ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಬಿಎಂಪಿ ಮೇಯರ್ ಆಯ್ಕೆಗೆ ಚುನಾವಣೆ ಹೇಗೆ ನಡೆಯಲಿದೆ?

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್, 10 : ಭಾರೀ ಕುತೂಹಲ ಕೆರಳಿಸಿರುವ ಬಿಬಿಎಂಪಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಶುಕ್ರವಾರ ಚುನಾವಣೆ ನಡೆಯಲಿದೆ. ಬೆಳಗ್ಗೆ 11.30ಕ್ಕೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ. ಯಾರಿಗೆ ಮೇಯರ್ ಗದ್ದುಗೆ? ಎಂಬ ಪ್ರಶ್ನೆಗೆ ನಾಳೆ ಉತ್ತರ ದೊರೆಯಲಿದೆ.

ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷೇತರರ ಜೊತೆ ಸೇರಿ ಮೈತ್ರಿ ಮಾಡಿಕೊಂಡಿವೆ. ಮೈತ್ರಿಕೂಟದ ಬಣದ ಸದಸ್ಯ ಬಲ 132 ಮತ್ತು ಬಿಜೆಪಿಯ ಬಲ 128. ಬಿಬಿಎಂಪಿ ಮೇಯರ್ ಗದ್ದುಗೆ ಏರಲು ಮ್ಯಾಜಿಕ್ ನಂಬರ್ 131. [ಹೈಕೋರ್ಟ್ ತೀರ್ಪಿನ ಅಲಗಿನಡಿ ಬಿಬಿಎಂಪಿ ಮೇಯರ್ ಆಯ್ಕೆ]

ಮೇಯರ್ ಪಟ್ಟಕ್ಕೆ ಕಾಂಗ್ರೆಸ್‌ನಿಂದ ಬಿ.ಎನ್‌. ಮಂಜುನಾಥ್‌ ರೆಡ್ಡಿ, ಆರ್‌.ಎಸ್‌. ಸತ್ಯನಾರಾಯಣ ಅವರ ಹೆಸರು ಕೇಳಿಬರುತ್ತಿದೆ. ಬಿಜೆಪಿ ಪರವಾಗಿ ಪದ್ಮನಾಭ ರೆಡ್ಡಿ ಅವರು ಮೇಯರ್ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ. ಕಾಂಗ್ರೆಸ್ ಜೆಡಿಎಸ್ ಪರವಾಗಿ ಜೆಡಿಎಸ್‌ ಶಾಸಕ ಗೋಪಾಲಯ್ಯ ಪತ್ನಿ ಹೇಮಾವತಿ ಅವರು ಉಪ ಮೇಯರ್ ಅಭ್ಯರ್ಥಿಯಾಗಲಿದ್ದಾರೆ.

ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ ಒಂದೊಂದು ಸೆಟ್‌ ನಾಮಪತ್ರ (ಮೇಯರ್‌, ಉಪಮೇಯರ್‌ ಹಾಗೂ 12 ಸ್ಥಾಯಿ ಸಮಿತಿಗಳ ಸದಸ್ಯತ್ವಕ್ಕಾಗಿ ನಾಮಪತ್ರದ ಅರ್ಜಿಗಳನ್ನು) ಪಡೆದಿವೆ. ಆದರೆ, ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ಚುನಾವಣೆ ಅಧಿಸೂಚನೆ ಪ್ರಕಟಗೊಂಡ ಬಳಿಕ ಪ್ರತಿದಿನ ಬೆಳಗ್ಗೆ 8.30ರಿಂದ 9.30ರ ತನಕ ನಾಮಪತ್ರ ಸಲ್ಲಿಸಲು ಅವಕಾಶವಿದೆ...... ಮೇಯರ್ ಎಲೆಕ್ಷನ್ ಹೇಗೆ ನಡೆಯುತ್ತೆ? ಇಲ್ಲಿವೆ ಮಾಹಿತಿ

ಸೆ.11ರಂದು ಚುನಾವಣೆ, ಮೇಯರ್ ಆಯ್ಕೆ

ಸೆ.11ರಂದು ಚುನಾವಣೆ, ಮೇಯರ್ ಆಯ್ಕೆ

ಸೆ.11ರ ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮೇಯರ್‌, ಉಪಮೇಯರ್‌ ಹಾಗೂ 12 ಸ್ಥಾಯಿ ಸಮಿತಿಗಳ ಸದಸ್ಯರ ನೇಮಕಕ್ಕೆ ಚುನಾವಣೆ ನಡೆಯಲಿದೆ. ಶುಕ್ರವಾರ ಬೆಳಗ್ಗೆ 11ಗಂಟೆಗೆ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಲಿವೆ.

ಮೊದಲು ಸದಸ್ಯರ ಪ್ರಮಾಣ ವಚನ

ಮೊದಲು ಸದಸ್ಯರ ಪ್ರಮಾಣ ವಚನ

ಶುಕ್ರವಾರ ಚುನಾವಣೆಗೂ ಮುನ್ನಾ ಕರ್ನಾಟಕ ಮುನ್ಸಿಪಲ್‌ ಕಾರ್ಪೊರೇಷನ್‌ (ಕೆಎಂಸಿ) ಕಾಯ್ದೆ 1976ರ ಸೆಕ್ಷನ್‌ 18ರನ್ವಯ ಚುನಾಯಿತ ಸದಸ್ಯರಿಗೆ ಪ್ರಾದೇಶಿಕ ಆಯುಕ್ತರು ಪ್ರಮಾಣ ವಚನ ಬೋಧಿಸಲಿದ್ದಾರೆ. 10 ಜನರಿಗೆ ಒಂದು ತಂಡದಂತೆ ಮಾಡಿ ಪ್ರಮಾಣ ವಚನ ಬೋಧಿಸಲು ನಿರ್ಧರಿಸಲಾಗಿದೆ. ಕನ್ನಡ ಮತ್ತು ಇಂಗ್ಲಿಷ್‌ ಭಾಷೆಗಳಲ್ಲಿ ಪ್ರಮಾಣ ವಚನದ ನಮೂನೆಗಳು ಸಿದ್ಧವಾಗಿವೆ.

11.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭ

11.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭ

ಶುಕ್ರವಾರ ಬೆಳಗ್ಗೆ 11.30ಕ್ಕೆ ಚುನಾವಣಾ ಪ್ರಕ್ರಿಯೆ ಆರಂಭವಾಗಲಿದೆ. ಪ್ರಾದೇಶಿಕ ಆಯುಕ್ತರು ಚುನಾವಣಾ ಸಭೆ ಅಧ್ಯಕ್ಷತೆ ವಹಿಸಲಿದ್ದಾರೆ. ಕೆಎಂಸಿ ಕಾಯ್ದೆ 72 (ಬಿ) ಪ್ರಕಾರ ಎಲ್ಲ ನಾಮಪತ್ರಗಳನ್ನು ಪರಿಶೀಲಿಸಿ, ಕ್ರಮಬದ್ಧ ಆಗಿರುವ ನಾಮಪತ್ರಗಳ ವಿವರವನ್ನು ಆಯುಕ್ತರು ಪ್ರಕಟಿಸುತ್ತಾರೆ. ನಾಮಪತ್ರ ಹಿಂಪಡೆಯಲು ಕಾಲಾವಕಾಶ ನೀಡಲಾಗುತ್ತದೆ. ಬಳಿಕ ಮತದಾನ ನಡೆಸಲಾಗುತ್ತದೆ. [ಚಿತ್ರ : ಮೇಯರ್ ಕಚೇರಿ]

ಸ್ಥಾಯಿ ಸಮಿತಿಗಳಿಗೆ ಚುನಾವಣೆ

ಸ್ಥಾಯಿ ಸಮಿತಿಗಳಿಗೆ ಚುನಾವಣೆ

ಮೇಯರ್‌, ಉಪಮೇಯರ್‌ ಆಯ್ಕೆ ಬಳಿಕ 12 ಸ್ಥಾಯಿ ಸಮಿತಿಗಳ 11 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಹಲವು ಬಾರ ಅವಿರೋಧವಾಗಿ ಈ ಆಯ್ಕೆ ನಡೆಯುತ್ತದೆ. ಪೈಪೋಟಿ ಏರ್ಪಟ್ಟರೆ ಚುನಾವಣೆ ನಡೆಸಲಾಗುತ್ತದೆ. ಒಟ್ಟು 260 ಸದಸ್ಯರು ಮೇಯರ್ ಮತ್ತು ಉಪ ಮೇಯರ್ ಆಯ್ಕೆ ಮಾಡಲಿದ್ದಾರೆ.

ಪಾಲಿಕೆ ಕಚೇರಿ ಸುತ್ತ-ಮುತ್ತ ನಿಷೇಧಾಜ್ಞೆ

ಪಾಲಿಕೆ ಕಚೇರಿ ಸುತ್ತ-ಮುತ್ತ ನಿಷೇಧಾಜ್ಞೆ

ಚುನಾವಣೆ ಹಿನ್ನಲೆಯಲ್ಲಿ ಬಿಬಿಎಂಪಿ ಕಚೇರಿ ಸುತ್ತಮುತ್ತ ಶುಕ್ರವಾರ ಬೆಳಗ್ಗೆಯಿಂದ ಸಂಜೆಯ ತನಕ ಸೆಕ್ಷನ್ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. 5 ಎಸಿಪಿ, 20 ಇನ್ಸ್‌ಪೆಕ್ಟರ್‌ಗಳ ನೇತೃತ್ವದಲ್ಲಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. 260 ಮತದಾರರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಗಿದೆ. ಉಳಿದವರಿಗೆ ಪ್ರವೇಶ ನಿಷಿದ್ಧ.

ಆಡಳಿತಾಧಿಕಾರಿ ಅಧಿಕಾರ ಅಂತ್ಯ

ಆಡಳಿತಾಧಿಕಾರಿ ಅಧಿಕಾರ ಅಂತ್ಯ

ಬಿಬಿಎಂಪಿಯನ್ನು ವಿಸರ್ಜನೆ ಮಾಡಿದ ಬಳಿಕ ಸರ್ಕಾರ ಹಿರಿಯ ಐಎಎಸ್ ಅಧಿಕಾರಿ ಟಿ.ಎಂ. ವಿಜಯ ಭಾಸ್ಕರ ಅವರನ್ನು ಆಡಳಿತಾಧಿಕಾರಿಯಾಗಿ ನೇಮಕ ಮಾಡಿತ್ತು. ನೂತನ ಮೇಯರ್ ಆಯ್ಕೆಯಾಗುತ್ತಿದ್ದಂತೆ ಆಡಳಿತಾಧಿಕಾರಿ ಅಧಿಕಾರ ಅಂತ್ಯಗೊಳ್ಳಲಿದ್ದು, ಅವರು ಸರ್ಕಾರ ಇಲಾಖೆಗೆ ವಾಪಸ್ ತೆರಳಲಿದ್ದಾರೆ.

English summary
Stage set for the Bruhat Bangalore Mahanagara Palike (BBMP) mayoral election. Election will be held on September 11, Friday 11.30 am. 260 voters will elect mayor and deputy mayor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X