Gold Price: ಇಂದು ಚಿನ್ನ-ಬೆಳ್ಳಿ ದರದಲ್ಲಿ ಭಾರೀ ಏರಿಕೆ: ಒಂದೇ ದಿನಕ್ಕೆ ಬೆಳ್ಳಿ 15,000 ರೂ ಹೆಚ್ಚಳ
Gold Silver Price Hike Today: ಬೆಂಗಳೂರು ಸೇರಿದಂತೆ ದೇಶ-ವಿದೇಶಿ ಮಾರುಕಟ್ಟೆಯಲ್ಲಿ ವಾರದಿಂದಲೂ ಸತತವಾಗಿ ಇಳಿಕೆ ಕಾಣುತ್ತಿದ್ದ ಚಿನ್ನ ಮತ್ತು ಬೆಳ್ಳಿಯ ಬೆಲೆ ಒಂದೇ ದಿನಕ್ಕೆ ಗಗನಕ್ಕೇರಿದೆ. ಹೌದು, ಇಂದು ಮಂಗಳವಾರ ಬೆಳಗ್ಗೆ 11 ಗಂಟೆ ನಂತರ ಚಿನ್ನ-ಬೆಳ್ಳಿ ದರದಲ್ಲಿ ಭರ್ಜರಿ ಏರಿಕೆ ಕಂಡಿದೆ. ಈ ಲೋಹಗಳನ್ನು ಖರೀದಿಸಲು ಮತ್ತೆ ಹಿಂದೆ ಮುಂದೆ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಬೆಳ್ಳಿ ದರ ಬರೋಬ್ಬರಿ 15000 ರೂ. ಏರಿಕೆ!
ಮೇ 9ರಿಂದ ಸತತ ಮೂರು ದಿನಗಳ ಕಾಲ ಯಥಾ ಸ್ಥಿತಿಯಲ್ಲಿದ್ದ ಬೆಳ್ಳಿಯ ಬೆಲೆಯಲ್ಲಿ ಗಮನಾರ್ಹವಾಗಿ ಹೆಚ್ಚಾಗಿದೆ. ಮೂರು ದಿನಗಳಿಂದ 2,75,00 ರೂಪಾಯಿಗೆ ಸ್ಥಿರವಾಗಿದ್ದ ಬೆಳ್ಳಿಯು ಇಂದು ಮಂಗಳವಾರಕ್ಕೆ (ಮೇ 12) ಬರೋಬ್ಬರಿ 15,000 ರೂಪಾಯಿ ದಾಖಲೆ ಹೆಚ್ಚಳ ಕಂಡಿದೆ. ಈ ಮೂಲಕ ಗ್ರಾಹಕರಿಗೆ ಆಘಾತ ನೀಡಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆ ಕಾಣುವ ಸಾಧ್ಯತೆಯೂ ಇದೆ.

ಪ್ರಧಾನಿ ನರೇಂದ್ರ ಮೋದಿಯವರು ಮುಂದಿನ ಒಂದು ವರ್ಷ ಚಿನ್ನ ಖರೀದಿಸದಂತೆ ಕರೆ ನೀಡಿದ ಬೆನ್ನಲ್ಲೆ ಸಾಕಷ್ಟು ಪರ ವಿರೋಧ ಚರ್ಚೆಗಳ ಶುರುವಾಗಿದ್ದವು. ಇದರ ನಡುವೆ ಈ ಎರಡು ಲೋಹಗಳ ಮೌಲ್ಯ ಮಧ್ಯಮ ವರ್ಗದವರ ಕೈಗೆಟುಕದಂತೆ ಗಗನಕ್ಕೇರಿದೆ. ಈ ಕಾರಣದಿಂದಲೂ ಭಾರತೀಯ ಗ್ರಾಹಕರು ಚಿನ್ನ ಖರೀದಿಗೆ ಹಿಂದೇಟು ಹಾಕುವ ಸಾಧ್ಯತೆ ಇದೆ. ಮದುವೆ, ಇನ್ನಿತರ ಶುಭ ಸಮಾರಂಭಗಳಿಗೆ ಚಿನ್ನ ಕೊಳ್ಳಲು ಯೋಜಿಸಿದವರಿಗೆ ಇಂದಿನ ದರ ಏರಿಕೆ ಶಾಕ್ ನೀಡಿದೆ.
ಇಂದಿನ ಚಿನ್ನದ ಬೆಲೆಯಲ್ಲಿ ಹೆಚ್ಚಳ
* ಇಂದು ಮಧ್ಯಾಹ್ನ ಲೇಟೆಸ್ಟ್ ಅಪ್ಡೇಟ್ ದರದ ಪ್ರಕಾರ, 10 ಗ್ರಾಂ 22ಕ್ಯಾರಟ್ ಚಿನ್ನದ ಬೆಲೆಯು 500 ರೂಪಾಯಿ ಹೆಚ್ಚಾಗಿದ್ದು, ದರ 1,41,150 ರೂಪಾಯಿ ಮುಟ್ಟಿದೆ.
* ಇನ್ನೂ 24 ಕ್ಯಾರಟ್ ಚಿನ್ನದ 10 ಗ್ರಾಂ ದರವು ಬರೋಬ್ಬರಿ 540 ರೂಪಾಯಿ ಏರಿಕೆ ಆಗುವ ಮೂಲಕ ಒಟ್ಟು ದರ 1,53,980 ರೂಪಾಯಿ ತಲುಪಿದೆ.
* ಅದೇ ರೀತಿ 18 ಕ್ಯಾರಟ್ ಚಿನ್ನದ ಹತ್ತು ಗ್ರಾಂ ಬೆಲೆಯು 410 ರೂಪಾಯಿಗೆ ಹೆಚ್ಚಳವಾಗಿದ್ದು ಅದರ ಹತ್ತು ಗ್ರಾಂನ ಒಟ್ಟು ದರವು 1,15,490 ರೂಪಾಯಿ ಮುಟ್ಟಿದೆ ಎಂದು ಮಾರುಕಟ್ಟೆ ಮೂಲಗಳು ಮಾಹಿತಿ ನೀಡಿವೆ.
ವಿವಿಧ ನಗರಗಳಲ್ಲಿ ಎಷ್ಟಿದೆ 22k ಚಿನ್ನದ ಮೌಲ್ಯ,ಪಟ್ಟಿ
ಬೆಂಗಳೂರು : 14,115 ರೂಪಾಯಿ
ಜೈಪುರ : 14,130 ರೂಪಾಯಿ
ಲಕ್ನೋ : 14,130 ರೂಪಾಯಿ
ಕೊಯಮತ್ತೂರು : 14,330 ರೂಪಾಯಿ
ಮುಧುರೈ : 14,330 ರೂಪಾಯಿ
ವಿಜಯವಾಡ : 14,115 ರೂಪಾಯಿ
ಪಾಟ್ನಾ : 14,120 ರೂಪಾಯಿ
ನಾಗಪುರ : 14,115 ರೂಪಾಯಿ
ಚತ್ತೀಸ್‌ಗಢ : 14,130 ರೂಪಾಯಿ
ಸೂರತ್ : 14,120 ರೂಪಾಯಿ













Click it and Unblock the Notifications