ರಥ ಸಪ್ತಮಿ ವಿಶೇಷ, ಸೂರ್ಯನಿಗೆ ನೂರೆಂಟು ನಮಸ್ಕಾರ
ಬೆಂಗಳೂರು,ಫೆಬ್ರವರಿ,15: ನಮ್ಮ ನಾಡು ಹೇಗೆ ಕಲೆ, ಸಂಸ್ಕೃತಿ, ನಾಡು ನುಡಿಗೆ ಹೇಗೆ ಪ್ರಸಿದ್ಧವೋ ಹಾಗೆಯೇ ಹಬ್ಬ ಹರಿದಿನಗಳಿಗೂ ಹೆಸರು ವಾಸಿ. ಅದರಲ್ಲಿ ಬಹಳ ವಿಶೇಷ, ವಿಭಿನ್ನವಾದ ಹಬ್ಬವೇ ರಥಸಪ್ತಮಿ.
ಮಾರ್ಗಶಿರ ಮಾಸದ ಶುಕ್ಲಪಕ್ಷದ ಏಳನೇ ದಿನದಂದು ಆಚರಿಸುವ ರಥ ಸಪ್ತಮಿ ಹಬ್ಬದಂದು ಸೂರ್ಯನು ಗಾಯತ್ರಿ, ಬೃಹತೀ, ಉಷ್ಣಿಕ್, ಜಗತೀ, ತ್ರಿಷ್ಟಿಷ್, ಅನುಷ್ಟುಸ್ ಮತ್ತು ಪಂಕ್ತಿ ಎಂಬ ಏಳು ಕುದುರೆ ಇರುವ ರಥವನ್ನೇರಿ ಸಿಂಹ ರಾಶಿಯಿಂದ ಮಕರ ರಾಶಿಗೆ ಹೋಗುತ್ತಾನೆ. ಇದು ಚಳಿಗಾಲ ಮುಗಿದು ಬೇಸಿಗೆ ಕಾಲ ಆರಂಭವಾಗುತ್ತದೆ ಎಂಬುದರ ಮುನ್ಸೂಚನೆಯಾಗಿದೆ.
ರಥ ಸಪ್ತಮಿ ಹಬ್ಬದಂದು ಮುಂಜಾನೆಯೇ ಎಕ್ಕದ ಎಲೆಗಳನ್ನು ತಂದು ತಲೆ, ಭುಜ, ಕುತ್ತಿಗೆ, ಪಾದ ಹೀಗೆ ನಾನಾ ಅಂಗಗಳಲ್ಲಿ ಇಟ್ಟುಕೊಂಡು ಪೂರ್ವಾಭಿಮುಖವಾಗಿ ನಿಂತು ಸೂರ್ಯನ ನೂರೆಂಟು ಹೆಸರುಗಳನ್ನು ಹೇಳುತ್ತಾ ನಮಸ್ಕಾರ ಮಾಡುವರು.
ನೂರೆಂಟು ಬಾರಿ ಆಗದಿದದ್ದರೆ ಇಂದ್ರ, ಧಾತ, ಪರ್ಜನ್ಯ, ತ್ವಷ್ಟ, ಪುಷ, ಆರ್ಯಮ, ಭಾಗ, ವಿವಸ್ವನ, ವಿಷ್ಣು, ಅಂಶುಮಾನ, ವರುಣ ಮತ್ತು ಮಿತ್ರ ಇವುಗಳನ್ನು ಉಚ್ಛರಿಸುತ್ತಾ 12 ಬಾರಿಯಾದರೂ ನಮಸ್ಕಾರ ಮಾಡುವರು. ಇದು 12 ತಿಂಗಳುಗಳ ಸೂಚಕವಾಗಿದೆ. ಅದೇ ರೀತಿಯಾಗಿ ಸೂರ್ಯನಿಗೆ ಆದಿತ್ಯ, ಸವಿತಾ, ಸೂರ್ಯ, ಮಿಹಿರಾ, ಪ್ರಭಾಕರ, ಭಾಸ್ಕರ, ರವಿ, ಭಾನು, ದಿವಾಕರ, ಮಾರ್ತಾಂಡ, ವಿತ್ರಭಾನು ಎಂಬ 12 ಹೆಸರುಗಳಿವೆ.[ಸೂರ್ಯ ನಮಸ್ಕಾರ ಕ್ರಮಬದ್ಧವಾಗಿ ಮಾಡುವ ವಿಧಾನ]
ರಥ ಸಪ್ತಮಿ ಹಬ್ಬದ ಪ್ರಯುಕ್ತ ಮೈಸೂರು, ಬೆಂಗಳೂರು, ಹುಬ್ಬಳ್ಳಿ ಹೀಗೆ ಕರ್ನಾಟಕದಾದ್ಯಂತ ಜನರು ಸೂರ್ಯ ನಮಸ್ಕಾರ ಮಾಡುವುದರ ಮೂಲಕ ರಥಸಪ್ತಮಿ ಹಬ್ಬ ಆಚರಿಸಿದರು. ಕನ್ನಡಪರ ಹೋರಾಟಗಾರ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಪ್ರೇಮಿಗಳ ದಿನವನ್ನು ವಿಭಿನ್ನವಾಗಿ ಆಚರಿಸಿದರು ಹೀಗೆ ಹಲವು ಸುದ್ದಿಗಳು ಇಲ್ಲಿವೆ.[ಚಿತ್ರ: ಪಿಟಿಐ]

ಸೂರ್ಯ ನಮಸ್ಕಾರ ಮಾಡಿದ ಬೆಂಗಳೂರಿಗರು
ರಥಸಪ್ತಮಿ ಹಬ್ಬದ ಪ್ರಯುಕ್ತ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿಯು ನ್ಯಾಷನಲ್ ಕಾಲೇಜು ಮೈದಾನದಲ್ಲಿ ನೂರೆಂಟು ಬಾರಿ ಸೂರ್ಯ ನಮಸ್ಕಾರ ಮಾಡುವ ಯೋಜನೆ ಹಾಕಿಕೊಂಡಿತ್ತು. ಇದರಲ್ಲಿ ಸಾಕಷ್ಟು ಮಂದಿ ಪಾಲ್ಗೊಂಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಕಾರಣಕರ್ತರಾದರು.

ಆಸ್ಟ್ರೇಲಿಯಾ ಮಹಿಳೆ ಜೊತೆ ಪ್ರೇಮಿಗಳ ದಿನ ಆಚರಣೆ ಮಾಡಿದ ವಾಟಾಳ್
ಫೆಬ್ರವರಿ 14ರ ಪ್ರೇಮಿಗಳ ದಿನದಂದು ಪ್ರತಿ ಜೋಡಿಹಕ್ಕಿಗಳು ಅವರದೇ ಆದ ಯೋಜನೆಗಳಂತೆ ವಿಭಿನ್ನವಾಗಿ ಆಚರಿಸಿದರು. ವಾಟಾಳ್ ಪಕ್ಷದ ನಾಯಕ ವಾಟಾಳ್ ನಾಗರಾಜ್ ಕಬ್ಬನ್ ಪಾರ್ಕಿನಲ್ಲಿ ಆಸ್ಟ್ರೇಲಿಯಾದ ಮಹಿಳೆಗೆ ಹೂವಿನ ಗುಚ್ಛ ನೀಡಿ, ಪ್ರೇಮಿಗಳ ದಿನದ ಶುಭಾಶಯ ಹೇಳಿ ನಕ್ಕಿದ್ದು ಹೀಗೆ

ಪ್ರೇಮಿಗಳ ದಿನದಂದೇ ಮದುವೆಯಾದ ದಂಪತಿಗಳ ಆನೆ ಸವಾರಿ
ಹಂಗೇರಿಯಾದ ಬುದಾಪೆಸ್ಟ್ ನಲ್ಲಿರುವ ಬಸಿಲಿಕಾದಲ್ಲಿ ಅಕ್ರೋಬಾಟ್ ಮೇರಿಲು ಕ್ಯಾಸ್ಲೆ ಮತ್ತು ಹಂಗೇರಿಯಾ ರಾಷ್ಟ್ರೀಯ ಸರ್ಕಸ್ ನ ನಿರ್ದೇಶಕ ಜೋಸೆಫ್ ರಿಚರ್ ಪ್ರೇಮಿಗಳ ದಿನದಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಸಮಾರಂಭದ ಸಮಯದಲ್ಲಿ ಮ್ಯಾಮ್ಬೊ ಎಂಬ ಆನೆಯ ಮೇಲೆ ಸವಾರಿ ಮಾಡಿದರು.

ಮೇಕ್ ಇನ್ ಇಂಡಿಯಾದಲ್ಲಿ ಬಾಲಿವುಡ್ ನಟರು
ಮುಂಬೈನಲ್ಲಿ ಹಮ್ಮಿಕೊಂಡಿದ್ದ ಮೇಕ್ ಇನ್ ಇಂಡಿಯಾದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿದ ಬಾಲಿವುಡ್ ನಟ ಅಮೀರ್ ಖಾನ್, ನಟಿ ರಶ್ಮಿ ಉದ್ದಾವ್ ಠಾಕ್ರೆ ಕಾಣಿಸಿಕೊಂಡಿದ್ದು ಹೀಗೆ.

ಸುಮಾರು ದಿನಗಳ ಬಳಿಕ ವೇದಿಕೆಯಲ್ಲಿ ಎಸ್. ಎಂ ಕೃಷ್ಣ
ಕೇಂದ್ರ ಸಚಿವ ರಾಜೀವ್ ಪ್ರತಾಪ್ ರುಡಿ, ಸಂಸದೆ ಶೋಭಾ ಕರಂದ್ಲಾಜೆ, ಮಾಜಿ ಮುಖ್ಯಮಂತ್ರಿ ಎಸ್. ಎಂ ಕೃಷ್ಣ ಅವರು ಚಿಕ್ಕಮಗಳೂರಿನಲ್ಲಿ ಹೆಗ್ಗಡೆ ವೈದ್ಯ ವಿಜ್ಞಾನ ಕಾಲೇಜು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಶೋಭಾ ಕರಂದ್ಲಾಜೆಯವರು ಪ್ರತಾಪ್ ರೂಡಿಯ ಬಳಿ ನಾನಾ ವಿಚಾರಗಳ ಚರ್ಚೆ ನಡೆಸಿದರು.

ಹೊತ್ತಿ ಉರಿದ ಮೇಕ್ ಇನ್ ಇಂಡಿಯಾ ವೇದಿಕೆ
ಮುಂಬೈನಲ್ಲಿ ಆಯೋಜನೆಯಾಗಿದ್ದ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ವೇದಿಕೆ ಅಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಇಡೀ ವೇದಿಕೆಯನ್ನು ಆಹುತಿ ತೆಗೆದುಕೊಂಡಿತು.ಈ ಕಾರ್ಯಕ್ರಮದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಅಮೀರ್ ಖಾನ್ ಹೀಗೆ ನಾನಾ ಗಣ್ಯರು ಪಾಲ್ಗೊಂಡಿದ್ದರು. ಇವರೆಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆ.












Click it and Unblock the Notifications