ಬೆಂಗಳೂರು : ರೈಲು ನಿಲ್ದಾಣದಲ್ಲಿ ಪಾರ್ಕಿಂಗ್‌ ಶುಲ್ಕ ಹೆಚ್ಚಳ

ಬೆಂಗಳೂರು, ನವೆಂಬರ್ 27 : ರೈಲ್ವೆ ಇಲಾಖೆಯು ನಗರದ ಹೊರ ವಲಯದ ರೈಲು ನಿಲ್ದಾಣಗಳಲ್ಲಿನ ದ್ವಿಚಕ್ರ ವಾಹನ ನಿಲುಗಡೆ ಶುಲ್ಕವನ್ನು ಏರಿಕೆ ಮಾಡಿದೆ. ಮೂರು ವರ್ಷಗಳ ಕಾಲ ಇದೇ ಶುಲ್ಕ ಜಾರಿಯಲ್ಲಿರುತ್ತದೆ.

ಹಿಂದೆ ನಗರದಾದ್ಯಂತ ಏಕ ರೂಪದ ಶುಲ್ಕ ವ್ಯವಸ್ಥೆ ಜಾರಿಯಲ್ಲಿತ್ತು. ಈಗ ಬೆಂಗಳೂರು ನಗರ, ಬೆಂಗಳೂರೇತರ ರೈಲು ನಿಲ್ದಾಣಗಳು ಎಂದು ವಿಭಾಗ ಮಾಡಿ ಪಾರ್ಕಿಂಗ್ ಶುಲ್ಕಗಳನ್ನು ಹೆಚ್ಚಳ ಮಾಡಲಾಗಿದೆ.

Parking fee hiked in Bengaluru railway station

ಹಿಂದೆ ದ್ವಿಚಕ್ರ ವಾಹನ ನಿಲುಗಡೆಗೆ ದಿನವೊಂದಕ್ಕೆ ಗರಿಷ್ಠ 20ರೂ. ದರ ನಿಗದಿ ಮಾಡಲಾಗಿತ್ತು. ಈಗ ಅದನ್ನು ಪರಿಷ್ಕರಣೆ ಮಾಡಿ ಗರಿಷ್ಠ 50ಕ್ಕೆ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರತಿನಿತ್ಯ ವಾಹನ ನಿಲುಗಡೆ ಮಾಡುವ ಜನರ ಜೇಬಿಗೆ ಕತ್ತರಿ ಬಿದ್ದಿದೆ.

ಕೆಂಗೇರಿ, ವೈಟ್ ಫೀಲ್ಡ್‌ ನಂತಹ ಬಿಬಿಎಂಪಿ ವ್ಯಾಪ್ತಿಗೆ ಒಳಪಡದ ರೈಲು ನಿಲ್ದಾಣಗಳಲ್ಲಿ ಪಾರ್ಕಿಂಗ್ ಶುಲ್ಕ ಹೆಚ್ಚಳವಾಗಿದೆ. 'ಇನ್ನು ಮೂರು ವರ್ಷಗಳ ತನಕ ಇದೇ ಶುಲ್ಕ ಜಾರಿಯಲ್ಲಿರುತ್ತದೆ' ಎಂದು ನೈಋತ್ಯ ರೈಲ್ವೆ ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಎನ್‌.ಎಸ್. ಶ್ರೀಧರಮೂರ್ತಿ ಹೇಳಿದ್ದಾರೆ.

ಪಾರ್ಕಿಂಗ್ ಶುಲ್ಕದ ವಿವರ

* ಪ್ರತಿ 2 ಗಂಟೆಗಳಿಗೆ ರೂ. 10
* 2 ರಿಂದ 4 ಗಂಟೆಗಳ ತನಕ 20 ರೂ.
* 4 ರಿಂದ 10 ಗಂಟೆಗಳ ತನಕ 30 ರೂ.
* 10 ರಿಂದ 16 ಗಂಟೆಗಳ ತನಕ 40 ರೂ.
* 16 ರಿಂದ 24 ಗಂಟೆಗಳ ತನಕ 50 ರೂ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+