ತಾರಸಿ ಮೇಲೆ ತರಕಾರಿ ಬೆಳೆಯಲು ತರಬೇತಿ
ಬೆಂಗಳೂರು, ನ. 18: ನಗರದಲ್ಲಿ ಹೆಚ್ಚುತ್ತಿರುವ ತಾರಸಿ ಮೇಲೆ ಸಾವಯವ ಕೈತೋಟ ಬೆಳೆಯುವ ಕುರಿತು ತೋಟಗಾರಿಕೆ ಇಲಾಖೆ ವತಿಯಿಂದ ತರಬೇತಿ ಹಮ್ಮಿಕೊಳ್ಳಲಾಗಿದೆ.
ಹುಳಿಮಾವಿನಲ್ಲಿರುವ ಜೈವಿಕ ಕೇಂದ್ರದಲ್ಲಿ ನ. 21ರಂದು ಬೆಳಗ್ಗೆ 9 ಗಂಟೆಯಿಂದ ಸಂಜೆ 4.30ರ ವರೆಗೆ ತರಬೇತಿ ನೀಡಲಾಗುವುದು. ಆಸಕ್ತರು 300 ರೂ. ಶುಲ್ಕ ನೀಡಿ ಹೆಸರು ನೋಂದಾಯಿಸಬೇಕು. ತರಬೇತಿಗೆ ಬಂದವರಿಗೆ ಮಧ್ಯಾಹ್ನದ ಊಟದ ವ್ಯವಸ್ಥೆಯಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 94494 28738 ಸಂಪರ್ಕಿಸಬಹುದು.

ತರಕಾರಿಗಳಲ್ಲಿ ಕೀಟನಾಶಕದ ಅಂಶ ಹೆಚ್ಚು ಕಂಡುಬರುತ್ತಿದ್ದು, ಜನರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಾವಯವ ತೋಟಗಾರಿಕೆಗೆ ಮಹತ್ವ ಬಂದಿದೆ. ಬೆಂಗಳೂರಿನಲ್ಲಿ ಸ್ಥಳಾವಕಾಶದ ಕೊರತೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ತಾರಸಿ ಮೇಲೆ ಕೈ ತೋಟ ನಿರ್ಮಿಸಿ ಸಾವಯವ ತರಕಾರಿ ಬೆಳೆಯುವ ಪ್ರವೃತ್ತಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಒಂದು ದಿನದ ಈ ತರಬೇತಿ ಆಯೋಜಿಸಿದೆ.












Click it and Unblock the Notifications