Pavitra questioned Darshan stargiri: ದರ್ಶನ್ ಸ್ಟಾರ್‌ಗಿರಿಯನ್ನು ಪ್ರಶ್ನೆ ಮಾಡಿದ್ದ ಪವಿತ್ರಾ!
ದೇಶ ವಿದೇಶದಲ್ಲೂ ನಟ ದರ್ಶನ್ ಸುದ್ದಿ ಕೇಳಿ ಜನ ದಂಗಾಗಿ ಹೋಗಿದ್ದಾರೆ. ಇಂಥಹ ನಾಯಕ ನಟ ಇರಲು ಸಾಧ್ಯನಾ ಅಂತ ಬೆರಗಾಗಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಇರುವ ದರ್ಶನ್ ಈಗ ಪೊಲೀಸ್ ಎದುರು ಕೈ ಕಟ್ಟಿ ನಿಲ್ಲುವಂತಹ ಸ್ಥಿತಿ ಬಂದೊದಗಿದೆ. ಇದಕ್ಕೆಲ್ಲಾ ಅಸಲಿಯಾಗಿ ಕಾರಣ ಮನೆ ಒಡೆದ ಮಾಯಾಂಗಿನಿ ಪವಿತ್ರಾ ಗೌಡ...
ಹೌದು... ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಂಹಪಾಲು ಪವಿತ್ರಾ ಗೌಡ ಅವರದ್ದೆನ್ನಲಾಗುತ್ತಿದೆ. ಈಕೆ ರೇಣುಕಾಸ್ವಾಮಿ ಅವರನ್ನು ಹೊಡೆಯಲಿಲ್ಲ, ಬೈಯ್ಯಲಿಲ್ಲ. ಬದಲಿಗೆ ಈಕೆ ಬೈದಿದ್ದು ಡಿ-ಬಾಸ್ ದರ್ಶನ್‌ನನ್ನಾ. ತನಗೆ ಅಶ್ಲೀಲವಾಗಿ ಫೋಟೋ ಕಳುಹಿಸಿದ್ದಾ ಎಂಬಾ ಕಾರಣಕ್ಕೆ ರೇಣುಕಾಸ್ವಾಮಿ ವಿರುದ್ಧ ದರ್ಶನ್ ಅತಿರೇಕದ ಕೋಪ ತೋರಿಸಲು ಕಿಂಗ್ ಪಿನ್ ಇದೇ ಪವಿತ್ರಾ ಗೌಡ.

ದರ್ಶನ್ ಸ್ಟಾರ್‌ಗಿರಿಯನ್ನು ಪ್ರಶ್ನೆ ಮಾಡಿದ್ದ ಪವಿತ್ರಾ...!
ದೊಡ್ಡ ಸ್ಟಾರ್ ಅಂತೀಯಾ? ಏನ್ ಮಾಡಿದಿಯಾ? ನನಗೆ ಅಶ್ಲೀಲವಾಗಿ ಫೋಟೋ ಕಾಮೆಂಟ್ ಮಾಡ್ತಾನೆ ರೇಣುಕಾಸ್ವಾಮಿ ಅನ್ನೋನು, ಇದಕ್ಕೆ ನೀನ್ ಏನ್ ಮಾಡಿದಿಯಾ? ಎಂದು ದರ್ಶನ್ ಸ್ಟಾರ್‌ಗಿರಿಯನ್ನು ಪ್ರಶ್ನೆ ಮಾಡಿದ್ಲು ಪವಿತ್ರಾ.. ಇದರಿಂದ ರೊಚ್ಚಿಗೆದ್ದ ಡಿ-ಬಾಸ್ ದರ್ಶನ್ ರೇಣುಕಾಸ್ವಾಮಿಯನ್ನು ಪತ್ತೆ ಮಾಡಲು ತನ್ನ ಗ್ಯಾಂಗ್‌ಗೆ ಸೂಚಿಸಿದ್ದಾರೆ.
ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ಅಪಹರಿಸಿ ಬೆಂಗಳೂರಿಗೆ ಕರೆತಂದ ಬಳಿಕ ರೇಣುಕಾಸ್ವಾಮಿಗೆ ದರ್ಶನ್ ಹಾಗೂ ಗ್ಯಾಂಗ್ ಸೇರಿ ಚಿತ್ರವಿಚಿತ್ರವಾಗಿ ಹಲ್ಲೆ ಮಾಡಿ ಹಿಂಸಿಸಿದ್ದಾರೆ. ಇದರಿಂದ ರೇಣುಕಾಸ್ವಾಮಿಯ ಪ್ರಾಣ ಪಕ್ಷಿ ಹಾರಿಹೋಗಿದೆ. ಸಿನಿಮಾದ ಶೈಲಿಯಲ್ಲಿ ಕರೆಂಟ್ ಶಾಕ್ ಕೊಟ್ಟು ಸಾಯಿಸುವಂತೆ ರೇಣುಕಾಸ್ವಾಮಿಯನ್ನು ಹತ್ಯೆ ಮಾಡಲಾಗಿದೆ.
ದರ್ಶನ್ ಕುಟುಂಬ ಒಡೆದ ಮಾಯಾಂಗಿನಿ!
ಚಂದದ ಕುಟುಂಬಕ್ಕೆ ಎಂಟ್ರಿ ಕೊಟ್ಟ ನಟಿ ಪವಿತ್ರಾ ಗೌಡ ದರ್ಶನ್ ದಾಂಪತ್ಯ ಜೀವನ ಹಾಳು ಮಾಡಿದ್ದಲ್ಲದೆ ಅವರ ಹೆಸರು, ಕೀರ್ತಿ, ಅವರಿಗಿದ್ದ ಗೌರವವನ್ನು ಬೀದಿಗೆ ತಂದು ನಿಲ್ಲಿಸಿಬಿಟ್ಲು. ನಿಜವಾದ ಪ್ರೇಯಸಿಯಾಗಿದ್ದರೆ ಒಂದು ಸಂಸಾರ ಚೆನ್ನಾಗಿ ಇರಲಿ ಅಂತ ಹಾರೈಸಿ ದೂರ ಇರಬೇಕಿತ್ತು. ಆದರೆ ಪವಿತ್ರಾ ಗೌಡ ಮಾತ್ರ ಹಾಗೇ ಮಾಡಲಿಲ್ಲ.

ಬಂಗಾರದಂತ ದರ್ಶನ್ ಹಾಗೂ ವಿಜಯಲಕ್ಷ್ಮಿ ಬಾಳಲ್ಲಿ ಮುಳ್ಳಾಗಿ ಬಂದಳು. ದರ್ಶನ್‌ನನ್ನು ತನ್ನ ಪ್ರೀತಿ ಬಲೆಯಲ್ಲಿ ಕಟ್ಟುಹಾಕಿ, ವಿಜಯಲಕ್ಷ್ಮಿ ಸ್ಥಾನವನ್ನು ಕಿತ್ತುಕೊಂಡು ತಾನೇ ಪತ್ನಿಯಂತೆ ದರ್ಬಾರ್ ಮಾಡತೊಡಗಿದ್ಲು. ದರ್ಶನ್ ಜೊತೆ ಆತ್ಮೀಯವಾಗಿದ್ದ ಫೋಟೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ತನ್ನ ಹಾಗೂ ದರ್ಶನ್ ನಡುವಿನ ಪ್ರೇಮ ಸಂಬಂಧದ ಬಗ್ಗೆ ರಿವೀಲ್ ಮಾಡಿದ್ದಳು.
ದರ್ಶನ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ ನಟಿ
ಇದು ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಮಾತ್ರವಲ್ಲ ಅವರ ಅಭಿಮಾನಿಗಳಿಗೂ ಸಹಿಸಲಾಗಲಿಲ್ಲ. ಕೆಲ ಅಭಿಮಾನಿಗಳು ಮನೆಮುರಿದ ಪಾಪಿ ಅಂತೆಲ್ಲಾ ಪ್ರತಿಕ್ರಿಯೆ ಮಾಡ ತೊಡಗಿದ್ದರು. ಕೆಲವರೂ ಇನ್ನೂ ಕೆಟ್ಟದಾಗಿ ಫೋಟೋ ಹಾಕಿ ಕಾಮೆಂಟ್ ಕೂಡ ಮಾಡಿದ್ದರು. ಆ ಪೈಕಿ ರೇಣುಕಾಸ್ವಾಮಿ ಕೂಡ ಒಬ್ಬರು.
ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯಳಾಗಿದ್ದ ಪವಿತ್ರಾ ಗೌಡ ಎಲ್ಲರ ಕಾಮೆಂಟ್‌ಗಳನ್ನು ಗಮನಿಸಿದ್ದಾಳೆ. ಆದರೆ ರೇಣುಕಾಸ್ವಾಮಿ ಕಳುಹಿಸಿದ್ದ ಅಶ್ಲೀಲ ಫೋಟೋ ಮನೆಮುರಿದ ಪವಿತ್ರಾ ಗೌಡಾಗೆ ಸಹಿಸಲಾಗಲಿಲ್ಲ. ತನಗೆ ಬಂದ ಕಾಮೆಂಟ್ ಹಾಗೂ ಅಶ್ಲೀಲ ಫೋಟೋಗಳನ್ನ ದರ್ಶನ್‌ಗೆ ತೋರಿಸಿ ಕೆಣಕಿದ್ಲು. ನೀನು ಒಬ್ಬ ನಟ. ನಿನಗೆ ಇಷ್ಟು ದೊಡ್ಡ ಪಟ್ಟವಿದೆ. ನೀನು ಒಬ್ಬ ಲವರ್. ನಿನಗೆ ಸ್ಟಾರ್‌ಗಿರಿ ಬೇರೆ, ನೀನು ನನಗೆ ಏನ್ ಮಾಡಿದಿಯಾ? ನನಗೆ ಈ ರೀತಿ ಮೆಸೇಜ್ ಬಂದರೂ ಸುಮ್ಮನಿದಿಯಾ ಅಂತಾ ದರ್ಶನ್ ಜೊತೆ ಜಗಳ ಮಾಡಿಕೊಂಡಿದ್ದಳು.

ದರ್ಶನ್ ಕೋಪವನ್ನು ನೆತ್ತಿಗೇರಿಸಿದ್ದ ಪ್ರೇಯಸಿ ಪವಿತ್ರಾ!
ಇಂತಹ ಮಾತುಗಳು ದರ್ಶನ್ ಕೋಪವನ್ನು ನೆತ್ತಿಗೇರಿಸಿತ್ತು. ಕುಡಿದಾಗ ಮನುಷ್ಯನಾಗಿರದ ದರ್ಶನ್ ಏನೂ ಬೇಕಾದ್ರೂ ಮಾಡಿಬಿಡ್ತಾರೆ ಅನ್ನೋದಕ್ಕೆ ಇದೊಂದೇ ಪ್ರಕರಣ ಸಾಕ್ಷಿ. ಅವತ್ತು ಕಂಟಪೂರ್ತಿ ಕುಡಿದು ಪಾರ್ಟಿ ಮಾಡಿದ್ದ ದರ್ಶನ್, ರೇಣುಕಾಸ್ವಾಮಿಯನ್ನು ಮನಬಂದಂತೆ ಥಳಿಸಿದ್ದರು. ಈ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲೂ ಸೆರೆಯಾಗಿದ್ದು ಈ ದೃಶ್ಯದ ಆಧಾರದ ಮೇಲೆ ಪೊಲೀಸರು ದರ್ಶನ್‌ನನ್ನು ಗುಮ್ಮುತ್ತಿದ್ದಾರೆ. ಪ್ರೇಯಸಿ ಪವಿತ್ರಾ ಗೌಡ ಕೈಗೆ ಕೋಳಾ ಹಾಕಿ ಬಂಧಿಖಾನೆಯಲ್ಲಿ ನಿಲ್ಲಿಸಿದ್ದಾರೆ.
ಜೂನ್ 8ರಂದು ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೂನ್ 11ರಂದು ದರ್ಶನ್ ಅವರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಂಧಿಸಿದ್ದಾರೆ. ಬಾಯಿಬಿಡಿಸಿದಷ್ಟು ದರ್ಶನ್ ಕೃತ್ಯಗಳು ಹೊರಬರುತ್ತಲೇ ಇವೆ. ಹಳೆ ಪ್ರಕರಣಗಳಿಗೂ ಜೀವ ಬರುತ್ತಿದೆ. ಇದಕ್ಕೆಲ್ಲಾ ಆ ಮಾಯಾಂಗಿನಿ ಪವಿತ್ರಾ ಗೌಡನೇ ಕಾರಣ ಎನ್ನಲಾಗುತ್ತಿದೆ.
ಈ ಹಿಂದೆ ಸಂಜಯ್ ಸಿಂಗ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದ ಪವಿತ್ರಾ ಗೌಡಗೆ ಒಬ್ಬ ಮಗಳಿದ್ದಾಳೆ. ಹೀಗಿರುವಾಗ ಯಾವುದಾದರೂ ದುಡಿಮೆ ಮಾಡಿಕೊಂಡು ಮರ್ಯಾದೆಯಾಗಿ ಜೀವನ ನಡೆಸಬಹುದಿತ್ತು. ಆದರೆ ಈಕೆ ಮಾಡಿದ್ದು ಮಾತ್ರ ಮಣ್ಣು ತಿನ್ನೋ ಕೆಲಸ. ಈಕೆ ಮಾತು ಕೇಳಿದ ದರ್ಶನ್ ಪಾಡು ನಾಯಿಪಾಡಾಗಿದೆ. ಪೊಲೀಸರ ಕೈಕಾಲು ಹಿಡಿದು ಬಿಟ್ಟುಬಿಡಿ ಅಂತ ಕೇಳಿಕೊಳ್ಳುವ ಸ್ಥಿತಿಗೆ ಬಂದೊದಗಿದೆ. ನಿಜವಾಗಲೂ ಶಿಕ್ಷೆ ಆಗಬೇಕು ಅಂತಿದ್ದರೆ ಪವಿತ್ರಾ ಗೌಡಗೇ ಆಗಬೇಕು ಎನ್ನುತ್ತಿದ್ದಾರೆ ದರ್ಶನ್ ಫ್ಯಾನ್ಸ್. ಒಟ್ಟಿನಲ್ಲಿ ಈ ಪ್ರಕರಣ ಇನ್ಯಾವ ಹಂತಕ್ಕೆ ಬಂದು ತಲುಪುತ್ತೋ ಅನ್ನೋದನ್ನು ಕಾದು ನೋಡಬೇಕಿದೆ.












Click it and Unblock the Notifications