Penya flyover: ಎಲ್ಲಾ ವಾಹನಗಳಿಗೆ ಪೀಣ್ಯ ಫ್ಲೈ ಓವರ್ ಓಪನ್, ಸೂಚನೆಗಳು

ಬೆಂಗಳೂರು, ಜುಲೈ 25: ಬೆಂಗಳೂರು ನಗರದ ತುಮಕೂರು ರಸ್ತೆಯ ಪೀಣ್ಯ ಫ್ಲೈ ಓವರ್‌ ಎಲ್ಲಾ ಮಾದರಿ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ದಿನಾಂಕ 29/07/2024ರಿಂದ ವಾಹನ ಸಂಚಾರ ಆರಂಭವಾಗಲಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ವಾಹನ ಸವಾರರಿಗೆ ಹಲವು ಸೂಚನೆಗಳನ್ನು ನೀಡಿದೆ.

ಪೀಣ್ಯ ಫ್ಲೈ ಓವರ್ ಮೇಲೆ ವಾಹನ ಸಂಚಾರದ ಕುರಿತು ಬೆಂಗಳೂರು ಸಂಚಾರಿ ಪೊಲೀಸರು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಪ್ರಕಟಣೆ ಮೂಲಕ ಮಾಹಿತಿ ನೀಡಿದ್ದಾರೆ. ವಾಹನ ಸವಾರರು ನಿಯಮ ಪಾಲಿಸುವಂತೆ ಮನವಿ ಮಾಡಿದ್ದಾರೆ.

Peenya Flyover Open For All Vehicle From July 29

ಪ್ರಕಟಣೆಯ ವಿವರಗಳು: ಪತ್ರಿಕಾ ಪ್ರಕಟಣೆಯಲ್ಲಿ ದಿನಾಂಕ 29/07/2024ರಿಂದ ಎಲ್ಲಾ ತರಹದ ವಾಹನಗಳು ಪೀಣ್ಯ ಫ್ಲೈ ಓವರ್‌ ಮೇಲೆ ಸಂಚಾರ ಮಾಡಬಹುದು.

ಫ್ಲೈ ಓವರ್‌ ಮೇಲೆ ವಿಶೇಷ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿರುವುದರಿಂದ, ಪ್ರತಿ ಶುಕ್ರವಾರ ಬೆಳಗ್ಗೆ 6 ಗಂಟೆಯಿಂದ ಶನಿವಾರ ಬೆಳಗ್ಗೆ 6 ಗಂಟೆಯವರೆಗೆ ಫ್ಲೈ ಓವರ್‌ ಮೇಲೆ ಭಾರಿ ಮೋಟಾರ್ ವಾಹನಗಳ ಸಂಚಾರ ಮಾತ್ರ ನಿರ್ಭಂದಿಸಲಾಗಿದೆ.

ಭಾರೀ ಮೋಟಾರು ವಾಹನಗಳು ಪೀಣ್ಯ ಫ್ಲೈ ಓವರ್‌ ಮೇಲೆ ಎಡ ಪಥದಲ್ಲಿ 40 ಕಿ.ಮೀ. ಪ್ರತಿ ಗಂಟೆಯ ವೇಗದಲ್ಲಿ ಚಲಿಸುವುದು ಎಂದು ಜಂಟಿ ಆಯುಕ್ತರು, ಬೆಂಗಳೂರು ಸಂಚಾರ ಪೊಲೀಸ್ ಮತ್ತು ಯೋಜನಾ ನಿರ್ದೇಶಕರು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಬೆಂಗಳೂರು ಸೂಚನೆಯಲ್ಲಿ ತಿಳಿಸಿದ್ದಾರೆ.

ವಾಹನ ಸಂಚಾರ ನಿಷೇಧಿಸಲಾಗಿತ್ತು: ಬೆಂಗಳೂರು ನಗರದ ಅತೀ ಉದ್ದದ ಫ್ಲೈ ಓವರ್‌ಗಳಲ್ಲಿ ಪೀಣ್ಯ ಫ್ಲೈ ಓವರ್‌ ಸಹ ಒಂದು. 2021ರ ಡಿಸೆಂಬರ್‌ನಲ್ಲಿ 8ನೇ ಮೈಲಿ ಜಂಕ್ಷನ್ ಸಮೀಪದ 102, 103ನೇ ಪಿಲ್ಲರ್‌ನ ಕೇಬಲ್‌ಗಳು ಬಾಗಿದ್ದವು. ಆದ್ದರಿಂದ 2021ರ ಡಿಸೆಂಬರ್‌ನಲ್ಲಿ ಫ್ಲೈ ಓವರ್ ಮೇಲೆ ವಾಹನ ಸಂಚಾರ ನಿಷೇಧಿಸಲಾಗಿತ್ತು. ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿತ್ತು.

ವಾಹನ ಸಂಚಾರ ಬಂದ್ ಮಾಡಿದ ಬಳಿಕ ತುಮಕೂರು ರಸ್ತೆಯಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಿತ್ತು. ಬಳಿಕ ಹಂತ ಹಂತವಾಗಿ ಲಘು ವಾಹನಗಳು ಫ್ಲೈ ಓವರ್ ಮೇಲೆ ಹಗಲು ಹೊತ್ತು ಮಾತ್ರ ಸಂಚಾರ ನಡೆಸಲು ಅನುಮತಿ ನೀಡಲಾಗಿತ್ತು. ಈಗ ಎಲ್ಲಾ ಮಾದರಿ ವಾಹನಗಳ ಸಂಚಾರ ಆರಂಭವಾಗಲಿದೆ.

ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ-4ರಲ್ಲಿರುವ ಈ ಪೀಣ್ಯ ಫ್ಲೈ ಓವರ್‌ ಸುಮಾರು 20 ಜಿಲ್ಲೆಗಳಿಗೆ ಸಂಪರ್ಕ ಕೊಂಡಿಯಾಗಿದೆ. ಸದಾಕಾಲ ಈ ರಸ್ತೆಯಲ್ಲಿ ವಾಹನಗಳ ಓಡಾಟ ಇರಲಿದ್ದು, ಬಸ್, ಲಾರಿ ಸೇರಿದಂತೆ ಭಾರೀ ವಾಹನಗಳು ಸಹ ಸಂಚಾರ ನಡೆಸುತ್ತವೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪೀಣ್ಯ ಫ್ಲೈ ಓವರ್‌ ದುರಸ್ತಿ ಕಾರ್ಯವನ್ನು ಕೈಗೊಂಡಿತ್ತು. ಹಲವಾರು ಗಡುವುಗಳನ್ನು ಮೀರಿ ಈಗ ಫ್ಲೈ ಓವರ್ ಭಾರೀ ವಾಹನಗಳ ಸಂಚಾರಕ್ಕೆ ಮುಕ್ತವಾಗಲಿದೆ. ಈಗ ಮೇಲ್ಸೇತುವೆಗೆ ಹೊಸದಾಗಿ ಅಳವಡಿಸಿರುವ 240 ಕೇಬಲ್‌ಗಳಿಂದ ಸಾಮರ್ಥ್ಯ ಹೆಚ್ಚಾಗಿದೆ ಎಂದು ತಜ್ಞರ ವರದಿ ಹೇಳಿದೆ. ಸೇತುವೆಯ ಮೇಲೆ 24 ಗಂಟೆಗಳ ಕಾಲ ಭಾರದ ಪರೀಕ್ಷೆಯನ್ನು ನಡೆಸಿ ಪರಿಶೀಲನೆ ನಡೆಸಿ, ವರದಿ ತಯಾರು ಮಾಡಲಾಗಿದೆ.

ಈ ವರ್ಷದ ಜನವರಿ 16 ರಿಂದ 19ರ ತನಕ ಪೀಣ್ಯ ಫ್ಲೈ ಓವರ್‌ ಮೇಲೆ ವಿವಿಧ ಪರೀಕ್ಷೆಗಳನ್ನು ಮಾಡಲಾಗಿತ್ತು. ಭಾರ ಹೊಂದಿದ ಲಾರಿಗಳನ್ನು ಫ್ಲೈ ಓವರ್‌ ಮೇಲೆ ಓಡಿಸಿ, ನಿಲ್ಲಿಸಿ ಪರೀಕ್ಷೆಗಳನ್ನು ಮಾಡಿ, ಅಧ್ಯಯನ ನಡೆಸಲಾಗಿತ್ತು. ಈ ಅಧ್ಯಯನ ವರದಿ ಆಧಾರದ ಮೇಲೆ ತಜ್ಞರಿಂದ ಮತ್ತೊಂದು ಸುತ್ತಿನ ಪರಿಶೀಲನೆಯನ್ನು ನಡೆಸಿ, ಬಳಿಕ ಭಾರೀ ವಾಹನಗಳ ಸಂಚಾರದ ದಿನಾಂಕವನ್ನು ಘೋಷಣೆ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+