ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿ 18ರಂದು ಪ್ರತಿಷ್ಠಿತ ಆಸ್ಪತ್ರೆಯ ಸಾಮಾಜಿಕ ಕಳಕಳಿಯ ವಾಕಥಾನ್

ನಗರದ ಪೀಪಲ್ ಟ್ರೀ ಫೌಂಡೇಶನ್ ಆಸ್ಪತ್ರೆ, ಡಿಸೆಂಬರ್ 18 ರಂದು, ವಾಕಥಾನ್ ಮೂಲಕ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆಯ ಯೋಜನೆಯನ್ನು ವಿಸ್ತರಿಸಲು ದಾನಿಗಳ ಸಹಾಯವನ್ನು ಕೋರಿದೆ.

By Balaraj
|
Google Oneindia Kannada News

ಬೆಂಗಳೂರು, ಡಿ 13: ನಗರದ ಪ್ರತಿಷ್ಠಿತ ಆಸ್ಪತ್ರೆಗಳಲ್ಲೊಂದಾದ ಪೀಪಲ್ ಟ್ರೀ ಫೌಂಡೇಶನ್, ಇದೇ ಭಾನುವಾರ (ಡಿ 18) ಚೌಡಯ್ಯ ಮೆಮೋರಿಯಲ್ ಹಾಲ್ ನಲ್ಲಿ ಖ್ಯಾತ ವಾಯ್ಲಿನ್ ವಾದಕ ಅನೀಶ್ ವಿದ್ಯಾಶಂಕರ್ ಅವರೊಂದಿಗೆ ವಾಕಥಾನ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಪೀಪಲ್ ಟ್ರೀ ಫೌಂಡೇಶನ್ ಆಸ್ಪತ್ರೆ, ಈ ವರ್ಷಾರಂಭದಲ್ಲಿ 'ಪೀಪಲ್ ಟಚ್ - 2' ಯೋಜನೆಯಡಿ, ಆರ್ಥಿಕವಾಗಿ ಹಿಂದುಳಿದ 300 ರೋಗಿಗಳಿಗೆ ಸಂಪೂರ್ಣ ಉಚಿತ ಶಸ್ತ್ರಚಿಕಿತ್ಸೆಯ ಯೋಜನೆಯನ್ನು ಹಾಕಿಕೊಂಡಿತ್ತು.

ಅದರಲ್ಲಿ ಇದುವರೆಗೆ ಅರವತ್ತಕ್ಕೂ ಹೆಚ್ಚು ಯಶಸ್ವೀ ಶಸ್ತ್ರಚಿಕಿತ್ಸೆ ನಡೆಸಿರುವ ಆಸ್ಪತ್ರೆ, ಈ ಯೋಜನೆಯನ್ನು ವಿಸ್ತರಿಸಲು ಡಿಸೆಂಬರ್ 18 ರಂದು, ವಾಕಥಾನ್ ಮೂಲಕ ದಾನಿಗಳ ಸಹಾಯವನ್ನು ಕೋರಿದೆ.

People Tree Foundation organizing Fund raising programme on Dec 18

ದಾನಿಗಳು ರೂಪಾಯಿ 1000, 2500, 5000 ಮತ್ತು 25000 ಸಾವಿರ ಮೌಲ್ಯದ ಪಾಸ್ ಅನ್ನು ಪಡೆದು ಸಾಮಾಜಿಕ ಕಳಕಳಿಯ ಈ ಯೋಜನೆಗೆ ಸಹಕರಿಸಬೇಕಾಗಿ ಆಸ್ಪತ್ರೆ ಮನವಿ ಮಾಡಿದೆ. ಮತ್ತು 80ಜಿಯಡಿ ಆದಾಯ ತೆರಿಗೆಯಿಂದ ವಿನಾಯತಿ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಅನೀಶ್ ವಿದ್ಯಾಶಂಕರ್ ಅವರ 'ನಿನಾದ' ವಾಯ್ಲಿನ್ ಕಾರ್ಯಕ್ರಮಕ್ಕೆ ಪ್ರಾಯೋಜಕರನ್ನೂ ಪೀಪಲ್ ಟ್ರೀ ಆಸ್ಪತ್ರೆ ಆಹ್ವಾನಿಸಿದ್ದು, ಪ್ರಾಯೋಜಕರಿಗೆ ಮೂವತ್ತು ಉಚಿತ ಪಾಸ್ ಅನ್ನು ನೀಡಲಾಗುವುದು ಎಂದು ಆಸ್ಪತ್ರೆ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಕಳೆದ ಎರಡು ವರ್ಷಗಳಿಂದ ಪೀಪಲ್ ಟ್ರೀ ಆಸ್ಪತ್ರೆ, 160ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆ ನಡೆಸಿದ್ದು, ಗ್ರಾಮೀಣ ಭಾಗದಲ್ಲಿ ಐವತ್ತಕ್ಕೂ ಹೆಚ್ಚು ಆರೋಗ್ಯ ತಪಾಸಣಾ ಶಿಬಿರವನ್ನು ನಡೆಸಿದೆ. ಇದರ ಜೊತೆಗೆ ಇದುವರೆಗೆ ನಲವತ್ತು ಮಕ್ಕಳ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣದ ಜವಾಬ್ದಾರಿಯನ್ನು ಆಸ್ಪತ್ರೆ ವಹಿಸಿಕೊಂಡಿದೆ.

ಆಸ್ಪತ್ರೆ ಹಮ್ಮಿಕೊಂಡಿರುವ ಸಾಮಾಜಿಕ ಕಳಕಳಿಯ ಈ ಕಾರ್ಯಕ್ರಮದ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಮೊಬೈಲ್ ಸಂಖ್ಯೆ ಮತ್ತು ಈಮೇಲ್ ಐಡಿಯನ್ನು ಸಂಪರ್ಕಿಸಬಹುದಾಗಿದೆ.

ಮೊಬೈಲ್ : 9900027280, 9886707070, 9845853344
ಈಮೇಲ್ ಐಡಿ: [email protected]

English summary
People Tree Foundation organizing Fund raising programme on Dec 18th by Walking Violinist Mr. Aneesh Vidyashankar at Chowdaiah memorial Hall, Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X