ಒನ್‌ಇಂಡಿಯಾ ಇಂಪ್ಯಾಕ್ಟ್: ಹಸಿದ 20 ಕುಟುಂಬಗಳಿಗೆ ಸಿಕ್ಕಿತು ಆಹಾರ
ಬೆಂಗಳೂರು, ಏಪ್ರಿಲ್ 11: ಆಹಾರವಿಲ್ಲದೆ ಸಂಕಷ್ಟದಲ್ಲಿದ್ದ 20 ಕುಟುಂಬಗಳಿಗೆ ಜನನಾಯಕರಲ್ಲ ಜನತೆಯೇ ಸಹಾಯ ಮಾಡಿದ್ದಾರೆ.
ಹೊಸಕೆರೆ ಹಳ್ಳಿಯಲ್ಲಿ 20 ಕುಟುಂಬಗಳು ಕಳೆದ ಒಂದು ತಿಂಗಳಿನಿಂದ ತಮ್ಮ ಬಳಿ ಇರುವ ಅಲ್ಪಸ್ವಲ್ಪ ವಸ್ತುಗಳಲ್ಲೇ ದಿನ ಕಳೆಯುತ್ತಿದೆ. ಲಾಕ್‌ಡೌನ್ ಮುಂದುವರೆದರೆ ಅವರಿಗೆ ಒಂದು ಹೊತ್ತು ಊಟಕ್ಕೂ ಗತಿ ಇಲ್ಲದ ಪರಿಸ್ಥಿತಿ ನಿರ್ಮಾಣವಾಗುತ್ತದೆ ಎಂದು ಒನ್ ಇಂಡಿಯಾ ವರದಿ ಮಾಡಿತ್ತು.
'ಕೊರೊನಾದಿಂದ ಸತ್ತರೂನೂ ಒಂದೇ, ಮನೆಯಲ್ಲಿ ಲಾಕ್‌ಡೌನ್ ಆಗಿ ಊಟವಿಲ್ಲದರೆ ಮೃತಪಟ್ಟರೂ ಒಂದೇ ಸಾವು ಸಾವೇ ' ಎಂದು ಅಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದರು.

ಕಳೆದ ಒಂದು ತಿಂಗಳಿನಿಂದ ಹೇಗೋ ಇರುವ ವಸ್ತುಗಳನ್ನೇ ಬಳಸಿ ಸ್ವಲ್ಪ ಸ್ವಲ್ಪವೇ ಊಟ ಮಾಡುತ್ತಿದ್ದೇವೆ. ಯಾರೂ ನಮ್ಮ ಸಹಾಯಕ್ಕೆ ಬಂದಿಲ್ಲ ಎಂದು ನಿವಾಸಿಗಳು ಹೇಳಿದ್ದರು.
ಆದರೆ ಯಾವುದೇ ಜನನಾಯಕರಲ್ಲ ಜನತೆಯೇ ಅವರ ಸಹಾಯಕ್ಕೆ ಬಂದಿದೆ.ಲೀಗಲ್ ಲೈಟ್ ಫೌಂಡೇಶನ್ 20 ಕುಟುಂಬಗಳಿಗೆ ದಿನಸಿ ವಸ್ತುಗಳನ್ನು ಉಚಿತವಾಗಿ ವಿತರಿಸಿದ್ದಾರೆ. ಒನ್ ಇಂಡಿಯಾ ವರದಿ ಮಾಡಿದ್ದಕ್ಕೂ ಸಾರ್ಥಕತೆ ದೊರೆತಂತಾಗಿದೆ.
ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ. ಲಾಕ್‌ಡೌನ್ ಅನ್ನು ಇನ್ನೂ ಪರಿಣಾಮಕಾರಿಯಾಗಿ ಜಾರಿಗೊಳಿಸುವ ಸಾಧ್ಯತೆ ಇದೆ. ವಿಸ್ತರಿಸುವ ಸಾಧ್ಯತೆಯೂ ಕೂಡ ಇದೆ. ಹೀಗಿರುವಾಗ ಹಸಿದ ಜನತೆ ಬಗ್ಗೆಯೂ ಸರ್ಕಾರ ಗಮನವಹಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.












Click it and Unblock the Notifications