ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಿ 2 ರಿಂದ ಆರಂಭವಾಗಬೇಕಿದ್ದ ಕಾರ್ಯಾಚರಣೆ ಮುಂದೂಡಿಕೆ
ಬೆಂಗಳೂರು, ಆಗಸ್ಟ್ 30: ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರಿಂದ ಆಗಸ್ಟ್ 31 ರಂದು ಆರಂಭಿಸಬೇಕಿದ್ದ ಕಾರ್ಯಾಚರಣೆಯನ್ನು ಮುಂಡೂಡಲಾಗಿದ್ದು, ಹೊಸ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುತ್ತದೆ.
ಆಗಸ್ಟ್ 31 ರಂದು ಬೆಳಿಗ್ಗೆ 10:45 ರಿಂದ ಹೊರಡುವ ಮತ್ತು ಆಗಮಿಸುವ ಎಲ್ಲಾ ಅಂತರರಾಷ್ಟ್ರೀಯ ವಿಮಾನಗಳು ಟರ್ಮಿನಲ್ 2 ನಿಂದ ಕಾರ್ಯಾಚರಣೆಯನ್ನು ಪ್ರಾರಂಭಿಸುತ್ತವೆ ಎಂದು ಈ ಹಿಂದೆ ತಿಳಿಸಲಾಗಿತ್ತು.

ಏರ್ ಇಂಡಿಯಾ ಹಾಗೂ ಇಂಡಿಗೋ ಏರಲೈನ್ಸ್ ಈ ಎರಡು ಭಾರತೀಯ ಸಂಸ್ಥೆ ಸೇರಿ ಒಟ್ಟು 27 ವಿಮಾನಯಾನ ಸಂಸ್ಥೆಗಳು T1 ನಿಂದ ವಿಶಾಲವಾದ T2ಗೆ ಸ್ಥಳಾಂತರಗೊಂಡವರು. ಈ ಎಲ್ಲ ಸಂಸ್ಥೆಗಳು ಇನ್ಮುಂದೆ ಟರ್ಮಿನಲ್ 2ನಿಂದಲೇ ಕಾರ್ಯಾಚರಣೆ ನಡೆಸಲಿವೆ ಎಂದು ತಿಳಿಸಲಾಗಿತ್ತು
ಸಿಂಗಪುರ ಏರ್‌ಲೈನ್ಸ್‌ನ (SQ 508) ಟಿ2 ನಲ್ಲಿ 10.55 ಕ್ಕೆ ಲ್ಯಾಂಡ್ ಆಗಲಿರುವ ಮೊದಲ ಅಂತಾರಾಷ್ಟ್ರೀಯ ವಿಮಾನ ಆಗಿದೆ. ಇನ್ನೂ 11.45 ಕ್ಕೆ ಸಿಂಗಾಪುರಕ್ಕೆ ಹೊರಡುವ (SQ 509) ಮೊದಲ ವಿಮಾನ ಟಿ2ನಿಂದ ಹಾರಲಿದೆ ಎಂದು ಏರ್‌ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದರು.
Breaking: @BLRAirport postpones shifting of international operations to Terminal 2 of Kempegowda International Airport, Bengaluru which was originally scheduled for August 31, 2023.
— ChristinMathewPhilip (@ChristinMP_) August 30, 2023
New date will be announced on Wednesday. https://t.co/GCJh2wbSkA
25 ಅಂತಾರಾಷ್ಟ್ರೀಯ (ಎತಿಹಾದ್, ಕ್ವಾಂಟಾಸ್, ಬ್ರಿಟಿಷ್ ಏರ್‌ವೇಸ್ ಮತ್ತು ಕತಾರ್ ಏರ್‌ವೇಸ್) ಸಂಸ್ಥೆಯ ವಿಮಾನಗಳು ಟರ್ಮಿನಲ್ 2ನಿಂದಲೇ ಪೂರ್ಣ ಪ್ರಮಾಣದ ಕಾರ್ಯಾಚರಣೆ ನಡೆಸಲಿವೆ. ಇದರೊಂದಿಗೆ ಏರ್ ಇಂಡಿಯಾ ಮತ್ತು ಇಂಡಿಗೋ ಇವೆರೆಡು ಮಾತ್ರ ಇಲ್ಲಿಂದ ಸೇವೆ ನೀಡಲಿರುವ ಭಾರತೀಯ ನಾಗರಿಕ ವಿಮಾನಯಾನ ಸಂಸ್ಥೆಗಳಾಗಿವೆ.
ಒಟ್ಟು ಸುಮಾರು 27 ವಿಮಾನಯಾನ ಸಂಸ್ಥೆಗಳು ಟಿ1ನಿಂದ ಟಿ2 ಗೆ ಸ್ಥಳಾಂತರಗೊಂಡರೆ, ಇನ್ನುಳಿದ ಸುಮಾರು 200 ವಿಮಾನಗಳನ್ನು ಒಳಗೊಂಡ ಇಂಡಿಗೋ ಸಂಸ್ಥೆ ದೇಶೀಯ ಕಾರ್ಯಾಚರಣೆಗಳು T1 ನಿಂದಲೇ ಸೇವೆ ಮುಂದುವರಿಸಲಿವೆ. ಇದರಲ್ಲಿ ಯಾವ ಬದಲಾವಣೆಗಳು ಇಲ್ಲ ಎಂದು ಹೇಳಲಾಗಿದೆ.
ಕೆಐಎನ ಟರ್ಮಿನಲ್ 2ರ ಹಂತ 1 ಅನ್ನು ಟರ್ಮಿನಲ್ ಇನ್ ಎ ಗಾರ್ಡನ್ ಎಂದು ಹೆಸರಿಸಲಾಗಿದೆ. ಇದು ಬೆಂಗಳೂರು ಉದ್ಯಾನ ನಗರಿಯ ಪ್ರತಿಬಿಂಬದಂತೆ ನಿರ್ಮಿಸಲಾಗಿದೆ. ಸುಮಾರು 5,000 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನಿರ್ಮಾಣ ಮಾಡಲಾಗಿದೆ. ಕಳೆದ 9 ತಿಂಗಳ ಹಿಂದೆ 2022ರ ನವೆಂಬರ್ ನಲ್ಲಿ ಪ್ರಧಾನಮಂತ್ರಿಗಳಿಂದ ಟಿ2 ಉದ್ಘಾಟನೆಗೊಂಡಿದೆ. ಅದಾದ ಬಳಿಕ 2023ರ ಜನವರಿ 15ರಿಂದ ಟಿ2 ಮೂಲಕ ಭಾರತೀಯ ಮೂಲದ ಸಂಸ್ಥೆಯಿಂದ ವಿಮಾನ ಕಾರ್ಯಾಚರಣೆ ಆರಂಭವಾಯಿತು.
-
Ananya Birla: ಆರ್ಸಿಬಿ ಅಭಿಮಾನಿಗಳು ಹಾಗೂ ಸಹೋದರನಿಗೆ ಅನನ್ಯಾ ಬಿರ್ಲಾ ವಿಶೇಷ ಸಂದೇಶ -
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
March 25 Horoscope: ಈ 3 ರಾಶಿಗಳಿಗೆ ಅದೃಷ್ಟದ ಬಾಗಿಲು ತೆರೆದುಕೊಳ್ಳಲಿದೆ -
SSLC ಇಂಗ್ಲೀಷ್ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Karnataka Rains: ಧಾರಾಕಾರ ಮಳೆ! 7 ಜಿಲ್ಲೆಗಳಿಗೆ 'ಆರೆಂಜ್', 15ಕ್ಕೂ ಹೆಚ್ಚು ಜಿಲ್ಲೆಗಳಿಗೆ 'ಯೆಲ್ಲೋ' ಅಲರ್ಟ್ -
Gold: ಚಿನ್ನ ಖರೀದಿ ಮತ್ತು ಮಾರಾಟಕ್ಕೆ ಇದು ಒಳ್ಳೆಯ ಸಮಯವಲ್ಲ ಎಂದ ಅರ್ಥಶಾಸ್ತ್ರಜ್ಞೆ ಮೇರಿ ಜಾರ್ಜ್ -
ಡಬಲ್ ಡೆಕ್ಕರ್ ಫ್ಲೈಓವರ್ ಸಹಿತ ನಮ್ಮ ಮೆಟ್ರೋ ಕಾರಿಡಾರ್: ಯೋಜನೆಗೆ ಜೈಕಾದಿಂದ 6,775 ರೂ ಸಾಲ: BMRCL -
ಐಪಿಎಲ್ ಇತಿಹಾಸದಲ್ಲೇ ಆರ್ಸಿಬಿಯ ಹೊಸ ಅಧ್ಯಾಯ: 16,000 ಕೋಟಿಗೆ ಫ್ರಾಂಚೈಸಿ ಖರೀದಿಸಿದ ಆರ್ಯಮನ್ ಬಿರ್ಲಾ ಯಾರು? -
Gold Rate: ದಿಢೀರ್ ಏರಿಕೆ ಕಂಡ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಚಿನ್ನದ ದರ ಹೀಗಿದೆ.. -
Kishore Kumar Huli: ಮೋದಿ ಹೇಳಿಕೆ ಹಂಚಿಕೊಂಡು ನಿಮಗೆ ನಾಚಿಕೆ ಇದೆಯೇ ಎಂದ ನಟ ಕಿಶೋರ್ ಕುಮಾರ್ -
Jobs: ರಾಜ್ಯದ ಸರ್ಕಾರಿ ವಿವಿಗಳಲ್ಲಿ 1000 ಬೋಧಕ ಹುದ್ದೆಗಳ ಭರ್ತಿಗೆ ಸರ್ಕಾರ ಗ್ರೀನ್ ಸಿಗ್ನಲ್ -
ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಈ ನಿರ್ಧಾರ ಎಲ್ಲರಿಗೂ ಮೇಲ್ಪಂಕ್ತಿಯಾಗಲಿ: ಪ್ರತಾಪ್ ಸಿಂಹ












Click it and Unblock the Notifications