ಮತ್ತೆ ಜನರಿಂದ ದೂರವಾಗುತ್ತಿರುವ ಈರುಳ್ಳಿ

ಮಹಾರಾಷ್ಟ್ರದ ನಾಸಿಕ್ ಮತ್ತು ಪುಣೆಯಿಂದ ಕರ್ನಾಟಕಕ್ಕೆ ಈರುಳ್ಳಿ ಸರಬರಾಜಾಗುತ್ತಿತ್ತು. ಆದರೆ, ಈ ಬಾರಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ಮಳೆ ಸುರಿದ ಪರಿಣಾಮ ಬೆಳೆ ಹಾನಿಯಾಗಿದ್ದು, ಹೊಸ ಈರುಳ್ಳಿ ಮಾರುಕಟ್ಟೆಗೆ ಬರುತ್ತಿಲ್ಲ. ಆದ್ದರಿಂದ ಈರುಳ್ಳಿ ಬೆಲೆ ಕೆ.ಜಿ.ಗೆ 70 ರೂ. ಆಗಿದೆ.
ಬುಧವಾರ ಬೆಂಗಳೂರಿನ ಹಾಪ್‌ಕಾಮ್ಸ್ ಗಳಲ್ಲಿ ಕೆ.ಜಿ.ಈರುಳ್ಳಿ ಬೆಲೆ 75 ರೂ. ಆಗಿದ್ದರೆ, ಚಿಲ್ಲರೆ ಮಾರಾಟ ಮಳಿಗೆ ಮತ್ತು ಮಾಲ್ ಗಳಲ್ಲಿ 66 ರಿಂದ 70 ರೂ. ಆಗಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆ ಆಗಬಹುದು ಎಂದು ವರ್ತಕರು ಹೇಳುತ್ತಿದ್ದಾರೆ.
ಚಿತ್ರದುರ್ಗ, ಚಳ್ಳಕೆರೆ ಹಾಗೂ ಹೊಸದುರ್ಗದಿಂದ ಮಂಗಳವಾರ ಯಶವಂತಪುರ ಮಾರುಕಟ್ಟೆಗೆ 80 ರಿಂದ 90 ಸಾವಿರ ಮೂಟೆ ಈರುಳ್ಳಿ ಬಂದಿದೆ. ಆದರೆ, ಹುಬ್ಬಳ್ಳಿ, ಗದಗ ಸೇರಿದಂತೆ ಉತ್ತರ ಕರ್ನಾಟಕದ ವಿವಿಧೆಡೆಗಳಿಂದ ಬರಬೇಕಾದ ಈರುಳ್ಳಿ ಮಾರುಕಟ್ಟೆಗೆ ತಲುಪಿಲ್ಲ.
ಮಹಾರಾಷ್ಟ್ರದ ನಾಸಿಕ್ ಮತ್ತು ಪುಣೆಯಿಂದ ಕರ್ನಾಟಕಕ್ಕೆ ಈರುಳ್ಳಿ ಸರಬರಾಜಾಗಲು ಒಂದು ತಿಂಗಳು ಕಾಯಬೇಕಾಗಿದೆ ಆದ್ದರಿಂದ ಮುಂದಿನ ದಿನಗಳಲ್ಲಿ ಕರ್ನಾಟಕದಲ್ಲಿ ಈರುಳ್ಳಿ ಬೆಲೆ ಮತ್ತಷ್ಟು ಹೆಚ್ಚಾಗಬಹುದು ಎಂದು ಈರುಳ್ಳಿ ವ್ಯಾಪಾರಿಗಳು ಹೇಳಿದ್ದಾರೆ. (ಈರುಳ್ಳಿ ಬೆಲೆ ಎಷ್ಟಾದರೂ ಆ ಗ್ರಾಮಸ್ಥರಿಗೆ ಕಣ್ಣೀರು ಬರಲ್ಲ!)
ಬೆಂಗಳೂರಿನಲ್ಲಿ ಒಂದೊಂದು ಕಡೆ ಈರುಳ್ಳಿಗೆ ಒಂದೊಂದು ಬೆಲೆ ನಿಗದಿಯಾಗಿದೆ. ರೈತರಿಂದ ನೇರವಾಗಿ ಹಾಪ್‌ಕಾಮ್ಸ್ ಮೂಲಕ ಗ್ರಾಹಕರಿಗೆ ತಲುಪುವ ಈರುಳ್ಳಿ ಬೆಲೆಯೇ ಮಾರುಕಟ್ಟೆ ಬೆಲೆಗಿಂತ ಹೆಚ್ಚಾಗಿದೆ. ಮಾಲ್ ಹಾಗೂ ತರಕಾರಿ ಮಾರುಕಟ್ಟೆಗಳಲ್ಲಿ ಹಾಪ್‌ಕಾಮ್ಸ್ ಗಿಂತ ಕಡಿಮೆ ದರವಿದೆ.
ರಾಜ್ಯದ ವಿವಿಧ ಜಿಲ್ಲೆಗಳಿಂದ ಹೊಸ ಈರುಳ್ಳಿ ಸರಬರಾಜು ಆಗುವ ತನಕ ಬೆಂಗಳೂರಿನಲ್ಲಿ ಈರುಳ್ಳಿ ಬೆಲೆ ಕಡಿಮೆಯಾಗುವುದಿಲ್ಲ ಎಂದು ಎಪಿಎಂಸಿ ವರ್ತರಕ ಸಂಘದ ಅಧ್ಯಕ್ಷ ಬಿ.ಎಲ್.ಶಂಕರಪ್ಪ ಹೇಳಿದ್ದಾರೆ. ಆದ್ದರಿಂದ ಈರುಳ್ಳಿ ಖರೀದಿ ಮಾಡುವ ಮೊದಲೇ ಹೆಚ್ಚು ಹಣ ಜೇಬಿನಲ್ಲಿರಲಿ. (ಪಿಟಿಐ ಚಿತ್ರ)












Click it and Unblock the Notifications