ವಿಧಾನಸೌಧದಲ್ಲಿ ಗೂಬೆ ದರ್ಶನ; ಸರಕಾರಕ್ಕೆ, ಕಾಂಗ್ರೆಸ್ ಗೆ ಆರ್ಥಿಕ ಸಂಕಷ್ಟ!
ಬೆಂಗಳೂರು, ಆಗಸ್ಟ್ 26 : ರಾಜ್ಯ ಸರಕಾರಕ್ಕೆ ಆರ್ಥಿಕ ಸಂಕಷ್ಟಗಳು ಎದುರಾಗಲಿದೆಯಾ? ಮುಂದಿನ ವಿಧಾನಸಭೆ ಚುನಾವಣೆಗೆ ಖರ್ಚು ಮಾಡಲು ಹಣವಿಲ್ಲದೆ ಕಾಂಗ್ರೆಸ್ ಪಕ್ಷ ಪರದಾಡಲಿದೆಯಾ? ಒಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಸಂಕಷ್ಟ ಎದುರಾಗುವ ಸೂಚನೆಗಳು ನಿಚ್ಚಳವಾಗಿವೆ ಎನ್ನುತ್ತಾರೆ ಜ್ಯೋತಿಷಿಗಳು.
ಅಷ್ಟಕ್ಕೂ ಆಗಿದ್ದೇನೆಂದರೆ ವಿಧಾನಸೌಧದ ಮುಖ್ಯಮಂತ್ರಿಗಳ ಕೋಣೆಯ ಪಕ್ಕದಲ್ಲೇ ಗೂಬೆ ಕಾಣಿಸಿಕೊಂಡಿದೆ. ಈ ವಿದ್ಯಮಾನ ಹೊರಬೀಳುತ್ತಿದ್ದಂತೆ ನಾನಾ ಥರದ ಸುದ್ದಿ ಹರಿದಾಡಲು ಕಾರಣವಾಗಿದೆ. ಸಂಪುಟ ಸಭೆ ನಡೆಯುವ ಕೋಣೆ ಬಾಗಿಲಲ್ಲೇ ಗೂಬೆ ಕಾಣಿಸಿಕೊಂಡಿದ್ದು, ಇದು ಮುಖ್ಯಮಂತ್ರಿಗಳ ಕೋಣೆ ಪಕ್ಕದಲ್ಲೇ ಇದೆ.

"ಇದು ರಾಜ್ಯ ಸರಕಾರದ ದಿವಾಳಿತನವನ್ನು ಸೂಚಿಸುತ್ತಿದೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ ಹಣ ಹೊಂದಿಸಲು ಅಂದರೆ ಖರ್ಚಿಗೆ ದುಡ್ಡು-ಕಾಸು ಹವಣಿಸಲಾಗದೆ ಕಾಂಗ್ರೆಸ್ ಪರದಾಡುವ ಸೂಚನೆ ಇದು. ಇದರ ಜತೆಗೆ ರಾಜ್ಯದ ಹಲವು ಸಚಿವರು ವಿವಿಧ ರೀತಿಯಲ್ಲಿ ತೊಂದರೆಗೆ ಸಿಲುಕಿಕೊಳ್ಳುತ್ತಾರೆ ಎಂಬುದನ್ನು ಇದು ಸೂಚಿಸುತ್ತದೆ. ಗೂಬೆ ಕಾಣಿಸಿಕೊಳ್ಳುವುದು ಒಳ್ಳೆ ಶಕುನವಲ್ಲ" ಎಂದು ಜ್ಯೋತಿಷಿಗಳಾದ ಪಂಡಿತ್ ವಿಠ್ಠಲ ಭಟ್ ಒನ್ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.












Click it and Unblock the Notifications