ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಿನ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಕಾರ್ಯ ಚುರುಕು

|
Google Oneindia Kannada News

ಬೆಂಗಳೂರು, ಡಿಸೆಂಬರ್ 7: ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಕಾರ್ಯ ಚುರುಕಾಗಿ ನಡೆಯುತ್ತಿದ್ದು, ಪೆರಿಫೆರಲ್ ರಿಂಗ್ ರಸ್ತೆಗೆ ಫೆಬ್ರವರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ.
ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿರುವ ಹಿನ್ನೆಲೆಯಲ್ಲಿ ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣ ಮಾಡಲು ಸರ್ಕಾರ ಸಮ್ಮತಿ ಸೂಚಿಸಿದೆ.

ಇತ್ತೀಚೆಗೆ ನಡೆದ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದೆ ಬಿಡಿಎಯಿಂದ ಅನುಷ್ಠಾನ ಸಂಬಂಧ ಅನೇಕ ಕಾರ್ಯಗಳು ಆರಂಭಗೊಂಡಿವೆ. ಮುಖ್ಯಮಂತ್ರಿಗಳು ಕೂಡ ಯೋಜನೆಯನ್ನು ತ್ವರಿತವಾಗಿ ಕಾರ್ಯರೂಪಕ್ಕೆ ತರುವಂತೆ ಒತ್ತಡ ಹೇರುತ್ತಿದ್ದಾರೆ ಫೆಬ್ರವರಿಯ ಎರಡನೇ ವಾರದೊಳಗೆ ಟೆಂಡರ್ ಕರೆಯಲಾಗುತ್ತಿದೆ.

ಯೋಜನೆಯನ್ನು ಜಾರಿಗೊಳಿಸಲು ಈಗಾಗಲೇ ಸ್ವಾಧೀನ ಪಡಿಸಿಕೊಂಡಿರುವ ಜಮೀನಿಗೆ ಭೂಮಾಲೀಕರಿಗೆ ಪರಿಹಾರ ನೀಡಬೇಕು. ಈಗಾಗಲೇ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪ್ರತಿಯಾಗಿ ಎರಡು ಪಟ್ಟು ಟಿಡಿಆರ್ ನೀಡುವುದಾಗಿ ಬಿಡಿಎ ಈಗಾಗಲೇ ತಿಳಿಸಿದೆ.

ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು ಪೆರಿಫೆರಲ್ ರಿಂಗ್ ರಸ್ತೆ ನೈಸ್‌ ರಸ್ತೆಗೆ ಸೇರಲು 300 ಎಕರೆ ಭೂಮಿ ಬೇಕು

ಇದಕ್ಕೆ ಬೆಳಗಾವಿ ಅಧಿವೇಶನ ಬಳಿಕ ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ ಅವರ ಬಳಿ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ.ಪಿಆರ್‌ಆರ್‌ಗೆ ಈ ಹಿಂದೆ ಡಿಪಿಆರ್ ಸಿದ್ಧ ಪಡಿಸಿದ್ದ ಸ್ಟೂಪ್ ಕಂಪನಿಗೆ ಮರು ಸರ್ವೆ ನಡೆಸಲು ನಿರ್ದೇಶನ ನೀಡಲಾಗಿದೆ.

 ಫೆಬ್ರವರಿಯಲ್ಲಿ ಜಾಗತಿಕ ಟೆಂಡರ್

ಫೆಬ್ರವರಿಯಲ್ಲಿ ಜಾಗತಿಕ ಟೆಂಡರ್

ಪೆರಿಫೆರಲ್ ರಸ್ತೆ ನಿರ್ಮಾಣ ಮಾಡಲು ಫೆಬ್ರವರಿಯಲ್ಲಿ ಟೆಂಡರ್ ಕರೆಯಲಾಗುತ್ತಿದೆ. ಸ್ವಾಧೀನಪಡಿಸಿಕೊಂಡಿರುವ 1810 ಎಕರೆ ಜಮೀನಿನ ಸ್ಥಿತಿಗತಿ, ಅಷ್ಟ ಪಥ ರಸ್ತೆ ಹಾಗೂ ಮೆಟ್ರೋ ಮಾರ್ಗಕ್ಕೆ ನಿಖರ ಜಮೀನು ಗುರುತು ಮಾಡಲಾಗುತ್ತಿದೆ.

ಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆಬೆಂಗಳೂರು ಸುತ್ತಾ 65 ಕಿ.ಮೀ. ಪೆರಿಫೆರಲ್ ರಸ್ತೆ ಯೋಜನೆಗೆ ಒಪ್ಪಿಗೆ

ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ವೆಚ್ಚವೆಷ್ಟು?

ಪೆರಿಫೆರಲ್ ರಸ್ತೆ ನಿರ್ಮಾಣಕ್ಕೆ ವೆಚ್ಚವೆಷ್ಟು?

ಬೆಂಗಳೂರು ಸುತ್ತ ಪೆರಿಫೆರಲ್ ಡಿಂಗ್ ರಸ್ತೆ ನಿರ್ಮಾಣಕ್ಕೆ 17 ಸಾವಿರ ಕೋಟಿ ವೆಚ್ಚ ಮಾಡಲಾಗುತ್ತದೆ. 75 ಮೀಟರ್ ಅಗಲದ ರಸ್ತೆ ನಿರ್ಮಾಣವಾಗುತ್ತದೆ. 1910 ಎಕರೆ ಜಮೀನನ್ನು ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗುತ್ತದೆ. ಇದಕ್ಕೆ ಸುಮಾರು 4500 ಕೋಟಿ ವೆಚ್ಚವಾಗಲಿದೆ. ಟೋಲ್ ಮೂಲಕ ಆದಾಯವನ್ನು ಸಂಗ್ರಹ ಮಾಡಲಾಗುತ್ತದೆ.

ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫೆರಲ್ ರಿಂಗ್ ರಸ್ತೆ!ತುಮಕೂರು ರಸ್ತೆಯಿಂದ ಹೊಸೂರು ರಸ್ತೆವರೆಗೆ ಪೆರಿಫೆರಲ್ ರಿಂಗ್ ರಸ್ತೆ!

ಬೆಂಗಳೂರು ನಗರದ ಸುತ್ತ ರಸ್ತೆ ನಿರ್ಮಾಣ

ಬೆಂಗಳೂರು ನಗರದ ಸುತ್ತ ರಸ್ತೆ ನಿರ್ಮಾಣ

ಬೆಂಗಳೂರು ನಗರದ ಸುತ್ತ ರಸ್ತೆ ನಿರ್ಮಾಣವಾಗಲಿದೆ. ಈಗಿರುವ ನೈಸ್ ರಸ್ತೆ ತುಮಕೂರು ರಸ್ತೆ-ಮಾಗಡಿ ರಸ್ತೆ-ಮೈಸೂರು ರಸ್ತೆ-ಹೊಸೂರು ರಸ್ತೆಗೆ ಸಂಪರ್ಕ ಕಲ್ಪಿಸುತ್ತಿದೆ. ಈಗ ನಿರ್ಮಾಣವಾಗಲಿರುವ ಫೆರಿಫೆರಲ್ ರಿಂಗ್ ರಸ್ತೆ ಹೊಸೂರು ರಸ್ತೆ-ಹಳೆ ಮದ್ರಾಸ್ ರಸ್ತೆ-ತುಮಕೂರು ರಸ್ತೆಗೆ ಸಂಪರ್ಕವನ್ನು ಕಲ್ಪಿಸಲಿದೆ. ಇದರಿಂದಾಗಿ ಬೆಂಗಳೂರು ನಗರದ ಸುತ್ತಲೂ ರಿಂಗ್ ರಸ್ತೆ ನಿರ್ಮಾಣವಾಗಲಿದೆ.

ಎಷ್ಟು ವರ್ಷ ಹಿಂದಿನ ಯೋಜನೆ

ಎಷ್ಟು ವರ್ಷ ಹಿಂದಿನ ಯೋಜನೆ

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಆಡಳಿತವಿದ್ದಾಗ ಫೆರಿಫೆರಲ್ ರಿಂಗ್ ರಸ್ತೆ ನಿರ್ಮಾಣದ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು. ಆಗ ಯೋಜನೆಗೆ ಸುಮಾರು 3,800 ಕೋಟಿ ವೆಚ್ಚ ಆಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ, ಪ್ರಸ್ತಾವನೆಗೆ ಆಗ ಒಪ್ಪಿಗೆ ಸಿಕ್ಕಿರಲಿಲ್ಲ. 12 ವರ್ಷಗಳ ಬಳಿಕ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾದ ಬಳಿಕ ಪ್ರಸ್ತಾವನೆಯನ್ನು ಸಂಪುಟದ ಮುಂದಿಟ್ಟು ಒಪ್ಪಿಗೆ ಪಡೆಯಲಾಗಿದೆ.

English summary
Finally much awaited Peripheral ring road has gotsome real push. The BDA floated tender to get consultants on board to prepare a feasibility report and a detailed project.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X