ಓಲಾ, ಊಬರ್ ಪ್ರಯಾಣ ಶೇ.65ರಷ್ಟು ತುಟ್ಟಿ ಸಂಭವ
ಬೆಂಗಳೂರು, ಮಾರ್ಚ್ 23: ಸಾರಿಗೆ ಇಲಾಖೆಯು ಓಲಾ, ಊಬರ್ ಇತರೆ ಕಂಪನಿಗಳ ಕ್ಯಾಬ್ ಗಳ ಪ್ರಯಾಣ ನಿಗದಿ ಸಂಬಂಧ ಪರಿಷ್ಕೃತ ಅಧಿಸೂಚನೆ ಹೊರಡಿಸಿದೆ.
ಈ ಹಿಂದೆ ಜನವರಿ 9ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಇಲಾಖೆ ಹಿಂಪಡೆದಿದ್ದು, ವಾಹನಗಳ ಮೌಲ್ಯದ ಆಧಾರದಲ್ಲಿ ಹೊಸ ದರ ನಿಗದಿ ಪಡಿಸಿದೆ. ಜಿ.ಎಸ್.ಟಿ ಹಾಗೂ ಟೋಲ್ ಶುಲ್ಕವನ್ನು ಪ್ರಯಾಣಿಕರಿಂದಲೇ ವಸೂಲಿ ಮಾಡಬಹುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಹೀಗಾಗಿ, ಸದ್ಯದ ದರಕ್ಕಿಂತ ಹೊಸ ದರವು ಶೇ 65ರಷ್ಟು ಅಧಿಕವಾಗಲಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 25ಕಿ.ಮೀ ಸಂಚರಿಸುವ ಕ್ಯಾಬ್ ಗಳಿಗೆ ದರ ಅನ್ವಯವಾಗಲಿದೆ. ಕಾಯುವಿಕೆ ದರ ಮೊದಲಿನ 20ನಿಮಿಷ ಉಚಿತವಾಗಿರಲಿದೆ. ನಂತರದ ಪ್ರತಿ 15ನಿಮಿಷಗಳಿಗೆ 10ರೂ ಪಾವತಿಸಬೇಕಿದೆ. ಸಮಯದ ಆಧಾರದಲ್ಲಿ ದರ ವಸೂಲಿ ಮಾಡುವುದನ್ನು ನಿಷೇಧಿಸಲಾಗಿದ್ದು, ಕಿ.ಮೀ ಆಧಾರದಲ್ಲಿ ಮಾತ್ರ ದರ ನಿಗದಿ ಮಾಡುವಂತೆ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಪ್ರತಿ ಕಿ.ಮೀ ಗೆ ಸಧ್ಯ 7ರೂ. ನೀಡುತ್ತಿರುವ ಪ್ರಯಾಣಿಕರು ಇನ್ನುಮುಂದೆ 11ರೂ. ನೀಡಬೇಕು ಈ ದರಕ್ಕೆ ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದಾರೆ. ಮೊದಲಿದ್ದ ದರವನ್ನೇ ಮುಂದುವರೆಸಬೇಕು ಎಂದು ಒತ್ತಾಯಿಸಲಾಗುತ್ತಿದೆ.











Click it and Unblock the Notifications