ಅಡುಗೆ ಎಣ್ಣೆ ದರ ಏರಿಕೆ; ಬೆಂಗಳೂರಲ್ಲಿ ಬಜ್ಜಿಗೂ ತಟ್ಟಿತು ಬಿಸಿ!

ಬೆಂಗಳೂರು, ಮಾರ್ಚ್ 13; ರಷ್ಯಾ ಮತ್ತು ಉಕ್ರೇನ್ ನಡುವಿನ ಯುದ್ಧದ ಪರಿಣಾಮ ಜಾಗತಿಕ ಮಟ್ಟದಲ್ಲಿ ಖಾದ್ಯ ತೈಲ ದಾಸ್ತಾನು ಕುಸಿತ ಕಂಡಿದೆ. ಇದರಿಂದಾಗಿ ಅಡುಗೆ ಎಣ್ಣೆ ದರ ಏರಿಕೆಯಾಗಿದೆ. ಬೆಂಗಳೂರು ನಗರದಲ್ಲಿ ಲೀಟರ್ ಎಣ್ಣೆಯ ದರ 200 ರೂ. ಹತ್ತಿರ ಬಂದಿದೆ.

ಅಡುಗೆ ಎಣ್ಣೆ ದರ ಏರಿಕೆಯ ಪರಿಣಾಮ ಬಿಸಿ-ಬಿಸಿ ಬಜ್ಜಿಗೂ ತಟ್ಟಿದೆ. 10 ರೂ.ಗೆ ಮೂರು ಬಜ್ಜಿ ನೀಡಲಾಗುತ್ತಿತ್ತು. ಈ 2 ಬಜ್ಜಿ ನೀಡಲಾಗುತ್ತಿದೆ. ರಸ್ತೆ ಬದಿಯಲ್ಲಿ ಬಜ್ಜಿ ವ್ಯಾಪಾರ ಮಾಡುವವರ ಜೇಬಿಗೆ ಕತ್ತರಿ ಬಿದ್ದಿದೆ.

ಬೆಂಗಳೂರು ನಗರದಲ್ಲಿ ಬಜ್ಜಿ ಮಾಡುವವರು ದರ ಏರಿಕೆಯ ಮೊರೆ ಹೋಗಿದ್ದಾರೆ. ಸಂಜೆ ವೇಳೆಗೆ ಬಿಸಿ-ಬಿಸಿ ಬಜ್ಜಿ ತಿನ್ನಲು ಹೋಗುವವರು ಜೇಬನ್ನು ಒಮ್ಮೆ ಮುಟ್ಟಿನೋಡಿಕೊಳ್ಳಬೇಕಿದೆ. ನಗರದ ಹಲವು ಬಜ್ಜಿ ಅಂಗಡಿಗಳಲ್ಲಿ ದರ ಏರಿಕೆ ಬೋರ್ಡ್‌ ಹಾಕಲಾಗಿದೆ, ಗ್ರಾಹಕರು ಸಹಕಾರ ನೀಡಬೇಕು ಎಂದು ಮನವಿ ಮಾಡಲಾಗಿದೆ.

ತ್ಯಾಗರಾಜನಗರದಲ್ಲಿನ ಶ್ರೀ ಅನ್ನಪೂರ್ಣೇಶ್ವರಿ ಬಜ್ಜಿ ಸೆಂಟರ್‌ನಲ್ಲಿ ಸೋಮವಾರದಿಂದ ದರ ಏರಿಕೆ ಜಾರಿಗೆ ಬರಲಿದೆ. ಈ ಕುರಿತು ಬೋರ್ಡ್‌ ಹಾಕಲಾಗಿದೆ. ವಡೆ, ಬೋಂಡಾ ಸೇರಿದಂತೆ ಎಲ್ಲವುಗಳ ದರಗಳು ಏರಿಕೆಯಾಗಲಿವೆ.

Palm Oil Price Rise Bajji Price Hikes

ನೂತನ ದರ ಪಟ್ಟಿ; ಪ್ರತಿ ಬಜ್ಜಿಗೆ 5 ರೂ., ಕ್ಯಾಪ್ಸಿಕಂ ಬಜ್ಜಿ ರೂ. 25, ಪಕೋಡಾ 100 ಗ್ರಾಂಗೆ ರೂ. 25 ಆಗಲಿದೆ ಎಂದು ಬೋರ್ಡ್‌ನಲ್ಲಿ ಮಾಹಿತಿ ನೀಡಲಾಗಿದೆ.

ಅಡುಗೆ ಎಣ್ಣೆ ದರಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ಒಂದು ಟನ್ ತಾಳೆ ಎಣ್ಣೆ ಬೆಲೆ ಸುಮಾರು 1.5 ಲಕ್ಷ ರೂ. ತಲುಪಬಹುದು ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

ಉಕ್ರೇನ್-ರಷ್ಯಾ ಯುದ್ಧದ ಪರಿಣಾಮ ಅಡುಗೆ ಎಣ್ಣೆ ದರದಲ್ಲಿ ಭಾರೀ ಏರಿಕೆಯಾಗಿದೆ. ಕಳೆದ ವಾರ 175 ರೂ. ಅಸುಪಾಸಿನದಲ್ಲಿದ್ದ ದರ ಈ ವಾರ 200 ರೂ.ಗೆ ಏರಿಕೆಯಾಗಿದೆ. ಇದರಿಂದಾಗಿ ಹೋಟೆಲ್‌ಗಳಲ್ಲಿ ಸಹ ಆಹಾರ ಉತ್ಪನ್ನಗಳ ದರಗಳು ಏರಿಕೆಯಾಗಲಿವೆ ಎಂದು ಅಂದಾಜಿಸಲಾಗಿದೆ.

ಯುದ್ಧ ಆರಂಭವಾದ ಬಳಿಕ ಅಡುಗೆ ಎಣ್ಣೆಯ ದರದಲ್ಲಿ 50 ರೂ. ನಷ್ಟು ಏರಿಕೆಯಾಗಿದೆ. ಅಂಗಡಿ, ಮಾಲ್, ಸೂಪರ್ ಮಾರ್ಕೆಟ್‌ನಲ್ಲಿ ಎಣ್ಣೆ ಖರೀದಿ ಮಾಡಲು ಜನರು ಮುಗಿಬಿದ್ದಿದ್ದಾರೆ.

ಅಡುಗೆ ಎಣ್ಣೆ ದರ ಏರಿಕೆ ಬಗ್ಗೆ ಬೃಹತ್ ಬೆಂಗಳೂರು ಹೋಟೆಲ್ ಸಂಘದ ಅಧ್ಯಕ್ಷ ಪಿ. ಸಿ. ರಾವ್ ಮಾತನಾಡಿ, "ಅಡುಗೆ ಎಣ್ಣೆ ಬೆಲೆ ಹಿಂದೆ ಎಂದೂ ಕಾಣದಷ್ಟು ಏರಿಕೆಯಾಗಿದೆ. ಜೊತೆಗೆ ದಾಸ್ತಾನು ಕೂಡಾ ಇಲ್ಲ. ಲೀಟರ್‌ಗೆ 300 ರೂ. ತನಕ ತಲುಪಬಹುದು ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಅಡುಗೆ ಎಣ್ಣೆ ಅಕ್ರಮ ದಾಸ್ತಾನು ತಡೆಯಲು ಸರ್ಕಾರ ಮುಂದಾಗಬೇಕು" ಎಂದು ಒತ್ತಾಯಿಸಿದರು.

ಇನ್ನು ಕಳೆದ ವಾರ ಮಗಳ ವಿವಾಹ ಮಾಡಿರುವ ಹನುಮಂತನಗರದ ಪಾರ್ಥಸಾರಥಿ ಮಾತನಾಡಿ, "ಅಡುಗೆ ಎಣ್ಣೆಯ ಬೆಲೆ ಬೇರೆ-ಬೇರೆ ಕಡೆ ಬೇರೆ ಬೇರೆ ರೀತಿ ಇದೆ. ಸೂಪರ್ ಮಾರ್ಕೆಟ್‌ನಲ್ಲಿ ಮನಸೋ ಇಚ್ಛೆ ದರ ನಿಗದಿ ಮಾಡಲಾಗಿದೆ" ಎಂದರು.

"ಧಾರಾ ರಿಫಿನ್ಡ್‌ ಸನ್ ಫ್ಲವರ್‌ ಆಯಿಲ್ 1 ಲೀಟರ್ ಬೆಲೆ ಸೂಪರ್ ಮಾರ್ಕೆಟ್‌ಗಳಲ್ಲಿ 190 ರೂ. ಇದೆ. ಬಿಗ್ ಮಾರ್ಟ್, ಸ್ಮಾರ್ಟ್‌ ಪಾಯಿಂಟ್ ಮುಂತಾದ ಕಡೆಗಳಲ್ಲಿ 230 ದರವಿದೆ. ಫಾರ್ಚೂನ್ ಆಯಿಲ್ ಬೆಲೆ ಕೆಲವು ಕಡೆ 150 ರೂ. ಇದೆ" ಎಂದು ಹೇಳಿದರು.

ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ ಮಾಧ್ಯಮಗಳ ಜೊತೆ ಮಾತನಾಡಿದ್ದು, "ಅಡುಗೆ ಎಣ್ಣೆಯನ್ನು ಕಾಳಸಂತೆಯಲ್ಲಿ ಮಾರಾಟ ಮಾಡುವ, ಅನಧಿಕೃತವಾಗಿ ದಾಸ್ತಾನು ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಎಚ್ಚರಿಕೆ ನೀಡಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+