ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಂಚೆ ಚೀಟಿ ಪ್ರದರ್ಶನ, 'ಕರ್ನಾಪೆಕ್ಸ್-2015' ಸ್ಪರ್ಧೆ

By Kiran B Hegde
|
Google Oneindia Kannada News

ಬೆಂಗಳೂರು, ಡಿ. 15: ಅಂಚೆ ಇಲಾಖೆಯು 2015ರ ಜ. 16ರಿಂದ 19ರ ವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ವಲಯ ಮಟ್ಟದ ಅಂಚೆ ಚೀಟಿ ಪ್ರದರ್ಶನ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ 'ಕರ್ನಾಪೆಕ್ಸ್-2015' ಸ್ಪರ್ಧೆಯೂ ನಡೆಯಲಿದೆ.

ಆಸಕ್ತರಿಗೆ ಅರ್ಜಿ ಹಾಗೂ ವಿವರಗಳನ್ನು ರಾಜ್ಯದ ಎಲ್ಲ ಪ್ರಧಾನ ಅಂಚೆ ಕಚೇರಿಗಳಲ್ಲಿ ನೀಡಲಾಗುವುದು. ಆಸಕ್ತರು ರಾಜ್ಯದ ಎಲ್ಲ ಪ್ರಧಾನ ಅಂಚೆ ಕಚೇರಿಗಳು ಮತ್ತು ಬೆಂಗಳೂರು, ಬೆಳಗಾವಿ, ಮೈಸೂರು, ಮಂಗಳೂರಿನ ಅಂಚೆ ಚೀಟಿ ಸಂಗ್ರಹಣಾ ಕೇಂದ್ರಗಳಲ್ಲಿ ಪಡೆಯಬಹುದು. [ಡಾ. ರಾಜ್ ಅಂಚೆ ಚೀಟಿಗೆ ಠಸ್ಸೆ ಒತ್ತಿದ ಕೇಂದ್ರ]

post

ಸ್ಪರ್ಧೆಯಲ್ಲಿ ರಾಜ್ಯದ ಹಿರಿಯ ಅಂಚೆ ಚೀಟಿ ಸಂಗ್ರಹಕಾರರು ಭಾಗವಹಿಸಬಹುದು. ಯುವಕರೂ ಪಾಲ್ಗೊಳ್ಳಬಹುದು.

ಅಂಚೆ ಚೀಟಿ ಹವ್ಯಾಸ: ಅಂಚೆ ಚೀಟಿ ಸಂಗ್ರಹದ ಹವ್ಯಾಸವು ಅತ್ಯಂತ ಗೌರವ ಸ್ಥಾನ ಪಡೆದಿದೆ. ಅತ್ಯಂತ ಹಳೆಯ ಅಂಚೆ ಚೀಟಿಗಳು ಹೆಚ್ಚು ಬೆಲೆಯನ್ನು ಹೊಂದಿರುತ್ತವೆ. ಪ್ರತಿ ಅಂಚೆ ಚೀಟಿಯ ಹಿಂದೆಯೂ ಉತ್ತಮ ಇತಿಹಾಸವೇ ಇರುವ ಕಾರಣ ಜ್ಞಾನ ಹೆಚ್ಚಳಕ್ಕೂ ಅಂಚೆ ಚೀಟಿ ಸಂಗ್ರಹಣೆ ಸಹಾಯಕವಾಗುತ್ತದೆ.

English summary
The postal department has organized a postage stamp exhibition, In addition a competition 'Karnapex - 2015' is also held. Date : January 16 to 19, Venue : Kanteerava Stadium, Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X