• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಾಜ್ಯದಲ್ಲಿ ಆನ್‌ಲೈನ್ ಮದ್ಯ ಮಾರಾಟ ನಿಷೇಧ: ಸಿಎಂ

|

ಬೆಂಗಳೂರು, ನವೆಂಬರ್ 2: ರಾಜ್ಯದಲ್ಲಿ ಆನ್‌ಲೈನ್ ಮದ್ಯ ಮಾರಾಟವನ್ನು ಶೀಘ್ರವೇ ನಿಷೇಧಿಸಲಾಗುವುದು ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಚುನಾವಣೆ: ಮದ್ಯ ಮಾರಾಟ ನಿಷೇಧ: ಮದ್ಯ ಸಂಗ್ರಹಕ್ಕೆ ಮುಂದಾದ ಗ್ರಾಹಕರು

ರಾಜ್ಯದಲ್ಲಿ ಆನ್‌ಲೈನ್ ಮಧ್ಯ ಮಾರಾಟಕ್ಕೆ ಸಂಬಂಧಿಸಿದ ಕಡತವನ್ನು ತರುವಂತೆ ಅಧಿಕಾರಿಗಳಿಗೆ ಈಗಾಗಲೇ ತಿಳಿಸಲಾಗಿದೆ. ತಕ್ಷಣವೇ ಆನ್‌ಲೈನ್ ಮದ್ಯ ಮಾರಾಟವನ್ನು ನಿಲ್ಲಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ವಿಧಾನಸಭಾ ಚುನಾವಣೆ: ವಿಶೇಷ ಅಂಚೆ ಚೀಟಿ ಬಿಡುಗಡೆ

ಆನ್‌ಲೈನ್ ಮದ್ಯ ಮಾರಾಟವನ್ನು ಅಧಿಕಾರಿಗಳು ಜಾರಿಗೊಳಿಸಿದ್ದಾರೆ . ಇದು ನನ್ನ ಗಮನಕ್ಕೆ ಬರುತ್ತಿದ್ದಂತೆಯೇ ಅದನ್ನು ನಿಲ್ಲಿಸಲು ಸೂಚನೆ ನೀಡಿದ್ದೇನೆ, ಯಾವ ಗುತ್ತಿಗೆದಾರರಿಗೆ ಲಾಭ ಮಾಡಿಕೊಡುಬ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದರು.

ದೀಪಾವಳಿ ವಿಶೇಷ ಪುರವಣಿ

ರಾಮನಗರ ಉಪಚುನಾವಣೆಯನ್ನು ಮುಂದೂಡುವಂತೆ ಬಿಜೆಪಿ ನಾಯಕರು ಒತ್ತಾಯಿಸುತ್ತಿದ್ದಾರೆ ಅದು ಆಯೋಗಕ್ಕೆ ಬಿಟ್ಟ ವಿಚಾರ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಶಿವಮೊಗ್ಗ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಮಾಡಿದ ಬಳಿಕ ಜಿಲ್ಲೆಯಾದ್ಯಂತ ಮದ್ಯ ಮಾರಾಟ ಎಚ್ಚರವಾಗಿದೆ ಎಂಬ ಆಯನೂರು ಮಂಜುನಾಥ್ ಅವರ ಹೇಳಿಕೆಗೆ ಪ್ರತಿಕ್ರಯಿಸಿ ಜಿಲ್ಲೆಯಲ್ಲಿ ನಾನು ಚುನಾವಣಾ ಪ್ರಚಾರ ಂಆಡಿದ ಬಳಿಕ ಬಿಜೆಪಿ ನಾಯಕರು ಗಾಬರಿ ಬಿದ್ದು ಮತದಾರರಿಗೆ ಮದ್ಯ ಹಂಚಿರಬಹುದು ಎಂದು ಟಾಂಗ್ ನೀಡಿದರು.

ಬೆಂಗಳೂರಿನಲ್ಲಿ ಹೊಸ ವರ್ಷಕ್ಕೆ ಎಣ್ಣೆನೇ ಖರ್ಚಾಗಿಲ್ಲ!

ರಾಮನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಎಲ್ ಚಂದ್ರಶೇಖರ್ ಅವರು ಚುನಾವಣಾ ಕಣದಿಂದ ಹಿಂದೆ ಸರಿದಿದ್ದು, ದೇವರ ದಯೆ ಇರಬಹುದು, ಚುನಾವಣೆಯಲ್ಲಿ ಎಷ್ಟೇ ಅಭ್ಯರ್ಥಿಗಳು ನಿಲ್ಲಲಿ, ನನಗೆ ಗಾಬರಿಯಿಲ್ಲ ಎಂದರು.

English summary
Chief monister HD kumaraswamy announced that online purchase of Liquor will be ban in the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X