Pavitra Gowda: ಪೋಷಕರಿಗೆ ಕರೆ ಮಾಡಿ ಪವಿತ್ರಾ ಗೌಡ ಗರಂ: ಜೈಲು ಸೇರಿದರು ಕಡಿಮೆ ಆಗಿಲ್ಲ ದಿಮಾಕು!
ಬೆಂಗಳೂರು ಜೂನ್ 25: ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ಪವಿತ್ರಾ ಗೌಡ ಅವರ ದಿಮಾಕು ಇನ್ನೂ ಕಡಿಮೆಯಾಗಿಲ್ಲ. ಜೈಲಿನಿಂದ ಪೋಷಕರಿಗೆ ಕರೆ ಮಾಡಿ ಕೋಪಗೊಂಡಿದ್ದಾರೆಂದು ತಿಳಿದು ಬಂದಿದೆ.
ಪೋಷಕರಿಗೆ ಕರೆ ಮಾಡಿದ ಪವಿತ್ರಾ ಗೌಡ ಅಳಲು ತೋಡಿಕೊಂಡಿದ್ದಾರೆ. 'ನನ್ನ ನೋಡಲು ಯಾರು ಬರ್ತಾಯಿಲ್ಲ' ಎಂದು ಕಣ್ಣೀರು ಹಾಕಿದ್ದಾರೆ ಎಂದು ತಿಳಿದು ಬಂದಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಆತಂಕದಲ್ಲಿದ್ದಾರೆ.

ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಪವಿತ್ರಾ ಗೌಡ ಮನೆಯವರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ದಿನವಷ್ಟೇ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ನೋಡಲು ಪತ್ನಿ ವಿಜಯಲಕ್ಷ್ಮಿ ಹಾಗೂ ಪುತ್ರ ತೆರಳಿದ್ದರು. ಆದರೆ ಪವಿತ್ರಾ ಗೌಡ ಅವರನ್ನು ಕಾಣಲು ಯಾರೂ ಕೂಡ ಆಗಮಿಸದೇ ಇರುವುದಿಂದ ಕೋಪಗೊಂಡು ಪೋಷಕರಿಗೆ ಕರೆ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಇದರಿಂದಾಗಿ ಇಂದು ಪೋಷಕರು ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿ ಮಗಳ ಆರೋಗ್ಯ ವಿಚಾರಿಸಿದ್ದಾರೆ. ಜೈಲಿನಲ್ಲಿರುವ ಪವಿತ್ರಾ ಗೌಡ ಅವರಿಗೆ ಆತಂಕ ಶುರುವಾಗಿದೆ. ಯಾರೂ ಕೂಡ ತಮ್ಮನ್ನ ಮಾತನಾಡಿಸಲು ಬರುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಪೋಷಕರಿಗೆ ಕರೆ ಮಾಡಿ ಬೈದಾಡಿದ್ದಾರೆ.
ಕಳೆದ ದಿನವಷ್ಠೃ ಪವಿತ್ರಾ ಗೌಡ ಅವರ ಸಹೋದರ ಪರಪ್ಪನ ಅಗ್ರಹಾರ ಜೈಲಿಗೆ ಭೇಟಿ ನೀಡಿದ್ದರು. ಭೇಟಿ ಮಾಡಿದ ಸಂದರ್ಭದಲ್ಲಿ ಒಂದು ಬ್ಯಾಗ್ ಅನ್ನು ಅವರು ತೆಗೆದುಕೊಂಡು ಹೋಗಿದ್ದರು. ಇದರಲ್ಲಿ ಬಟ್ಟೆ ಹಾಗೂ ಮೇಕಪ್ ಕಿಟ್ ಇತ್ತು ಎನ್ನಲಾಗುತ್ತಿದೆ. ಇಂದು ಅವರ ತಂದೆ, ತಾಯಿ ಹಾಗೂ ಮಗಳು ಕೂಡ ಜೈಲಿಗೆ ತೆರಳಿ ಪವಿತ್ರಾ ಗೌಡ ಅವರನ್ನು ಭೇಟಿ ಮಾಡಿದ್ದಾರೆ.

ವಕೀಲರು ಪೊಲೀಸರು ನಡುವೆ ವಾಗ್ವಾದ
ದರ್ಶನ್ ಹಾಗೂ ಅವರ ಗ್ಯಾಂಗ್ ಜೈಲಿನಲ್ಲಿ ಇರುವ ಕಾರಣ ಪರಪ್ಪನ ಅಗ್ರಹಾರ ಜೈಲಿಗೆ ಭಾರೀ ಪೊಲೀಸ್ ಬಿಗಿ ಭದ್ರತೆಯನ್ನು ಒದಗಿಸಲಾಗಿದೆ. ಯಾರನ್ನೂ ಒಳಗಡೆ ಬಿಡುತ್ತಿಲ್ಲ. ಹೀಗಿರುವಾಗ ತಮ್ಮ ಕಾರನ್ನು ಜೈಲು ಒಳಗೆ ಬಿಡುತ್ತಿಲ್ಲ ಎಂದು ವಕೀಲರೊಬ್ಬರು ಜಗಳವಾಡಿದ್ದಾರೆ.
ವಕೀಲರಾದ ಕೃಷ್ಣಾ ನಾಯಕ್, 'ಯಾಕೆ ಒಳಗೆ ನಮ್ಮ ಕಾರು ಬಿಡಲ್ಲ? ಕೈದಿಗಳು ಜೈಲಲ್ಲಿ ಇದಾರೆ ಅಂದರೆ ನಿಮ್ಮ ಮನೆಯಲ್ಲಿ ಇದಾರಾ ಅಂತ ಅರ್ಥನಾ. ಒಂದು ಗಂಟೆಗೆ ಬರಲು ಹೇಳಿದ್ದರು, ನಾನು ಮೂರು ಗಂಟೆಗೆ ಬಂದಿದ್ದೇನೆ. ಕಾರು ಯಾಕ್ ಬಿಡಲ್ಲ. ವಕಾಲತ್ತು ತೆಗೆದುಕೊಳ್ಳಬೇಕು. ಒಳಗೆ ಬಿಡಿ ವಕೀಲರನ್ನು ಬಿಡಲ್ಲ ಅಂದರೆ ಏನು ಅರ್ಥ. ನಮಗೆ ನಡೆದುಕೊಂಡು ಹೋಗಲು ಆಗಲ್ಲ. ನನ್ನ ಕಾರು ಚೆಕ್ ಮಾಡಿ, ಇಲ್ಲ ನನಗೆ ಡ್ರಾಪ್ ಮಾಡಿ. 60 ವರ್ಷ ವಯಸ್ಸು ನನಗೆ. ನಡೆಯಲು ಆಗೋದಿಲ್ಲ. ನಾನು ವಕೀಲ ನಡೆಯಲು ಆಗಲ್ಲ' ಎಂದು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ
ದರ್ಶನ್ ಸ್ನೇಹಿತೆ ಪವಿತ್ರಾ ಗೌಡಗೆ ಚಿತ್ರದುರ್ಗದ ರೇಣುಕಾ ಸ್ವಾಮಿ ಎಂಬಾತನು ಅಶ್ಲೀಲವಾಗಿ ಮೆಸೇಜ್ ಕಳಿಸಿದ್ದ ಎನ್ನಲಾಗಿದೆ. ಆ ಕಾರಣದಿಂದ ಆತನನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆದುಕೊಂಡು ಬಂದು ಪಟ್ಟಣಗೆರೆ ಶೆಡ್ನಲ್ಲಿ ಚಿತ್ರಹಿಂಸೆ ನೀಡಿ ಸಾಯಿಸಲಾಯಿತು ಎಂಬ ಆರೋಪ ದರ್ಶನ್, ಪವಿತ್ರಾ ಗೌಡ ಹಾಗೂ ಸಹಚರರ ಮೇಲಿದೆ. ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇತ್ತ ಈ ಪ್ರಕರಣದ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಅವರು ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.












Click it and Unblock the Notifications