ಬೆಂಗಳೂರಿನಲ್ಲಿ ಎಳನೀರು ಬೆಲೆ ಕೇಳಿ ಉದ್ಯಮಿ ಫುಲ್‌ ಗರಂ: 120 ರೂ. ಕೊಟ್ಟು ಮೋಸ ಹೋಗ್ತಿದ್ದಾರಾ ಕನ್ನಡಿಗರು?

ಬೆಂಗಳೂರು ಎಂದಾಕ್ಷಣ ಹೆಚ್ಚಿನವರಿಗೆ ಐಟಿ-ಬಿಟಿ ಕಂಪನಿಗಳು, ಟ್ರಾಫಿಕ್ ಜಾಮ್ ಜೊತೆಗೆ ಇಲ್ಲಿನ ಕಾಸ್ಟ್ ಆಫ್ ಲಿವಿಂಗ್ ಅಂದರೆ ಜೀವನ ವೆಚ್ಚ ತಟ್ಟನೆ ನೆನಪಾಗುತ್ತೆ. ಮನೆ ಬಾಡಿಗೆಯಿಂದ ಹಿಡಿದು ದಿನಸಿ ವಸ್ತುಗಳವರೆಗೆ ಎಲ್ಲವೂ ದುಬಾರಿ ಎಂಬುದು ಇಲ್ಲಿ ಬದುಕುತ್ತಿರುವವರ ಸಾಮಾನ್ಯ ದೂರು ಎನ್ನಬಹುದು.

ಹಾಗೆಯೇ ಇದೀಗ ಉದ್ಯಮಿಯೊಬ್ಬರು ಬೆಂಗಳೂರಿನಲ್ಲಿ ಎಳನೀರು ಬೆಲೆ ಕುರಿತು ಮಾಡಿರುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ ನೋಡಿ. ದೆಹಲಿ, ಪುಣೆ ಸೇರಿದಂತೆ ದೇಶದ ಇತರ ಪ್ರಮುಖ ನಗರಗಳಿಗೆ ಹೋಲಿಸಿದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಳನೀರಿನ ಬೆಲೆ ತುಂಬಾ ದುಬಾರಿ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

People

ಪರಿತೋಷ್ ಶರ್ಮಾ ಎಂಬ ಸ್ಟಾರ್ಟ್ಅಪ್ ಉದ್ಯಮಿ ಇತ್ತೀಚೆಗೆ ವಿವಿಧ ನಗರಗಳಲ್ಲಿ ತಾವು ಕುಡಿದ ಎಳನೀರಿನ ಬೆಲೆಯನ್ನು ಹೋಲಿಕೆ ಮಾಡಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. "ದೆಹಲಿ ಮತ್ತು ಎನ್‌ಸಿಆರ್ ಭಾಗದಲ್ಲಿ ಒಂದು ಎಳನೀರಿನ ಬೆಲೆ ಅಂದಾಜು 60 ರೂಪಾಯಿಯಿದೆ. ನಾನು ಇತ್ತೀಚೆಗೆ ಪುಣೆಗೆ ಭೇಟಿ ನೀಡಿದ್ದಾಗ ಅಲ್ಲಿ ನನಗೆ 50 ರಿಂದ 70 ರೂಪಾಯಿಗೆ ಎಳನೀರು ಸಿಕ್ಕಿತ್ತು. ಆದರೆ, ನಾನು ಐಟಿ ನಗರಿ ಬೆಂಗಳೂರಿಗೆ ಹೋದಾಗ ಅದೇ ಗಾತ್ರದ ಒಂದು ಎಳನೀರಿಗೆ ಬರೋಬ್ಬರಿ 100 ರಿಂದ 120 ರೂಪಾಯಿ ಕೊಡಬೇಕಾಯಿತು," ಎಂದು ಅವರು ತಮ್ಮ ಬೇಸರವನ್ನು ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ದುಬಾರಿ ಜೀವನ ವೆಚ್ಚ

ಬೆಂಗಳೂರು ಸಮುದ್ರ ತೀರಕ್ಕೆ ಹತ್ತಿರವಿದ್ದರೂ, ಅತಿ ಹೆಚ್ಚು ತೆಂಗು ಮತ್ತು ಎಳನೀರು ಬೆಳೆಯುವ ಮಂಡ್ಯ, ಮೈಸೂರು, ತುಮಕೂರು ಭಾಗಗಳು ಸಮೀಪದಲ್ಲಿದ್ದರೂ ಇಲ್ಲಿ ಎಳನೀರಿನ ಬೆಲೆ ಇಷ್ಟೊಂದು ಹೆಚ್ಚಿರುವುದು ಆಶ್ಚರ್ಯ ತಂದಿದೆ ಎಂದು ಪರಿತೋಷ್ ಶರ್ಮಾ ಅಚ್ಚರಿ ವ್ಯಕ್ತಪಡಿಸಿದ್ದಾರೆ. "ಬೆಂಗಳೂರಿನ ಜನರಿಗೆ ಮೋಸ ಮಾಡಲಾಗುತ್ತಿದೆ ಎಂದು ನನಗೆ ಅನ್ನಿಸುತ್ತಿದೆ. ಏಕೆಂದರೆ ಇಲ್ಲಿನ ಜನರು ಮನೆ ಬಾಡಿಗೆ, ಸಾರಿಗೆ, ದಿನಸಿ, ಊಟ ಸೇರಿದಂತೆ ಪ್ರತಿಯೊಂದು ಮೂಲಭೂತ ಅಗತ್ಯಗಳಿಗೂ ಅತಿ ಹೆಚ್ಚು ಹಣ ನೀಡುವುದಕ್ಕೆ ಒಗ್ಗಿಕೊಂಡಿದ್ದಾರೆ. ಅದೇ ಕಾರಣಕ್ಕೆ ಎಳನೀರಿಗೂ ಪ್ರಶ್ನೆ ಮಾಡದೆ ಹೆಚ್ಚು ಹಣ ಕೊಡುತ್ತಿದ್ದಾರೆ," ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ನೆಟ್ಟಿಗರು ತಮ್ಮ ತಮ್ಮ ನಗರಗಳ ಎಳನೀರು ಬೆಲೆಯನ್ನ ಕಮೆಂಟ್ ಮಾಡುತ್ತಿದ್ದಾರೆ. ತಮಿಳುನಾಡಿನ ಕೊಯಮತ್ತೂರಿನ ವ್ಯಕ್ತಿಯೊಬ್ಬರು ಪ್ರತಿಕ್ರಿಯಿಸಿ, "ನಮ್ಮಲ್ಲಿ ಪಕ್ಕದ ಪೊಳ್ಳಾಚಿಯಿಂದಲೇ ನೇರವಾಗಿ ಉತ್ತಮ ಗುಣಮಟ್ಟದ ಎಳನೀರು ಪೂರೈಕೆಯಾಗುತ್ತದೆ. ಆದರೂ ಇಲ್ಲಿಯೂ ಒಂದು ಎಳನೀರಿಗೆ 60 ರೂಪಾಯಿ ಕೊಡಬೇಕು," ಎಂದಿದ್ದಾರೆ. ಮತ್ತೊಬ್ಬ ಬಳಕೆದಾರರು ತಮ್ಮ ಇತ್ತೀಚಿನ ಪ್ರಯಾಣದ ಅನುಭವ ಹಂಚಿಕೊಳ್ಳುತ್ತಾ, "ನಾನು ಬೆಂಗಳೂರಿನಿಂದ ಪಾಂಡಿಚೇರಿಗೆ ಹೋಗುವಾಗ ಬೆಂಗಳೂರಿನಲ್ಲಿ 100-120 ರೂಪಾಯಿಯಿತ್ತು. ದಾರಿಯಲ್ಲಿ ಹೈವೇ ಪಕ್ಕದ ಹಳ್ಳಿಯಲ್ಲಿ ಕೇವಲ 10 ರೂಪಾಯಿಗೆ ಸಿಕ್ಕಿತು. ಪಾಂಡಿಚೇರಿಗೆ ತಲುಪಿದ ಮೇಲೆ ಅಲ್ಲಿ 80 ರೂಪಾಯಿ ಇತ್ತು," ಎಂದು ಬರೆದುಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದ ಪ್ರತಿಕ್ರಿಯೆಗಳು

ಉದ್ಯಮಿ ಪರಿತೋಷ್ ಶರ್ಮಾ ಅವರ ಈ ಅಭಿಪ್ರಾಯಕ್ಕೆ ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ದೆಹಲಿಯಲ್ಲಿ ಎಳನೀರು ಕೇವಲ 60 ರೂಪಾಯಿಗೆ ಸಿಗುತ್ತದೆ ಎಂಬ ಅವರ ಮಾತಿಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ. "ನಾನು ದಕ್ಷಿಣ ದೆಹಲಿಯಲ್ಲಿ ವಾಸಿಸುತ್ತಿದ್ದೇನೆ. ನೀವು ಹೇಳಿದಂತೆ 60 ರೂಪಾಯಿಗೆ ಎಲ್ಲಿಯೂ ಸಿಗುವುದಿಲ್ಲ, ಇಲ್ಲಿಯೂ ಒಂದು ಎಳನೀರಿನ ಬೆಲೆ 80 ರೂಪಾಯಿ ಇದೆ," ಎಂದು ವ್ಯಕ್ತಿಯೊಬ್ಬರು ಕಮೆಂಟ್ ಮಾಡಿದ್ದಾರೆ.

ಇನ್ನು ಬೆಂಗಳೂರಿನವರೇ ಆದ ಮತ್ತೊಬ್ಬರು ಉದ್ಯಮಿಗೆ ತಿರುಗೇಟು ನೀಡಿದ್ದು, "ನೀವು ಬೆಂಗಳೂರಿನ ಯಾವ ವಿಐಪಿ ಏರಿಯಾದಲ್ಲಿ 120 ರೂಪಾಯಿ ಕೊಟ್ಟು ಕುಡಿದಿದ್ದೀರೋ ನಮಗೆ ಗೊತ್ತಿಲ್ಲ. ಆದರೆ ಐಟಿ ಹಬ್ ಆಗಿರುವ ಮಾರತ್ತಹಳ್ಳಿ ಸುತ್ತಮುತ್ತ 70 ರಿಂದ 80 ರೂಪಾಯಿಗೆ ಅತ್ಯಂತ ಉತ್ತಮವಾದ ಎಳನೀರು ಈಗಲೂ ಸಿಗುತ್ತದೆ. ಸುಮ್ಮನೆ ಬೆಂಗಳೂರಿನ ಬಗ್ಗೆ ಅಪಪ್ರಚಾರ ಮಾಡಬೇಡಿ," ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+