಟ್ರೀಯ ಶಿಕ್ಷಣ ನೀತಿಗೊಳಪಡಿಸಲಾಗುತ್ತಿದೆ. ನಾನು ಕೂಡ ಇಂಜಿನಿಯರಿಂಗ್ ವಿದ್ಯಾರ್ಥಿ ಆಗಿದ್ದೆ. ನನ್ನ ವಿಷಯದ ಬಗ್ಗೆ ಹೊಸತನ ಕೊಡುವ ಪ್ರಯತ್ನ ಮಾಡಲಾಗಿದೆ. ಹೊಸತನ ಕೊಡುವ ಪ್ರಯತ್ನವನ್ನು ನಾನು ಉದ್ಘಾಟಿಸಿದ್ದೇನೆ. ನಾನೇ ಉದ್ಘಾಟನೆ ಮಾಡಿದ್ದು ತುಂಬಾ ಖುಷಿ ತಂದಿದೆ. ಬದಲಾವಣೆಗೆ ವಿದ್ಯಾರ್ಥಿಗಳು ತಯಾರಿ ಮಾಡಿಕೊಳ್ಳಬೇಕು," ಎಂದು ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.

"ಮೊದಲು ಕಲಿಸುವ ಗುರುಗಳ ಮನಸ್ಥಿತಿ ಬದಲಾವಣೆಯಾಗಬೇಕು. ಬಳಿಕ ವಿದ್ಯಾರ್ಥಿಗಳ ಮನಸ್ಥಿತಿ ಬದಲಾವಣೆಯಾಗಲಿದೆ. ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ನಂಬಿಕೆ ಇರಬೇಕು. ಹೊಸ ಶಿಕ್ಷಣ ನೀತಿ ಬರಬೇಕು. ಈಗ ಪರ್ಸೆಂಟೇಜ್ ಇದೆ, ಇದು ಪರ್ಸೆಂಟೈಲ್ ಆಗಲಿ. ವಿರೋಧ ಪಕ್ಷಗಳು ಎನ್ಇಪಿಯನ್ನು ವಿರೋಧಿಸುತ್ತಿವೆ. ಆದರೆ ನಮ್ಮ ಸರ್ಕಾರ ಗಟ್ಟಿ ನಿಲುವಿನಿಂದ ಜಾರಿಗೆ ತರುತ್ತಿದೆ," ಎಂದು ಬೊಮ್ಮಾಯಿ ತಿಳಿಸಿದರು.

"ಎನ್​ಇಪಿ ಅನುಸಾರ ಇಂಜಿನಿಯರಿಂಗ್ ಶಿಕ್ಷಣ ಅನುಷ್ಠಾನ ಕಾರ್ಯಕ್ರಮದಲ್ಲಿ ಡಾ. ಅಶ್ವತ್ಥ್​ ನಾರಾಯಣ ಮಾತನಾಡಿದ್ದಾರೆ. 66 ಸಂಸ್ಥೆಗಳಿಗೆ ಬಿ.ಎಸ್ಸಿ ಆನರ್ಸ್ ಆರಂಭಿಸಲು ಒಪ್ಪಿಗೆ ನೀಡಲಾಗಿದೆ. ಉನ್ನತ ಶಿಕ್ಷಣದಲ್ಲಿ ಗುಣಮಟ್ಟ ಹೆಚ್ಚಳಕ್ಕೆ ಪ್ರಯತ್ನ ಮಾಡಲಾಗುತ್ತಿದೆ. ರಾಷ್ಟ್ರೀಯ ಶಿಕ್ಷಣ ನೀತಿ ಮೂಲಕ ಪ್ರಯತ್ನಿಸಲಾಗುತ್ತದೆ. ಎನ್​ಇಪಿಯನ್ನು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಅಳವಡಿಸಿ, ಉತ್ತಮವಾಗಿ ಸಂಸ್ಥೆಗಳನ್ನು ಬೆಳೆಸುವ ಪ್ರಯತ್ನ ನಡೆಸಲಾಗುತ್ತಿದೆ. ಈ ಕಾರ್ಯಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಲಿದೆ," ಎಂದು ಭರವಸೆ ನೀಡಿದ್ದಾರೆ.

Permission For Engineering Education In Kannada Medium; CM Basavaraj Bommai

ಸಂಶೋಧನೆಗಳು ಹೆಚ್ಚಾಗಬೇಕು ಎಂದ ಆರೋಗ್ಯ ಸಚಿವ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೋಮವಾರ ಕಾರ್ಯಕ್ರಮವೊಂದರಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಅಂಶಕ್ಕೆ ಒತ್ತು ನೀಡಿ ಮಾತನಾಡಿದ ಬೆನ್ನಲ್ಲೇ, ಮಂಗಳವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಸಹ ವಿಶ್ವವಿದ್ಯಾಲಯಗಳು ಸಂಶೋಧನೆ ಹೆಚ್ಚು ಮಾಡಬೇಕಾದ ಅಗತ್ಯದ ಬಗ್ಗೆ ಮಾತನಾಡಿದ್ದಾರೆ.

ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯಲ್ಲಿ ಹೊಸ ಡಿಜಿಟಲ್ ಕಲಿಕೆ ವ್ಯವಸ್ಥೆಯನ್ನು ಉದ್ಘಾಟಿಸಿ ಮಾತನಾಡಿದ ಸಚಿವ ಸುಧಾಕರ್, "ನಮಗಿವತ್ತು ಕೋವಿಡ್ ವಿರುದ್ಧ ಲಸಿಕೆ ಕೊಟ್ಟಿರುವುದು ಆಕ್ಸ್ಫರ್ಡ್ ವಿಶ್ವವಿದ್ಯಾಲಯ. ಇದು ಸಂಶೋಧನೆಯ ಮಹತ್ವ ಹೇಳುತ್ತದೆ. ವೈದ್ಯಕೀಯ ಕಾಲೇಜುಗಳು ಬಹಳಷ್ಟಿವೆ. ಆದರೆ ಗುಣಮಟ್ಟದ ಬೋಧನೆ ಮತ್ತು ಕಲಿಕೆಗೆ ಪ್ರಾಶಸ್ತ್ಯ ಸಿಗಬೇಕು. ವೈದ್ಯರಾಗಬೇಕು ಎಂದು ಹೇಳುವವರು ಬಹಳ ಜನ ಸಿಗುತ್ತಾರೆ, ಆದರೆ ವೈದ್ಯಕೀಯ ಸಂಶೋಧನೆಗಳಲ್ಲಿ ತೊಡಗಿಕೊಳ್ಳುವವರು ಕಡಿಮೆ. ಇದು ಬದಲಾಗಬೇಕಿದೆ," ಎಂದರು.

"ಸರ್ಕಾರಿ ಆರೋಗ್ಯ ಸಂಸ್ಥೆಗಳೆಲ್ಲ ಜಯದೇವ ರೀತಿಯಲ್ಲಿ ಸೇವಾಕ್ಷಮತೆ ರೂಢಿಸಿಕೊಳ್ಳಬೇಕೆಂದು ಎಂದು ಸಚಿವರು, ಜಿಲ್ಲಾ ಹಂತಗಳಲ್ಲಿ ಆರೋಗ್ಯ ವ್ಯವಸ್ಥೆಗಳ ಸುಧಾರಣೆಗೆ ರಾಜ್ಯ ಸರ್ಕಾರ ಬದ್ಧವಾಗಿರುವುದಾಗಿ," ಹೇಳಿದ್ದಾರೆ.

Recommended Video

2-18 ವರ್ಷದ ಮಕ್ಕಳಿಗೆ ಕೊರೊನಾ ಲಸಿಕೆ:ಇದು ಎಷ್ಟು ಸೇಫ್ | Oneindia Kannada

English summary
Four colleges have been granted permission for engineering education in the Kannada media, Chief Minister Basavaraj Bommai said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X