ಬೆಂಗಳೂರು ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಸಾರಿಗೆ ಸಿಗಬೇಕು: ಪಿಸಿ ಮೋಹನ್

ಬೆಂಗಳೂರು: ಬೆಂಗಳೂರಿನ ಪ್ರಮುಖ ಸಾರಿಗೆ ವ್ಯವಸ್ಥೆಯಲ್ಲಿ ಒಂದಾಗಿರುವ ನಮ್ಮ ಮೆಟ್ರೋ (Namma Metro) ದರ ಏರಿಕೆ ಬಗ್ಗೆ ಅಸಮಾಧಾನ ಇರುವಾಗಲೇ ಮುಂದಿನ ಫೆಬ್ರವರಿಯಿಂದ ಮತ್ತೆ ಶೇಕಡಾ 5ರಷ್ಟು ದರ ಹೆಚ್ಚಾಗಲಿದೆ. ಇದಕ್ಕೆಲ್ಲ ರಾಜ್ಯ ಸರ್ಕಾರದ ನೀತಿಗಳೇ ಪ್ರಮುಖ ಕಾರಣವೆಂದು ಬಿಜೆಪಿ ಸಂಸದ ಪಿಸಿ ಮೋಹನ್ ದೂರಿದ್ದಾರೆ. ಜೊತೆಗೆ ರಾಜ್ಯ ಸಕಾರುವು ಬಿಎಂಆರ್‌ಸಿಎಲ್‌ಗೆ ನೀಡುತ್ತಿದ್ದ ಹಣಕಾಸಿನ ಬೆಂಬಲ ನಿಲ್ಲಿಸಿದ್ದೇಕೆ ಎಂದು ಪ್ರಶ್ನಿಸಿದ್ದಾರೆ.

ಬೆಂಗಳೂರು ಮೆಟ್ರೋ ಕಳೆದ ವರ್ಷ ಸಾರಿಗೆ ನಿರ್ವಹಣೆ ವೆಚ್ಚ ಅಧಿಕವಾಗಿದೆ ಎಂದು ಹೇಳಿ ಶೇಕಡಾ 71 ರಷ್ಟು ಪ್ರಯಾಣ ದರ ಹೆಚ್ಚಿಸಿತ್ತು. ಈ ಸಂಬಂಧ ದರ ಪರಿಷ್ಕರಣೆ ಸಮಿತಿ ವರದಿ ನೀಡಿದ್ದು, ಅದರನ್ವಯ ಟಿಕೆಟ್ ಬೆಲೆ ಹೆಚ್ಚಿಸಲಾಗಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ತಿಳಿಸಿತ್ತು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದ ಪಿಸಿ ಮೋಹನ್ ಅವರು, ಇದೀಗ ಮತ್ತೆ ಶೇ.5 ದರ ಏರಿಕೆ ಆಕ್ಷೇಪ ವ್ಯಕ್ತಪಡಿಸಿ ಎಕ್ಸ್‌ ಪೋಸ್ಟ್ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.

PC Mohan Slams State Govt Over Namma Metro Fare Hike Demands Affordable Transport

ಮೆಟ್ರೋ ಪ್ರಯಾಣ ದರ ಹೆಚ್ಚಳ ಆಕಸ್ಮಿಕವಲ್ಲ

ಬೆಂಗಳೂರು ಮೆಟ್ರೋ ದರ ಏರಿಕೆಯು ಆಕಸ್ಮಿಕವಲ್ಲ. ಇದು ವಿವಿಧ ಯೋಜನೆ, ನೀತಿಗಳನ್ನು ಜಾರಿಗೆ ತಂದ ಕಾಂಗ್ರೆಸ್ ಸರ್ಕಾರದ ಫಲಶೃತಿಯ ಪರಿಣಾಮವಾಗಿದೆ. ಆಡಳಿತ ವಿಫಲವಾಗಿದೆ. ಸರ್ಕಾರದ ಬಳಿ ಹಣವಿಲ್ಲ. ಹೀಗಾಗಿ ದರ ಏರಿಕೆ ಮೂಲಕ ಪ್ರತಿದಿನ ಸಂಚಾರ ಮಾಡುವ ನಾಗರಿಕರು ಹಣ ಹೆಚ್ಚು ಪಾವತಿಸುವಂತೆ ಮಾಡಲಾಗುತ್ತಿದೆ. ಬೆಂಗಳೂರಿಗೆ ಕೈಗೆಟುಕುವ ದರದಲ್ಲಿ ಸಾರಿಗೆ ಸೇವೆ ಲಭ್ಯವಾಗಬೇಕು. ನಗರ ಸಾರಿಗೆಯನ್ನು ರಕ್ಷಿಸಬೇಕೆಂದು ಅವರು ಆಗ್ರಹಿಸಿದ್ದಾರೆ.

ಎಫ್‌ಎಫ್‌ಸಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ. ಹಿಂದಿನ ಕರ್ನಾಟಕ ಸರ್ಕಾರಗಳು ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ (BMRCL) ಗೆ ಹಣಕಾಸಿನ (Shadow Cash Support) ಬೆಂಬಲವನ್ನು ನೀಡಿವೆ. ಆದರೆ ಪ್ರಸ್ತುತದ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ. ಹೀಗಾಗಿ ಮೆಟ್ರೋಗೆ ನೀಡುತ್ತಿದ್ದ ಆರ್ಥಿಕ ಬೆಂಬಲವನ್ನು ಹಿಂತೆಗೆದುಕೊಂಡಿತು. ಪರಿಣಾಮವಾಗಿ ಮೆಟ್ರೋ ದರಗಳು ಶೇಕಡಾ 71ರಷ್ಟು ಏರಿಕೆ ಆಗಿದೆ. ಇದೇ ವರ್ಷ ನಮ್ಮ ಮೆಟ್ರೋ ವಾರ್ಷಿಕ ಶೇಕಡಾ 5ರಷ್ಟು ದರ ಹೆಚ್ಚಿಸಲು ಮುಂದಾಗಿದೆ ಎಂದು ಅವರು ಅಸಮಾಧಾನ ಹೊರ ಹಾಕಿದರು.

ಫೆಬ್ರವರಿಯಿಂದ ಶೇ.5ರಷ್ಟು ದರ ಏರಿಕೆ

ದರ ಪರಿಷ್ಕರಣೆ ಸಮಿತಿಯು ನಿರ್ವಹಣೆ ವೆಚ್ಚದ ಆಧಾರದಲ್ಲಿ ನಮ್ಮ ಮೆಟ್ರೋ ಪ್ರತಿ ವರ್ಷ ಪ್ರಯಾಣದ ದರದಲ್ಲಿ ಶೇಕಡಾ 5ರಷ್ಟು ಹೆಚ್ಚಿಸುವ ಬಗ್ಗೆ ಸಲಹೆ ನೀಡಿತ್ತು. ಅದರ ಆಧಾರದಲ್ಲಿ 2026 ಫೆಬ್ರವರಿಯಿಂದ ಶೇ.5ರಷ್ಟು ದರ ಏರಿಕೆ ಆಗುವ ಎಲ್ಲ ಸಾಧ್ಯತೆಗಳು ಇವೆ. ಅಧಿಕೃತ ಮಾಹಿತಿ ಹೊರ ಬರಬೇಕಿದೆ. ಇನ್ನೂ ಈ ಹಿಂದೆ ಶೇಕಡಾ 71ರಷ್ಟು ಮೆಟ್ರೋ ಪ್ರಯಾಣ ದುಬಾರಿ ಆದಾಗ ದರ ಪರಿಷ್ಕರಣೆ ಸಮಿತಿ ನೀಡಿದ್ದ ವರದಿಯಲ್ಲಿ ಏನಿದೆ? ಎಂದು ಜನರಿಗೆ (ಪ್ರಯಾಣಿಕರಿಗೆ) ತಿಳಿಯಬೇಕು. ಆ ವರದಿ ಬಿಡುಗಡೆ ಮಾಡುವಂತೆ ಬಿಜೆಪಿ ನಾಯಕರು ಆಗ್ರಹಿಸಿದ್ದರು. ಆದರೆ ಈವರೆಗೂ ಸರ್ಕಾರವಾಗಲಿ, ಬಿಎಂಆರ್‌ಸಿಎಲ್ ಆಗಲಿ ವರದಿ ಬಿಡುಗಡೆಗೆ ಮುಂದಾಗಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+