ಪೌರಕಾರ್ಮಿಕರ ಬಗ್ಗೆ ರಾಜ್ಯ ಸರಕಾರ ನಿರ್ಲಕ್ಷ್ಯ, ರಾಜೀವ್ ಚಂದ್ರಶೇಖರ್ ಖಂಡನೆ
ಬೆಂಗಳೂರು, ಆಗಸ್ಟ್ 31: ವೇತನ ನೀಡಿಲ್ಲ ಎಂಬ ಕಾರಣಕ್ಕೆ ಕಳೆದ ಕೆಲವು ದಿನಗಳ ಹಿಂದೆ ಬೆಂಗಳೂರಿನ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಬಿಬಿಎಂಪಿ ಕಡೆಯಿಂದ ಗುತ್ತಿಗೆ ಕಾರ್ಮಿಕರಿಗೆ 116 ಕೋಟಿ ರೂ. ಹಣ ಬಿಡುಗಡೆ ಮಾಡಲಾಗಿದೆ. ಆದರೆ ಗುತ್ತಿಗೆ ಪೌರ ಕಾರ್ಮಿಕರ ಪಿಎಫ್ ಮತ್ತು ಇನ್ಶೂರೆನ್ಸ್ ಹಣ ಬಿಡುಗಡೆ ಮಾಡಿಲ್ಲ. ಈ ಮೂಲಕ ಕಾಂಟ್ರಾಕ್ಟ್ ದಾರರಿಗೆ ಹಣ ನೀಡಿ ಕಾರ್ಮಿಕರನ್ನು ವಂಚಿಸಲಾಗಿದೆ ಎಂದು ಅವರು ದೂರಿದ್ದಾರೆ..

ಈ ಕುರಿತು ಟ್ವೀಟ್ ಮಾಡಿರುವ ರಾಜೀವ್ ಚಂದ್ರಶೇಖರ್, "ಇದು ನಾವು ಬಡವರ ಪರ ಎಂದು ಹೇಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಿ ಕಾರ್ಮಿಕರಿಗೆ ಹಣ ನೀಡಿಲ್ಲ. ಇದು ಅವರ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯನ್ನು ಸೂಚಿಸುತ್ತದೆ. ಈ ಸಂಕಷ್ಟದ ಸಮಯದಲ್ಲಿ ನಾನು ಪೌರ ಕಾರ್ಮಿಕರನ್ನು ಬೆಂಬಲಿಸುತ್ತೇನೆ ಮತ್ತು ಅವರ ಜತೆ ಹೋರಾಡುತ್ತೇನೆ," ಎಂದಿದ್ದಾರೆ.
Pay contractors but not to pourakarmikas ? @CMofKarnataka #BuilderContractorSarkara pic.twitter.com/udANrcNqn8
— Rajeev Chandrasekhar (@rajeev_mp) August 30, 2017












Click it and Unblock the Notifications