ಬೆಂಗಳೂರಲ್ಲಿ ಮತ್ತೊಬ್ಬ ಶಂಕಿತ ಉಗ್ರನ ಬಂಧನ

ಬೆಂಗಳೂರು, ಆಗಸ್ಟ್ 9: ಮತ್ತೋರ್ವ ಶಂಕಿತ ಉಗ್ರನನ್ನು ಎನ್‌ಐಎ ಗುರುವಾರ ವಶಕ್ಕೆ ಪಡೆದಿದೆ. ಜಹೀದುಲ್‌ ಇಸ್ಲಾಂ(ಮುನೀರ್‌ ಶೇಖ್‌) ನೀಡಿದ ಮಾಹಿತಿ ಮೇರೆಗೆ ಬಾಂಗ್ಲಾದೇಶದ ಉಗ್ರನನ್ನು ಬೆಂಗಳೂರಿನ ಕಂಟೋನ್ಮೆಂಟ್‌ ರೈಲ್ವೆ ನಿಲ್ದಾಣದ ಬಳಿ ಬಂಧಿಸಿದ್ದಾರೆ.

ಜಹೀದುಲ್‌ ಇಸ್ಲಾಂ ಮಾಹಿತಿ ಆಧರಿಸಿ ಆದಿಲ್‌ನನ್ನು ಬಂಧಿಸಲಾಗಿದೆ. ನಾಲ್ಕು ದಿನಗಳ ಹಿಂದೆ ರಾಮನಗರದಲ್ಲಿ ಮುನೀರ್‌ ಎನ್ನುವಾತನನ್ನು ನಕ್ಸಲೇಟ್‌ ಎಂದು ಬಂಧಿಸಲಾಗಿತ್ತು. ಬಳಿಕ ಆತ ಉಗ್ರ ಎಂದು ತಿಳಿದುಬಂದಿತ್ತು.

ಆತನ ಬಳಿ ಕರ್ನಾಟಕದ ಪ್ರವಾಸಿತಾಣಗಳು, ದೇವಸ್ಥಾನಗಳು ಸೇರಿದಂತೆ ಅನೇಕ ಸ್ಥಳಗಳ ಮಾಹಿತಿಯುಳ್ಳ ನಕ್ಷೆ ಅವನ ಬಳಿ ಇತ್ತು. ಜತೆಗೆ ಒಂದು ಲ್ಯಾಪ್‌ಟಾಪ್‌ ಕೂಡ ವಶಪಡಿಸಿಕೊಳ್ಳಲಾಗಿತ್ತು. ಇದೀಗ ಬೆಂಗಳೂರಲ್ಲಿ ಮತ್ತೊಂದು ಉಗ್ರನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

One more JMB suspect arrested in Bengaluru

ರಾಮನಗರದಲ್ಲಿ ಕಳೆದ ಸೋಮವಾರ ಸಿಕ್ಕಿಬಿದ್ದ ಮುನೀರ್‌ ವಿಚಾರಣೆ ಮುಂದುವರೆದಿದೆ. ಎನ್‌ಐಎ ತಂಡ ಮುನೀರ್‌ ಪತ್ನಿ, ಅಣ್ಣ, ಅತ್ತಿಗೆಗಾಗಿ ಹುಡುಕಾಟ ಮುಂದುವರೆಸಿದ್ದಾರೆ. ಸ್ವಾತಂತ್ರ್ಯ ದಿನವು ಹತ್ತಿರವಿರುವುದರಿಂದ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಎಚ್ಚರವಹಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+