ಬೆಂಗಳೂರಿನಲ್ಲಿ 22 ಕೊವಿಡ್ ರೋಗಿಗಳ ಆಸ್ಪತ್ರೆ ಶುಲ್ಕ ವಾಪಸ್

ಬೆಂಗಳೂರು, ಜುಲೈ 25: 22 ಕೊವಿಡ್ 19 ರೋಗಿಗಳ ಆಸ್ಪತ್ರೆ ಶುಲ್ಕ ವಾಪಸ್ ಬಂದಿದೆ. ಕರ್ನಾಟಕ ಸರ್ಕಾರ ವಿಧಿಸಿರುವುದಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಿದ ಖಾಸಗಿ ಆಸ್ಪತ್ರೆಗಳಿಂದ 22 ಮಂದಿ ರೋಗಿಗಳಿಗೆ 24 ಲಕ್ಷ ರೂನಷ್ಟು ಶುಲ್ಕ ವಾಪಸ್ ಬರಲಿದೆ.

Recommended Video

      ಭಾರತದಲ್ಲಿ ಚೀನಾ ವ್ಯವಹಾರ ಇನ್ನು ಮುಂದೆ ಸುಲಭವಲ್ಲ | Oneindia Kannada

      ಈ ಕುರಿತು ಹಿರಿಯ ಐಪಿಎಸ್ ಅಧಿಕಾರಿ ರೂಪಾ ಡಿ ಟ್ವೀಟ್ ಮಾಡಿದ್ದರು. ಬಳಿಕ ಹಲವು ಬೆಳವಣಿಗೆಗಳು ನಡೆದಿದೆ. ಸರ್ಕಾರ ರೆಫರ್ ಮಾಡಿದರೆ ಮಾತ್ರ ಸರ್ಕಾರದ ಬೆಲೆಗೆ ಚಿಕಿತ್ಸೆ ನೀಡಲಾಗುತ್ತಿತ್ತು.

      ಮತ್ತೊಂದು ಟ್ವೀಟ್‌ನಲ್ಲಿ ಈ ಕುರಿತು ವಿವರ ನೀಡಿದ್ದು, ಹರ್ಷ ಗುಪ್ತಾ ಹಾಗೂ ತಂಡ ಆಸ್ಪತ್ರೆಗಳಿಗೆ ತೆರಳಿ ಅವರು ಪಡೆಯುತ್ತಿದ್ದ ಶುಲ್ಕದ ಬಗ್ಗೆ ಖಾತ್ರಿ ಮಾಡಿಕೊಂಡು ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಲಾಯಿತು. ಬಳಿಕ 22 ರೋಗಿಗಳಿಗೆ ಹಣ ವಾಪಸ್ ನೀಡಲಾಗಿದೆ.

      Overcharged By Bengaluru Hospitals, 22 Coronavirus Patients To Be Refunded Rs 24 Lakh

      ನಮ್ಮ ಜೊತೆ ಸಹಕಾರ ನೀಡಿದ್ದಕ್ಕಾಗಿ ಆಸ್ಪತ್ರೆಯ ಆಡಳಿತ ಮಂಡಳಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗೆಯೇ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್ ಅವರು ಏಳು ಮಂದಿಯ ಸಮಿಯನ್ನು ರಚಿಸಿದ್ದರು. ಅದರಲ್ಲಿ ಓರ್ವ ಐಪಿಎಸ್ ಹಾಗೂ ಓರ್ವ ಐಎಎಸ್ ಅಧಿಕಾರಿಗಳಿದ್ದರು.

      ಇದೇ ಕಾರಣಕ್ಕಾಗಿಯೇ ಏಳು ಮಂದಿಯ ಸಮಿತಿಯನ್ನು ರಚನೆ ಮಾಡಲಾಗಿತ್ತು. ಸಮಿತಿ ಪತ್ತೆ ಹಚ್ಚಿನ ಮೊದಲ ಪ್ರಕರಣ ಇದಾಗಿದೆ. ನಗರದ ಮೂರು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಹೆಚ್ಚಿನ ದರ ವಿಧಿಸಲಾಗುತ್ತಿತ್ತು ಎಂಬುದು ತಿಳಿದುಬಂದಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+