ಬೆಂಗಳೂರು-ಮಂಗಳೂರು ವಿಶೇಷ ರೈಲಿಗೆ ಬೇಡಿಕೆ; ಕಾರಣ ಏನು ಗೊತ್ತಾ? ಇಲ್ಲಿದೆ ಮಾಹಿತಿ

Dasara Festival 2024: ಈಗಾಗಲೇ ನಾಡಿನೆಲ್ಲೆಡೆ ದಸರಾ ಹಬ್ಬದ ಸಂಭ್ರಮ ಮನೆ ಮಾಡಿದೆ. ಇದೀಗ ಸಾಲು ರಜೆ ಹಾಗೂ ಶಾಲಾ ಮಕ್ಕಳಿಗೆ ದಸರಾ ರಜೆ ಹಿನ್ನೆಲೆ ಕೆಲವರು ಊರಿನತ್ತ ತರಳಲು ಬಯಸಿದರೆ, ಮತ್ತೆ ಕೆಲವರು ಧಾರ್ಮಿಕ ಸ್ಥಳಗಳತ್ತ ಮುಖ ಮಾಡುತ್ತಿದ್ದಾರೆ. ಈಗಾಗಲೇ ರೈಲುಗಳ ಟಿಕೆಟ್ ಬುಕ್ಕಿಂಗ್‌ ಭರ್ತಿಯಾಗಿದ್ದು, ಈ ಭಾಗದ ಪ್ರಯಾಣಿಕರು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ದಸರಾ ಹಿನ್ನೆಲೆ ಜನರು ನಗರ ಪ್ರದೇಶಗಳಿಂದ ತಮ್ಮ ಊರಿನತ್ತ ಪ್ರಯಾಣ ಬೆಳೆಸಲು ಈಗಾಗಲೇ ರೈಲು ಟಿಕೆಟ್‌ ಬುಕ್‌ ಮಾಡಿದ್ದಾರೆ. ಈಗಾಗಲೇ ಬಹುತೇಕ ರೈಲು ಟಿಕೆಟ್ ಬುಕ್ಕಿಂಗ್‌ ಭರ್ತಿಯಾಗಿದ ಹಿನ್ನೆಲೆ ಬೆಂಗಳೂರು-ಮಂಗಳೂರು ಭಾಗ ಸೇರಿದಂತೆ ಇನ್ನಿತರೆ ಮಾರ್ಗಗಳ ಪ್ರಯಾಣಿಕರು ಪಟದಾಡುವಂತಾಗಿದೆ.

Passengers Demand for Bengaluru-Mangaluru special train Service

ಅದರಲ್ಲೂ ಕರಾವಳಿ ಭಾಗದ ಜನರು ಹೆಚ್ಚಾಗಿ ಬೆಂಗಳೂರು, ಮೈಸೂರು ಸೇರಿದಂತೆ ಹಲವು ನಗರಗಳನ್ನು ಉದ್ಯೋಗ, ಶಿಕ್ಷಣಕ್ಕಾಗಿ ಅವಲಂಬನೆ ಮಾಡಿದ್ದಾರೆ. ಇದೀಗ ಬೇರೆ ನಗರ ಪ್ರದೇಶಗಳಿಂದ ತಮ್ಮ ಊರುಗಳಿಗೆ ಹಬ್ಬ ಆಚರಣೆ ಮಾಡಲು ತೆರಳು ಬಯಸಿದ್ದಾರೆ. ಈಗಾಗಲೇ ರೈಲು ಟಿಕೆಟ್‌ ಬುಕ್ಕಿಂಗ್‌ ಕೂಡ ಭರ್ತಿಯಾದ ಹಿನ್ನೆಲೆ ಮಂಗೂರು-ಬೆಂಗಳೂರು ನಡುವೆ ವಿಶೇಷ ರೈಲು ಬಿಡುವಂತೆ ಪ್ರಯಾಣಿರು ಆಗ್ರಹಿಸಿದ್ದಾರೆ.

ವಾರಾತ್ಯದಲ್ಲೇ ಆಯುಧಪೂಜೆ, ವಿಜಯ ದಶಮಿ ಹಬ್ಬದ ರಜೆಗಳು ಇರುವುದರಿಂದ ಪ್ರಯಾಣಿಕರ ದಟ್ಟಣೆ ಹೆಚ್ಚಾಗೇ ಆಗುತ್ತದೆ. ಅಕ್ಟೋಬರ್ 10ರಂದು ಬೆಂಗಳೂರು-ಮಂಗಳೂರು, ಅಕ್ಟೋಬರ್‌ 13ರಂದು ಮಂಗಳೂರು-ಬೆಂಗಳೂರಿಗೆ ತೆರಳುವ ರೈಲುಗಳಲ್ಲಿ ಟಿಕೆಟ್ ಸಿಗುತ್ತಿಲ್ಲ. ಆದ್ದರಿಂದ ಅಕ್ಟೋಬರ್‌ 10ರಂದು ಬೆಂಗಳೂರಿನಿಂದ ಹಾಗೂ ಅಕ್ಟೋಬರ್ 13ರಂದು ಮಂಗಳೂರಿನಿಂದ ವಿಶೇಷ ರೈಲು ಆರಂಭಿಸಬೇಕು ಎಂದು ಪ್ರಯಾಣಿರು ಆಗ್ರಹಿಸುತ್ತಿದ್ದಾರೆ.

ಈಗಾಗಲೇ ಬೆಂಗಳೂರು-ಮಂಗಳೂರು ಮಾರ್ಗದ ಕಣ್ಣೂರು ಎಕ್ಸ್‌ಪ್ರೆಸ್, ಮುರುಡೇಶ್ವರ ಎಕ್ಸ್‌ಪ್ರೆಸ್ ಭರ್ತಿಯಾಗಿದೆ. ಆದ್ದರಿಂದ ಅಕ್ಟೋಬರ್‌ 11, 12ರಂದು ವಿಶೇಷ ರೈಲು ಸೇವೆ ಒದಗಿಸಿದರೆ, ಈ ಭಾಗದ ಪ್ರಯಾಣಿಕರಿಗೆ ಹೆಚ್ಚು ಉಪಯೋಗ ಆಗಲಿದೆ. ಆದ್ದರಿಂದ ವಿಶೇಷ ರೈಲು ವ್ಯವಸ್ಥೆ ಕಲ್ಪಿಸಬೇಕೆಂದು ರೈಲು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.

ದಸರಾ ಹಬ್ಬ ಹಿನ್ನೆಲೆ ಬಸ್‌ಗಳ ಟಿಕೆಟ್ ದರ ಎರಡು ಪಟ್ಟಿ ದುಬಾರಿಯಾಗಿದೆ. ಆದ್ದರಿಂದ ಬಹುತೇಕ ಪ್ರಯಾಣಿಕರು ತಮ್ಮ ಊರುಗಳಿಗೆ ರೈಲಿನಲ್ಲಿಯೇ ಪ್ರಯಾಣ ಬೆಳೆಸಲು ನಿರ್ಧರಿಸಿದ್ದಾರೆ. ಹಾಗೆಯೇ ಬೆಂಗಳೂರು-ಮಂಗಳೂರು ಮಾರ್ಗದ ಜನರು ಕೂಡ ಹೆಚ್ಚಾಗಿ ರೈಲು ಸೇವೆಯನ್ನೇ ಅವಲಂಬನೆ ಮಾಡಿದ್ದಾರೆ. ಆದ್ದರಿಂದ ಹಬ್ಬಗಳ ಸಂದರ್ಭಗಳಲ್ಲಿ ರೈಲ್ವೆ ಇಲಾಖೆ ಪ್ರಯಾಣಿಕರ ದಟ್ಟಣೆ ನಿಯಂತ್ರಸಿಲು ವಿಶೇಷ ರೈಲುಗಳನ್ನು ಬಿಡುತ್ತಲೇ ಬಂದಿದೆ.

ಇನ್ನು ಇದೀಗ ಬೆಂಗಳೂರು-ಮಂಗಳೂರು ನಡುವೆ ಸಂಚರಿಸುವ ಎರಡು ರೈಲುಗಳು ಸಂಪೂರ್ಣ ಭರ್ತಿಯಾಗಿವೆ. ಆದ್ದರಿಂದ ಈ ಭಾಗದಲ್ಲಿ ವಿಶೇಷ ರೈಲು ಸೇವೆ ಕಲ್ಪಿಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ. ದಸರಾ ಹಿನ್ನೆಲೆ ಶಾಲೆಗಳಿಗೆ ರಜೆ ಹಾಗೂ ಹಬ್ಬದ ಜೊತೆಗೆ ವಾರಾಂತ್ಯ ರಜೆ ಇರುವುದರಿಂದ ಜನರು ಕುದ್ರೋಳಿ, ಮಂಗಳಾದೇವಿ, ಪೊಳಲಿ, ಕಟೀಲು, ಕೊಲ್ಲೂರು, ಸುಬ್ರಹ್ಮಣ್ಯ, ಧರ್ಮಸ್ಥಳ ಸೇರಿದಂತೆ ಅನೇಲ ಕ್ಷೇತ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಿರುತ್ತದೆ.

ಸಾಮಾನ್ಯವಾಗಿ ಎಲ್ಲಾ ಭಾಗಗಳಂತೆ, ದಸರಾ ವೇಳೆ ತುಳುನಾಡಿನ ದೇಗುಲಗಳಲ್ಲಿಯೂ ಭಕ್ತರ ಸಂಖ್ಯೆ ಹೆಚ್ಚಾಗುತ್ತದೆ. ಅಲ್ಲದೆ, ಕೆಲವು ಪ್ರಮುಖ ದೈವದ ಮನೆಗಳಲ್ಲೂ ವಿಶೇಷ ಪೂಜೆಗಳು ನಡೆಯುವುದರಿಂದ ಬೆಂಗಳೂರಿನಿಂದ ಹುಟ್ಟೂರಿಗೆ ಆಗಮಿಸುವವರ ಸಂಖ್ಯೆ ಸಾಮಾನ್ಯವಾಗಿ ಹೆಚ್ಚಾಗಿರುತ್ತದೆ. ಆದ್ದರಿಂದ ಇದನ್ನೆಲ್ಲ ಗಮನಹರಿಸಿ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಬಿಡುವಂತೆ ಪ್ರಯಾಣಿಕರು ಒತ್ತಾಯಿಸುತ್ತಿದ್ದಾರೆ. ಇನ್ನು ರೈಲ್ವೆ ಇಲಾಖೆ ಪ್ರಯಾಣಿಕರ ಈ ಬೇಡಿಕೆಯನ್ನು ಈಡೇರಿಸಲಿದೆಯಾ ಎಂದು ಕಾದು ನೋಡಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+