ಬೆಂಗಳೂರು: ಮಹಿಳೆ ಅಪಹರಣಕ್ಕೆ ಯತ್ನ: ಓಲಾ ಚಾಲಕನ ಬಂಧನ

ಬೆಂಗಳೂರು, ಜು.6: ಓಲಾ ಕ್ಯಾಬ್‌ ಚಾಲಕ ಮಹಿಳೆಯನ್ನು ಅಪಹರಿಸಲು ಯತ್ನಿಸಿ ಬಳಿಕ ಪೊಲೀಸರಿಗೆ ಅತಿಥಿಯಾಗಿರುವ ಘಟನೆ ಬಳ್ಳಾರಿ ರಸ್ತೆಯ ಕೆಐಎಎಲ್ ಟೋಲ್‌ ಪ್ಲಾಜಾ ಬಳಿ ನಡೆದಿದೆ.

ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಅತ್ಯಾಚಾರ, ಕೊಲೆ, ಲೈಂಗಿಕ ಕಿರುಕುಳ ಯತ್ನ ಪ್ರಕರಣಗಳು ಹೆಚ್ಚಾಗುತ್ತಿದೆ. ಅದರಲ್ಲೂ ಕ್ಯಾಬ್ ಚಾಲಕರು ಮಹಿಳೆಯರಿಗೆ ಕಿರುಕುಳ ನೀಡುವ ಪ್ರಕರಣಗಳು ಹೆಚ್ಚಾಗುತ್ತಿದೆ.

ಇಂದಿರಾನಗರದ ನಿವಾಸಿಯಾಗಿರುವ ಮಹಿಳೆ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಕೆಲಸದ ಮೇಲೆ ಮುಂಬೈಗೆ ತೆರಳುತ್ತಿದ್ದರು ರಾತ್ರಿ 11.30ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಲು ಕ್ಯಾಬ್‌ ಬುಕ್‌ ಮಾಡಿದ್ದಾರೆ.

Ola driver arrested for kidnapping airport-bound woman

ಕ್ಯಾಬ್ ಹತ್ತಿದ ಬಳಿಕ ಮದ್ಯದ ವಾಸನೆ ಬಂದಿದೆ ಆದರೂ ಆಕೆ ಏನು ಪ್ರತಿಕ್ರಿಯಿಸದೆ ಹಾಗೆಯೇ ಕುಳಿತಿದ್ದರು. ಬಳಿಕ ಯಲಹಂಕದ ಸಮೀಪ ಬರುತ್ತಿದ್ದಂತೆಯೇ ಕಾರಿನ ವೇಗ ಏಕಾಏಕಿ 100 ಕಿ.ಮೀ ಗಿಂತಲೂ ಹೆಚ್ಚಾಗಿ ಹೆಚ್ಚಾದಾಗ ಆಕೆಗೆ ಅನುಮಾನ ಬಂದಿದೆ, ಜತೆಗೆ ಕಾರಿನ ಕನ್ನಡಿಯಲ್ಲಿ ಪದೇ ಪದೇ ಆಕೆಯನ್ನು ನೋಡುತ್ತಿದ್ದ, ಟೋಲ್‌ ಪ್ಲಾಜಾ ಆಗಮಿಸಿದಾಗ , ತನ್ನನ್ನು ರಕ್ಷಿಸುವಂತೆ ಕೇಳುತ್ತಾ ಕೈಯನ್ನು ಕಾರಿನಿಂದ ಹೊರ ಹಾಕಿದ್ದಾರೆ.

ಅದೃಷ್ಟವಶಾತ್‌ ಬೈಕ್‌ ಸವಾರನೊಬ್ಬ ಬಂದು ಆಕೆಯನ್ನು ರಕ್ಷಿಸಿದ್ದಾರೆ. ನಂತರ ಪೊಲೀಸರಿಗೆ ಕರೆ ಮಾಡಿ ಚಾಲಕ ಸುರೇಶ್‌ನನ್ನು ಪೊಲೀಸರಿಗೆ ಒಪ್ಪಿಸಲಾಯಿತು, ಚಾಲಕ ಸುಬ್ಬಯ್ಯನ ಪಾಳ್ಯ ನಿವಾಸಿಯಾಗಿದ್ದ ಎಂದು ತಿಳಿದುಬಂದಿದೆ. ಚಿಕ್ಕಜಾಲ ಪೊಲೀಸರು ಐಪಿಸಿ ಸೆಕ್ಷನ್‌ 354ರಡಿ ಲೈಂಗಿಕ ಕಿರುಕುಳ ಹಾಗೂ 360ರಡಿ ಅಪಹರಣ ಯತ್ನ ಪ್ರಕರಣ ದಾಖಲಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+