ಬೆಂಗಳೂರಲ್ಲಿ ಕೋವಿಡ್ ಸೋಂಕಿತ 3 ಸಾವಿರ ಜನರು ನಾಪತ್ತೆ!

ಬೆಂಗಳೂರು, ಜುಲೈ 27 : ಬೆಂಗಳೂರು ನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 45,453ಕ್ಕೆ ಏರಿಕೆಯಾಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 891.

Recommended Video

      EMISAT ಪ್ರಕಾರ India China Border ನಲ್ಲಿ ಇನ್ನು ಬೆಂಕಿ ಆರಿಲ್ಲ | Oneindia Kannada

      ನಗರದಲ್ಲಿ ಕೊರೊನಾ ವೈರಸ್ ಸೋಂಕಿತ 3 ಸಾವಿರ ಜನರ ಸುಳಿವು ಇನ್ನೂ ಪತ್ತೆಯಾಗಿಲ್ಲ. ಬಿಬಿಎಂಪಿ ಮತ್ತು ಕರ್ನಾಟಕ ಸರ್ಕಾರ ಸೋಂಕಿತರನ್ನು ಪತ್ತೆ ಹಚ್ಚಲು ಪ್ರಯತ್ನ ನಡೆಸುತ್ತಲೇ ಇದೆ.

      ಕೊರೊನಾ ವೈರಸ್ ಸೋಂಕಿನ ಪರೀಕ್ಷೆ ಮಾಡಿಸುವಾಗ 4500 ಜನರು ಸುಳ್ಳು ವಿಳಾಸ, ಮೊಬೈಲ್ ನಂಬರ್ ನೀಡಿದ್ದರು. ಇವರಲ್ಲಿ ಹಲವರಿಗೆ ಸೋಂಕು ಇರುವುದು ದೃಢಪಟ್ಟಿದೆ. ಆದರೆ, ಅವರನ್ನು ಹುಡುಕುವುದು ಸವಾಲಾಗಿದೆ.

      ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಈ ಕುರಿತು ಮಾಹಿತಿ ನೀಡಿದ್ದಾರೆ. "3,338 ಜನರ ಮಾದರಿಗಳ ಪರೀಕ್ಷೆ ವರದಿ ಬಂದಿದೆ. ಇವರಲ್ಲಿ ಕೆಲವರು ಸುಳ್ಳು ವಿಳಾಸ, ಮೊಬೈಲ್ ನಂಬರ್ ನೀಡಿದ್ದಾರೆ" ಎಂದು ಹೇಳಿದರು.

      ಹುಡುಕುವ ಕಾರ್ಯ ನಡೆಯುತ್ತಿದೆ

      ಹುಡುಕುವ ಕಾರ್ಯ ನಡೆಯುತ್ತಿದೆ

      "ಪ್ರಾರಂಭದಿಂದ ಇಲ್ಲಿಯ ತನಕ 3,338 ಜನರು ವರದಿ ಪಾಸಿಟಿವ್ ಬಂದಿದೆ. ಆದರೆ, ಅವರು ನಾಪತ್ತೆಯಾಗಿದ್ದಾರೆ. ಸೋಂಕಿತರನ್ನು ಹುಡುಕುವ ಕಾರ್ಯವನ್ನು ಪಾಲಿಕೆ ಮಾಡುತ್ತಿದೆ" ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್ ಹೇಳಿದ್ದಾರೆ.

      ಬೆಂಗಳೂರಿನಲ್ಲಿ ಕಟ್ಟೆಚ್ಚರ

      ಬೆಂಗಳೂರಿನಲ್ಲಿ ಕಟ್ಟೆಚ್ಚರ

      ಕಳೆದ 14 ದಿನಗಳಲ್ಲಿ ಬೆಂಗಳೂರು ನಗರದಲ್ಲಿ 27,000 ಹೊಸ ಕೊರೊನಾ ವೈರಸ್ ಸೋಂಕಿನ ಪ್ರಕರಣ ದಾಖಲಾಗಿದೆ. ಈ ಮೂಲಕ ನಗರದಲ್ಲಿನ ಒಟ್ಟು ಸೋಂಕಿತರ ಸಂಖ್ಯೆ 45,453ಕ್ಕೆ ಏರಿಕೆಯಾಗಿದೆ. ಇದುವರೆಗೂ ನಗರದಲ್ಲಿ 891 ಜನರು ಮೃತಪಟ್ಟಿದ್ದಾರೆ. ಆದ್ದರಿಂದ, ನಗರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.

      ಬೆಂಗಳೂರು ಹಾಟ್ ಸ್ಪಾಟ್

      ಬೆಂಗಳೂರು ಹಾಟ್ ಸ್ಪಾಟ್

      ಕರ್ನಾಟಕದಲ್ಲಿಯೇ ಬೆಂಗಳೂರು ನಗರ ಕೋವಿಡ್ ಹಾಟ್ ಸ್ಪಾಟ್ ಆಗಿದೆ. ಕರ್ನಾಟಕದಲ್ಲಿ 58,417 ಸಕ್ರಿಯ ಪ್ರಕರಣಗಳಿವೆ. ಇವುಗಳಲ್ಲಿ 33,156 ಸಕ್ರಿಯ ಪ್ರಕರಣಗಳು ಬೆಂಗಳೂರು ನಗರದಲ್ಲಿಯೇ ಇವೆ.

      ಭಾನುವಾರದ ಲಾಕ್ ಡೌನ್

      ಭಾನುವಾರದ ಲಾಕ್ ಡೌನ್

      ಬೆಂಗಳೂರು ನಗರದಲ್ಲಿ ಸೋಂಕು ಹರಡುವಿಕೆ ತಡೆಯಲು ಜುಲೈ 14ರಿಂದ ಒಂದು ವಾರದ ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಬಳಿಕ ಭಾನುವಾರದ ಸಂಪೂರ್ಣ ಲಾಕ್ ಡೌನ್ ಸಹ ಜಾರಿಗೆ ತರಲಾಗಿದೆ. ನಗರದಲ್ಲಿ ಕೊರೊನಾ ನಿಯಂತ್ರಿಸಲು 24 ಸಮಿತಿಗಳನ್ನು ರಚನೆ ಮಾಡಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+