ರಾಜ್ಯ ಸರ್ಕಾರದಿಂದ ಶೀಘ್ರ 'ದಂತ ಆರೋಗ್ಯ ಸಮೀಕ್ಷೆ'?

ಬೆಂಗಳೂರು, ಡಿ. 8: ಇಂಗ್ಲಿಷ್‌ನಲ್ಲಿ Oral health is gateway to overall health ಎಂಬ ಮಾತಿದೆ. 'ಬಾಯಿ ಆರೋಗ್ಯವೇ ಸಂಪೂರ್ಣ ದೈಹಿಕ ಆರೋಗ್ಯದ ಹೆಬ್ಬಾಗಿಲು' ಎಂದರ್ಥ. ಆಹಾರ ಸೇವನೆಗೆ ದೇವರು ಕೊಟ್ಟಿರುವ ಈ ಮಾರ್ಗವೇ ಅನಾರೋಗ್ಯ ಪೀಡಿತವಾಗಿದ್ದರೆ ಸೇವಿಸುವ ಎಂತಹ ಪೌಷ್ಠಿಕ ಆಹಾರವೂ ಮಲಿನವಾಗಿಯೇ ಹೊಟ್ಟೆಗೆ ಹೋಗುತ್ತದೆ.

ಹೊಟ್ಟೆಯು ಎಲ್ಲ ಆರೋಗ್ಯ ಹಾಗೂ ಅನಾರೋಗ್ಯಗಳಿಗೆ ಮೂಲ ಎಂದು ಯೋಗ ಹಾಗೂ ವೈದ್ಯಶಾಸ್ತ್ರ ಹೇಳುತ್ತದೆ. ಹೊಟ್ಟೆಯ ಆರೋಗ್ಯ ಬಾಯಿಯ ಸ್ವಚ್ಛತೆಯನ್ನು ಅವಲಂಬಿಸಿದೆ. ಅಂದರೆ ಬಾಯಿ ಅಥವಾ ಹಲ್ಲು ಪರೋಕ್ಷವಾಗಿ ದೇಹದ ಆರೋಗ್ಯಕ್ಕೆ ಮೂಲ ಎಂದಾಯಿತು. [ದಂತಭಾಗ್ಯ ಯೋಜನೆಗೆ ನವೆಂಬರ್ ನಲ್ಲಿ ಚಾಲನೆ]

ಸಮೀಕ್ಷೆಗೆ ಸಲಹೆ: ಆದರೆ, ರಾಜ್ಯದಲ್ಲಿ ಬಾಯಿ ಅದರಲ್ಲೂ ಹಲ್ಲಿನ ಅನಾರೋಗ್ಯ ತೀವ್ರ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ 'ಬಾಯಿ ಆರೋಗ್ಯ ನೀತಿ ಸಮಿತಿ'ಯು ದಂತ ಆರೋಗ್ಯದ ಕುರಿತು ಸಮೀಕ್ಷೆ ನಡೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದೆ. ಸರ್ಕಾರವು ಜಾರಿಗೆ ತಂದ 'ದಂತ ಭಾಗ್ಯ' ಯೋಜನೆಯ ಲೋಕಾರ್ಪಣೆ ಸಂದರ್ಭದಲ್ಲಿ ಈ ಕುರಿತು ಸರ್ಕಾರಕ್ಕೆ ಸಮಿತಿ ಅಧ್ಯಕ್ಷ ಡಾ. ಗಣೇಶ ಶೆನೊಯ್ ಪಂಚಮಲ್ ಪ್ರಸ್ತಾವನೆ ಸಲ್ಲಿಸಿದ್ದಾರೆ. [ಹಿರಿಯ ನಾಗರಿಕರಿಗೆ ದೊರೆಯುವ ಸೌಲಭ್ಯಗಳು]

dental

ಹಲ್ಲಿನ ಸಮಸ್ಯೆ ನಿವಾರಣೆಗೆ ರಾಜ್ಯ ಸರ್ಕಾರ ವಿಶೇಷ ಅನುದಾನ ಬಿಡುಗಡೆ ಮಾಡಬೇಕು. ಹಲ್ಲಿನ ಆರೋಗ್ಯ ಸಮಸ್ಯೆಗಳನ್ನು ನೋಡಿಕೊಳ್ಳಲು ಜಂಟಿ ನಿರ್ದೇಶಕ ಅಥವಾ ಉಪ ನಿರ್ದೇಶಕ ಮಟ್ಟದ ಅಧಿಕಾರಿಯನ್ನು ಆರೋಗ್ಯ ನಿರ್ದೇಶನಾಲಯದಲ್ಲಿ ನೇಮಿಸಬೇಕು ಎಂದು ಸಲಹೆ ನೀಡಿದ್ದಾರೆ. [ಸರ್ಕಾರ ಒಪ್ಪಿಕೊಂಡ ವೈದ್ಯರ ಬೇಡಿಕೆಗಳು]

ಮುಂದಿನ ಆರು ತಿಂಗಳುಗಳಲ್ಲಿ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ಯೋಜನೆಯ ಸಮೀಕ್ಷೆಗೆಂದು ನೇಮಿಸಲಾಗುವುದು. ನಂತರ ದಂತ ವೈದ್ಯಕೀಯ ನೀತಿಯನ್ನು ರೂಪಿಸಲಾಗುವುದು ಎಂದು ಯೇಣೆಪೊಯಾ ದಂತ ಮಹಾವಿದ್ಯಾಲಯದಲ್ಲಿ ಸಾರ್ವಜನಿಕ ದಂತ ಚಿಕಿತ್ಸೆ ಇಲಾಖೆಯ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿರುವ ಡಾ. ಪಂಚಮಲ್ ತಿಳಿಸಿದ್ದಾರೆ. [ಕುಡಿಯುವ ನೀರಿನ ಕುರಿತು ಎಚ್ಚರವಿರಲಿ]

37 ಸಾವಿರ ಜನರಿಗೆ ದಂತಭಾಗ್ಯ: ರಾಜ್ಯ ಸರ್ಕಾರವು ಜಾರಿಗೆ ತಂದಿರುವ ದಂತಭಾಗ್ಯ ಯೋಜನೆಯಡಿ 37 ಸಾವಿರ ಬಡ ಹಿರಿಯ ನಾಗರಿಕರಿಗೆ ದಂತ ಭಾಗ್ಯ ಯೋಜನೆಯಡಿ ಉಚಿತ ದಂತ ಚಿಕಿತ್ಸೆ ನೀಡಲಾಗುವುದು. ಯೋಜನೆ ಜಾರಿಯ ಜವಾಬ್ದಾರಿಯನ್ನು Accredited Social Health Activists (ಆಶಾ) ಸಂಸ್ಥೆಗೆ ವಹಿಸಲಾಗಿದೆ. ಪ್ರತಿ ರೋಗಿಗೆ 100 ರೂ.ಗಳಂತೆ ಸಂಸ್ಥೆಗೆ ಪ್ರೋತ್ಸಾಹ ಧನ ನೀಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+