ವಿಡಿಯೋ; 'Starbucks' ವಿರುದ್ಧ ಪಾದಚಾರಿಗಳ ಆಕ್ರೋಶ

ಬೆಂಗಳೂರು, ಫೆಬ್ರವರಿ 22: ಜನಸಾಮಾನ್ಯರು ಆಗಾಗ ಬೆಂಗಳೂರಿನಲ್ಲಿ ಟ್ರಾಫಿಕ್ ನಿಯಮಗಳನ್ನು ಉಲ್ಲಂಘನೆ ಮಾಡಿ ಪೊಲೀಸರ ಕೆಂಗಣ್ಣಿಗೆ ಗುರಿಯಾಗುವುದು ಸಹಜ.

ಆದರೆ, ಅಂತಾರಾಷ್ಟ್ರೀಯ ಸಂಸ್ಥೆಯೊಂದು ಬೆಂಗಳೂರು ಸಂಚಾರ ನಿಯಮಗಳನ್ನು ಉಲ್ಲಂಘಿಸಿ ಪೊಲೀಸರ ಕೆಂಗಣ್ಣಿಗಷ್ಟೇ ಅಲ್ಲ, ಬೆಂಗಳೂರಿನ ಪಾದಚಾರಿಗಳ ಕೆಂಗಣ್ಣಿಗೂ ಗುರಿಯಾಗಿದೆ.

ಬೆಂಗಳೂರಿನ ಹೆಣ್ಣೂರು ಬಳ್ಳಾರಿ ರೋಡ್ ಲೇಔಟ್ನಲ್ಲಿನ (ಎಚ್‌ಆರ್‌ಬಿಆರ್‌ ಲೇಔಟ್‌) ಏಳನೇ ಮುಖ್ಯರಸ್ತೆಯ ಸ್ಟಾರ್‌ಬಕ್ ಹೋಟೆಲ್ (ಕಾಫಿ ಶಾಪ್) ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದೆ. ಈ ಕುರಿತು HRBR Layout ಟ್ವಿಟ್ಟರ್‌ ಪೇಜ್ ಅಸಮಾಧಾನ ವ್ಯಕ್ತಪಡಿಸಿ ವಿಡಿಯೋ ಒಂದನ್ನು ಟ್ವಿಟ್ಟರ್‌ನಲ್ಲಿ ಹಾಕಿದೆ.

Pedestrians Complaint Against Starbucks In Bengaluru

ಸ್ಟಾರ್‌ಬಕ್ ಮಳಿಗೆ ಮುಂದೆ ಪಾದಚಾರಿ ಮಾರ್ಗವನ್ನು ಸ್ಟಾರ್‌ಬಕ್ ತನ್ನ ಗ್ರಾಹಕರಿಗೆ ಪಾರ್ಕಿಂಗ್ ಆಗಿ ಮಾಡಿಕೊಟ್ಟಿದೆ. ಇದು ಪಾದಚಾರಿಗಳಿಗೆ ತೊಂದರೆಯನ್ನುಂಟು ಮಾಡುತ್ತಿದೆ ಎಂದು ಬೆಂಗಳೂರು ಟ್ರಾಫಿಕ್ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಬೆಂಗಳೂರು ಟ್ರಾಫಿಕ್ ಪೊಲೀಸ್ ಟ್ವಿಟ್ಟರ್ ಪೇಜ್ ಈ ಕುರಿತು ಸ್ಟಾರ್‌ಬಕ್ ಮೇಲೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+