ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಕೋಡ ಮಾರಾಟ ಕೂಡ ಸ್ವಾಭಿಮಾನಿ ಬದುಕಿನ ಒಂದು ಮಾರ್ಗ!

|
Google Oneindia Kannada News

Recommended Video

ಮೋದಿಯವರ ವಿವಾದಾತ್ಮಕ ಪಕೋಡ ಹೇಳಿಕೆ | ಇಲ್ಲಿದೆ ಪಕೋಡ ಓನರ್ ಕಥೆ | Oneindia Kannada

ಬೆಂಗಳೂರು, ಫೆಬ್ರವರಿ 07 : ಪಕೋಡಾ ಎಂದಾಕ್ಷಣ ಒಮ್ಮೆ ಕಣ್ಣುಮುಚ್ಚಿ ಅದರ ಕಲ್ಪನೆ ಮಾಡಿಕೊಂಡೇ ಬಿಡುತ್ತೇವೆ. ನಮಗೆ ತಿಳಿಯದಂತೆ ಬಾಯಲ್ಲಿ ನೀರೂರುತ್ತದೆ. ಮಳೆಗಾಲವಿರಲಿ, ಚಳಿಗಾಲವಿರಲಿ ನಾಲಿಗೆ ಮೊದಲು ಕೇಳುವುದು ಪಕೋಡವನ್ನೇ, ಇಷ್ಟು ದಿನ ಪಕೋಡಾ ಎಂದಾಕ್ಷಣ ಅದರ ರುಚಿ ನೆನಪಾಗಿ ಬಾಯಲ್ಲಿ ನೀರೂರುತ್ತಿತ್ತು. ಆದರೆ ಇದೀಗ ಪಕೋಡ ಮಾರುವವರ ಶ್ರಮದ ಬಗ್ಗೆಯೂ ಯೋಚನೆ ಮಾಡುವಂತಹ ಸಂದರ್ಭ ಒದಗಿಬಂದಿದೆ.

ಪಕೋಡ ಮಾರಾಟ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ. ಪ್ರಧಾನಿ ಮೋದಿ ಯಾವುದೇ ಉದ್ಯೋಗ ಸಿಗದಿದ್ದರೂ ಪಕೋಡ ಮಾರಾಟ ಮಾಡಿ ಜೀವನ ನಡೆಸಬಹುದು ಎಂಬ ಹೇಳಿಕೆ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಒಂದೆಡೆ ಪಕೋಡ ಮಾರಾಟ ಮಾಡಿ ಜೀವನ ಮಾಡುವವರ ಗುಣಮಟ್ಟವನ್ನು ಕೆಲವರು ಬಡತನ ಎಂಬಂತೆ ಪ್ರತಿಬಿಂಬಿಸುತ್ತಿದ್ದರೆ ಮತ್ತೊಂದೆಡೆ ಪಕೋಡ ಮಾರಾಟ ಕೂಡ ಕೂಡ ಸ್ವಾಭಿಮಾನಿ ಬದುಕಿನ ಮಾರ್ಗ ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿದೆ.

ನಿರುದ್ಯೋಗಿಗಳಾಗುವುದಕ್ಕಿಂತ 'ಪಕೋಡ' ಮಾರುವುದು ಲೇಸು: ಅಮಿತ್ ಶಾನಿರುದ್ಯೋಗಿಗಳಾಗುವುದಕ್ಕಿಂತ 'ಪಕೋಡ' ಮಾರುವುದು ಲೇಸು: ಅಮಿತ್ ಶಾ

ಇಂತಹ ಚರ್ಚೆಯೊಂದಿಗೆ ಇದೀಗ ಪಕೋಡಮಾಡುವವರ ಬದುಕು ಹೇಗಿರುತ್ತೆ ಎನ್ನುವ ಕುರಿತು ಆಲೋಚನೆ ಮಾಡುವಂತೆ ಮಾಡಿದೆ. ಪಕೋಡವನ್ನೇನೋ ತಿಂದು ಆಸ್ವಾಧಿಸುತ್ತೇವೆ ಆದರೆ ಅದರ ಹಿಂದಿರುವವರ ಶ್ರಮದ ಬಗ್ಗೆ ಯಾರೂ ಕೂಡ ಯೋಜನೆ ಮಾಡುವುದಿಲ್ಲ, ಪಕೋಡ ಮಾಡುವವರ ಹಿಂದೆ ಒಂದು ಕಟುಂಬದ ಭವಿಷ್ಯವೇ ನಿಂತಿರುತ್ತದೆ.

 ಕುಟುಂಬ ನಿರ್ವಹಣೆಗೆ ಪಕೋಡವೇ ಆಧಾರ

ಕುಟುಂಬ ನಿರ್ವಹಣೆಗೆ ಪಕೋಡವೇ ಆಧಾರ

ಕಳೆದ 16 ವರ್ಷದಿಂದ ಪಕೋಡ ಮಾರಾಟವನ್ನೇ ಜೀವನದ ಭಾಗವಾಗಿಸಿಕೊಂಡಿದ್ದೇನೆ, ಇದರಿಂದ ನಮ್ಮ ಕುಟುಂಬ ನೆಮ್ಮದಿಯಾಗಿದೆ. ದಿನಕ್ಕೆ 3 ರಿಂದ 4 ಸಾವಿರ ರೂ. ಸಂಪಾದನೆಯಾಗುತ್ತದೆ. ಪಕೋಡಕ್ಕೆ ಉಪಯೋಗಿಸುವ ವಸ್ತುಗಳೆಲ್ಲ ಹೊರತುಪಡಿಸಿ 3 ರಿಂದ 2 ಸಾವಿರ ಉಳಿತಾಯವಾಗುತ್ತದೆ. ಅದರಲ್ಲೇ ನಮ್ಮ ಕುಟುಂಬ ನಿರ್ವಹಣೆಯಾಗುತ್ತದೆ ಎಂದು ಉತ್ತರಹಳ್ಳಿಯ ಪಕೋಡ ಮಾರಾಟಗಾರ ನಾಗರಾಜ್ ಹೇಳುತ್ತಾರೆ.

ನಾವು ಬಡತನದಲ್ಲಿ ಜೀವನ ಸಾಗಿಸಿದ್ದೇವೆ ನಮ್ಮ ಮಕ್ಕಳಿಗೆ ಆ ಗತಿ ಬರಬಾರದೆಂದು ನಾವು ಮೊದಲು ಕೆಲಸ ಮಾಡುತ್ತಿದ್ದ ಯಜಮಾನರಿಂದ ಸಾಲ ಪಡೆದು ಪಕೋಡ ಸ್ಟಾಲ್ ಪ್ರಾರಂಭಿಸದೆವು. ಮೊದ ಮೊದಲು ಜನರೇ ಬರುತ್ತಿರಲಿಲ್ಲ, ಬೇಸರವಾಗುತ್ತಿತ್ತು. ಆದರೆ ಒಂದೆರೆಡು ವರ್ಷ ಕಳೆದ ಮೇಲೆ ಜನರು ಬರಲು ಪ್ರಾರಂಭಿಸಿದರು. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿದ್ದೇವೆ. ಒಳ್ಳೆಯ ಶಿಕ್ಷಣವನ್ನು ನೀಡುತ್ತಿದ್ದೇವೆ ಎನ್ನುತ್ತಾರೆ.

 ವಿವಿಧ ರೀತಿಯ ಪಕೋಡಾಗಳು

ವಿವಿಧ ರೀತಿಯ ಪಕೋಡಾಗಳು

ಬೆಂಗಳೂರಿನ ಬೀದಿ ಬೀದಿಗಳಲ್ಲಿ ಸಾವಿರಾರು ಜನ ಪಕೋಡ ಮಾರಾಟ ಮಾಡಿ ತಮ್ಮ ಉಪಜೀವನ ನಡೆಸುತ್ತಿದ್ದಾರೆ. ನಗರದ ಬಹುತೇಕ ಮಾರುಕಟ್ಟೆ ಪ್ರದೇಶ ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳು ಹಾಗೂ ಜನವಸತಿ ಪ್ರದೇಶಗಳ ಪ್ರತಿ ಮೂಲೆಯಲ್ಲೂ ಪಕೋಡ ಮಾರಾಟ ಮಾಡುವ ಜನರಿದ್ದಾರೆ. ಶಿವಾಜಿನಗರದ ರೆಸಲ್ ಮಾರ್ಕೆಟ್ ನಲ್ಲಿ ಈರುಳ್ಳಿ ಪಕೋಡದಿಂದ ಆರಂಭಗೊಂಡು ಚಿಕನ್, ಫಿಶ್ ಪಕೋಡಾ ದೊಂದಿಗೆ ತರಹೇವಾರಿ ಪಕೋಡಾ ಮಾರಾಟ ಮಾಡಿ ಜೀವನ ನಡೆಸುವ ನೂರಾರು ಯವಕರು ನಮ್ಮ ಕಣ್ಣ ಮುಂದೆ ಕಾಣಸಿಗುತ್ತಾರೆ. ಹಾಗೆಯೇ ಎಲೆಕ್ಟ್ರಾನಿಕ್ ಸಿಟಿ ಐಟಿಪಿಎಲ್ ನಲ್ಲೂ 50 ರೂ ಗೆ ಎರಡು ಪಕೋಡ ಮಾರಾಟ ಮಾಡುವ ಶ್ರೀಮಂತ ಪಕೋಡ ಮಾರಾಟಗಾರರೂ ಇದ್ದಾರೆ.

 ಯಾವುದೇ ವೃತ್ತಿಯ ಬಗ್ಗೆ ಕೀಳು ಭಾವನೆ ಬೇಡ

ಯಾವುದೇ ವೃತ್ತಿಯ ಬಗ್ಗೆ ಕೀಳು ಭಾವನೆ ಬೇಡ

ನಮಗೆ ನಮ್ಮ ವೃತ್ತಿಯಲ್ಲಿ ಯಾವುದೇ ಕೀಳು ಭಾವನೆ ಇಲ್ಲ, ಎಲ್ಲ ವೃತ್ತಿಯೂ ಹೊಟ್ಟೆಗೆ ಅನ್ನವನ್ನೇ ನೀಡುತ್ತದೆ. ಕೆಲವರು ಹೆಚ್ಚು ಹಣ ಸಂಪಾದನೆ ಮಾಡುತ್ತಾರೆ ಇನ್ನು ಕೆಲವರು ಕಡಿಮೆ ಸಂಪಾದನೆ ಮಾಡುತ್ತಾರೆ ಅಷ್ಟೇ ವ್ಯತ್ಯಾಸವಿರುತ್ತದೆ. ಆದರೆ ನಮ್ಮ ವೃತ್ತಿಯಿಂದ ನಮ್ಮ ಬದುಕು ಸುಗಮವಾಗಿದೆ ಅಷ್ಟೇ ಹೊರತು ಕಷ್ಟಕರವಾಗಿಲ್ಲ ಎಂದು ಪಕೋಡ ವ್ಯಾಪಾರಿ ಬಷೀರ್ ಹೇಳುತ್ತಾರೆ.

 ಪ್ರದೇಶಕ್ಕನುಗುಣವಾಗಿ ಪಕೋಡ ಬೆಲೆ ನಿರ್ಧಾರ

ಪ್ರದೇಶಕ್ಕನುಗುಣವಾಗಿ ಪಕೋಡ ಬೆಲೆ ನಿರ್ಧಾರ

ಆಯಾ ಪ್ರದೇಶದ ಜನರ ಜೀವನದ ಗುಣಮಟ್ಟ ಆಧರಿಸಿ ಆಯಾ ದರದಲ್ಲಿ ಪಕೋಡ ಮಾರಾಟ ನಡೆಯುತ್ತದೆ. ಬೆಂಗಳೂರಿನ ಡಾಲರ್ಸ್ ಕಾಲೊನಿಯಲ್ಲಿ 40 ರಿಂದ 50 ರೂ ಗೆ ಪಕೋಡ ಮಾರಾಟ ಮಾಡಿದರೆ ಒಂದು ಪ್ಲೇಟ್ ಮಾಡುವವರಿದ್ದರೆ. ಶ್ರೀರಾಮಪುರ, ಶಿವಾಜಿನಗರದಂತಹ ಬಡವರು ವಾಸಿಸುವ ಪ್ರದಶೇಶದಲ್ಲಿ 5 ರಿಂದ 10 ರೂಗೆ ಒಂದು ಪ್ಲೇಟ್ ಪಕೋಡ ಮಾರಾಟ ಮಾಡುವ ಮತ್ತು ಅದೇ ದರದಲ್ಲಿ ಪಕೋಡ ತಿಂದು ಜೀವನ ನಡೆಸುವ ಜನರಿದ್ದಾರೆ.

 ಪಕೋಡಕ್ಕೆ ತಿಂಡಿತಿನಿಸುಗಳ ಪಟ್ಟಿಯಲ್ಲಿ ಅಗ್ರಸ್ಥಾನ

ಪಕೋಡಕ್ಕೆ ತಿಂಡಿತಿನಿಸುಗಳ ಪಟ್ಟಿಯಲ್ಲಿ ಅಗ್ರಸ್ಥಾನ

ಪಕೋಡ ಬಜ್ಜಿ ಉತ್ತರ ಕರ್ನಾಟಕದ ಮಿರ್ಚಿ ಒಂದೆಡೆಯಾದರೆ ಫಿಶ್, ಚಿಕನ್ ಮತ್ತಿತರೆ ನಾನ್ ವೆಜ್ ಪಕೋಡಾಗಳು ಮತ್ತೊಂದೆಡೆ ಸಾಲು ಸಾಲು ಮಳಿಗೆಗಳಲ್ಲಿ ಸಿಗುತ್ತದೆ. ಪಕೋಡ ,ಮುಖ್ಯ ಆಹಾರವಲ್ಲದಿದ್ದರೂ ಪಾರಂಪರಿಕವಾಗಿ ಭಾರತೀಯರ ನಾನಾ ಬಗೆಯ ತಿಂಡಿ ತಿನಿಸುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಮದುವೆ ಮುಂಜಿ ಸಮಾರಂಭಗಳಲ್ಲಿ ಊಟದ ಭಕ್ಷ್ಯ ಭೋಜನ ಜತೆಗೆ ಪಕೋಡಕ್ಕೆ ವಿಶೇಷ ಸ್ಥಾನ ಇದ್ದೇ ಇರುತ್ತದೆ.

 ಪಕೋಡ ಮಾರಾಟ ಉದ್ಯೋಗ ನಗರದಿಂದ ಹಳ್ಳಿಯವರೆಗೂ ಹಬ್ಬಿದೆ.

ಪಕೋಡ ಮಾರಾಟ ಉದ್ಯೋಗ ನಗರದಿಂದ ಹಳ್ಳಿಯವರೆಗೂ ಹಬ್ಬಿದೆ.

ಒಂದಡೆ ಕೇವಲ ಪಕೋಡ ವನ್ನು ಆಹಾರದ ದೃಷ್ಟಿಯಿಂದ ನೋಡಿದರೆ ಹೇಗೆ ಭಾರತೀಯರ ಅವಿಭಾಜ್ಯ ಅಂಗವಾಗಿದೆಯೋ ಅದೇ ರೀತಿ ಮೆಟ್ರೋ ಪಾಲಿಟನ್ ಸಿಟಿಯಿಂದ ಹಿಡಿದು ಹಳ್ಳಿಯವರೆಗೆ ಪಕೋಡ ಸಿದ್ಧ ಪಡಿಸುವುದು ಮತ್ತು ಮಾರಾಟ ಮಾಡುವುದು ನಮ್ಮ ಸಾಮಾಜಿಕ ಆರ್ಥೀಕ ಸ್ಥಿತಿಯ ಭಾಗವಾಗಿದೆ. ಬೆಂಗಳೂರಿನಂಥಹ ನಿತ್ಯ ಬೆಳೆಯುತ್ತಿರುವ ನಗರದಲ್ಲಿ ಸರಿ ಸುಮಾರು ಹಲವು ಸಾವಿರ ಜನರು, ಪಕೋಡ ಮಾರಾಟ ಮಾಡುತ್ತಾ ಜೀವನ , ಸಣ್ಣ ಪುಟ್ಟ ಗ್ರಾಮಗಳಲ್ಲೂ ಮೂರ್ನಾಲ್ಕು ಸಾವಿರ ಜನರು ಕುಟುಂಬ ಸಣ್ಣ ಪುಟ್ಟ ಗ್ರಾಮದಲ್ಲೂ ಇದೇ ಪಕೋಡ ಮಾರಾಟದ ಉದ್ಯೋಗವನ್ನು ಅವಲಂಬಿಸಿದ್ದಾರೆ.

ಮಾರಾಟಗಾರರ ಮಾತುಗಳು

ಮಾರಾಟಗಾರರ ಮಾತುಗಳು

ಬೆಂಗಳೂರಿನ ಜಯನಗರ ಪ್ರದೇಶದಲ್ಲಿ 20 ರಿಂದ 25 ಸಾವಿರ ವ್ಯಾಪಾರ ಮಾಡುವ ಪಕೋಡ ಮಾರಾಟಗಾರರು ದೂರದ ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಚಿಕ್ಕ ಗ್ರಾಮದಲ್ಲಿ ದಿನಕ್ಕೆ ಆರು ಸಾವಿರ ಪಕೋಡ ಮಾರುವ ಇಬ್ಬರು ಮಾರಾಟ ಗಾರರ ಜೀವನವನ್ನು ಇದೇ ಪಕೋಡ ವೃತ್ತಿ ಮುನ್ನಡೆಸುತ್ತಿದೆ.

ಚಹಾ ಮಾರುವ ವ್ಯಕ್ತಿಯೊಬ್ಬ ದೇಶದ ಅತ್ಯುನ್ನತ ಸ್ಥಾನ ಗಳಿಸುವುದಾದರೆ ಪಕೋಡ ಮಾರುವ ಆರ್ಡಿನರಿ ವರ್ತಕನೊಬ್ಬ ತನ್ನ ಆರು ಜನ ಸದಸ್ಯರ ಜಕುಟುಂಬವನ್ನು ನಿರ್ವಹಣೆ ಮಾಡುತ್ತಾನೆಂದರೆ ಅದು ಸವಾಲಿನ ಕೆಲಸವೇ ಯಾವುದೇ ವೃತ್ತಿಗೆ ಅದರದ್ದೇ ಆದ ಗೌರವ ಹಾಗೂ ಕಷ್ಟಗಳು ಇದ್ದೇ ಇರುತ್ತದೆ. ಪಕೋಡ ಮಾರಾಟದ ಕೆಲಸ ಕೂಡ ಸುಲಭವೇನಲ್ಲ, ಕಷ್ಟಪಟ್ಟು ದುಡಿದು ಸ್ವಾಭಿಮಾನದಿಂದಲೇ ಬದುಕುತ್ತಾನೆ. ಇದರಿಂದ ನಮಗೆ ಯಾವತ್ತೂ ಕೀಳು ಭಾವನೆ ಬಂದಿಲ್ಲ ಎಂದು ಮಾರಾಟಗಾರರು ಹೇಳಿದ್ದಾರೆ.

English summary
Hundreds of street vendors living their life with struggle and dignity. Pakoda selling is also part of this way of life. Here is a story about the most controversial Pakoda selling.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X