• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಓಕಳಿಪುರಂ ಅಷ್ಟ ಪಥದ ಕಾರಿಡಾರ್ ಕಾಮಗಾರಿ ಪೂರ್ಣ ಯಾವಾಗ?

|

ಬೆಂಗಳೂರು, ಸೆಪ್ಟೆಂಬರ್ 29: ನಗರದ ಓಕಳಿಪುರಂ ಜಂಕ್ಷನ್‌ನ ಅಷ್ಟಪಥ ಕಾರಿಡಾರ್ ಒಂದು ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದು ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.

ಸೋಮವಾರ ಕಾಮಗಾರಿ ಪರಿಶೀಲನೆ ನಡೆಸಿದ ಪಾಲಿಕೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಹಾಗೂ ಆಯುಕ್ತರು ಈ ಕುರಿತು ಮಾಹಿತಿ ನೀಡಿದ್ದಾರೆ.

ಮೇಲ್ಸೇತುವೆ ನಾಮಕರಣ ಮುಂದೂಡಿಕೆಗೆ ಟ್ವಿಸ್ಟ್, ವಿರೋಧಿಸಿದ್ದು ಯಾರು ಗೊತ್ತಾ?ಮೇಲ್ಸೇತುವೆ ನಾಮಕರಣ ಮುಂದೂಡಿಕೆಗೆ ಟ್ವಿಸ್ಟ್, ವಿರೋಧಿಸಿದ್ದು ಯಾರು ಗೊತ್ತಾ?

ಈ ವೇಳೆ ರೈಲ್ವೆ ಇಲಾಖೆಯ ಅಧಿಕಾರಿಗಳು ಬೆಂಗಳೂರು-ತುಮಕೂರು ಮಾರ್ಗದ ಕೆಳ ಸೇತುವೆ ಕಾಮಗಾರಿಯನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು , ಆದರೆ ಬೆಂಗಳೂರು -ಚೆನ್ನೈ ರೈಲ್ವೆ ಮಾರ್ಗದ ಕೆಳ ಸೇತುವೆ ಕಾಮಗಾರಿಗೆ ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ತ್ಯಾಜ್ಯ ನೀರು ಕೊಳವೆ ಅಳವಡಿಕೆ ಹಾಗೂ ಕೆಪಿಟಿಸಿಎಲ್‌ನ ಕೇಬಲ್‌ ಲೈನ್ ಸ್ಥಳಾಂತರ ಕಾಮಗಾರಿ ಬಾಕಿ ಇದೆ.

   ಸಚಿವರೇ ಯಾಕ್ ಹೀಗ್ ಮಾಡ್ಬಿಟ್ರಿ | Oneindia Kannada
   2014ರಲ್ಲಿ ಕಾಮಗಾರಿ ಆರಂಭ

   2014ರಲ್ಲಿ ಕಾಮಗಾರಿ ಆರಂಭ

   ಬಿಬಿಎಂಪಿ 2014ರಲ್ಲಿ ರೈಲ್ವೆ ಇಲಾಖೆಯ ಸಹಯೋಗದಲ್ಲಿ 103 ಕೋಟಿ ರೂ. ವೆಚ್ಚದಲ್ಲಿ ಓಕಳಿಪುರಂ ಜಂಕ್ಷನ್‌ನಲ್ಲಿ ಅಷ್ಟಪಥ ಕಾರಿಡಾರ್ ಆರಂಭಿಸಿತ್ತು.

   ಎರಡು ಕಾಮಗಾರಿಗಳು ಬಾಕಿ ಇದೆ

   ಎರಡು ಕಾಮಗಾರಿಗಳು ಬಾಕಿ ಇದೆ

   ಬೆಂಗಳೂರು-ತುಮಕೂರು ರೈಲ್ವೆ ಮಾರ್ಗದಲ್ಲಿ ಇನ್ನೊಂದು ಪಥದ ಕೆಳಸೇತುವೆ ನಿರ್ಮಾಣ ಹಾಗೂ ಬೆಂಗಳೂರು-ಚೆನ್ನೈ ರೈಲ್ವೆ ಮಾರ್ಗದಲ್ಲಿ ಎರಡು ಕೆಳ ಸೇತುವೆ ನಿರ್ಮಾಣ ಕಾಮಗಾರಿ ಬಾಕಿ ಇದೆ.

   ಶಿವಾನಂದ ಫ್ಲೈಓವರ್ ಪೂರ್ಣಕ್ಕೆ ಇನ್ನೂ 6 ತಿಂಗಳು ಅನಿವಾರ್ಯ

   ಶಿವಾನಂದ ಫ್ಲೈಓವರ್ ಪೂರ್ಣಕ್ಕೆ ಇನ್ನೂ 6 ತಿಂಗಳು ಅನಿವಾರ್ಯ

   ಶಿವಾನಂದ ವೃತ್ತದಲ್ಲಿ 2017ರಿಂದ ಸುಮಾರು 40 ಕೋಟಿ ರೂ. ವೆಚ್ಚದಲ್ಲಿ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ನಡೆಸಿದರು. ಈ ವೇಳೆ ಪಾಲಿಕೆ ಅಧಿಕಾರಿಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ರೇಸ್‌ಕೋರ್ಸ್ ವೃತ್ತದವರೆಗೆ ಮೇಲ್ಸೇತುವೆ ಕಾಮಗಾರಿ ವಿಸ್ತರಣೆ ಮ್ತತು ಶಿವಾನಂದ ವೃತ್ತ ರೈಲ್ವೆ ಅಂಡರ್ ಪಾಸ್ ಬಳಿ ಸುಮಾರು 600 ಚ.ಮೀ ಭೂ ಸ್ವಾಧೀನ ಪ್ರಕ್ರಿಯೆ ಬಾಕಿ ಇದೆ. ಹೀಗಾಗಿ ಫ್ಲೈಓವರ್ ಪೂರ್ಣಗೊಳ್ಳುವುದು ವಿಳಂಬವಾಗಿದೆ ಎಂದು ಹೇಳಿದರು.

   ಪಶ್ಚಿಮ ಕಾರ್ಡ್ ರಸ್ತೆ ಸಿಗ್ನಲ್ ಫ್ರೀ ಕಾರಿಡಾರ್

   ಪಶ್ಚಿಮ ಕಾರ್ಡ್ ರಸ್ತೆ ಸಿಗ್ನಲ್ ಫ್ರೀ ಕಾರಿಡಾರ್

   ಶಿಕ್ಷಣ ಸಚಿವ ಸುರೇಶ್ ಕುಮಾರ್, ಆಡಳಿತಾಧಿಕಾರಿ ಗೌರವ್ ಗುಪ್ತಾ, ಆಯುಕ್ತ ಮಂಜುನಾಥ್ ಪ್ರಸಾದ್ ಅವರು ಪಶ್ಚಮ ಕಾರ್ಡ್ ರಸ್ತೆಯಲ್ಲಿ ನವರಂಗ್ ಜಂಕ್ಷನ್‌ನಿಂದ ನ್ಯಾಷನಲ್ ಪಬ್ಲಿಕ್ ಶಿಕ್ಷಣ ಸಂಸ್ಥೆಯ ಜಂಕ್ಷನ್ ವರೆಗೆ ನಡೆಯುತ್ತಿರುವ 142 ಕೋಟಿ ರೂ.ವೆಚ್ಚದ ಸಿಗ್ನಲ್ ಫ್ರೀ ಕಾರಿಡಾರ್ ಕಾರಿಡಾರ್ ಪರಿಶೀಲನೆ ನಡೆಸಿದರು. ತ್ವರಿತವಾಗಿ ಕಾಮಗಾರಿ ಮುಗಿಸುವಂತೆ ಸೂಚನೆ ನೀಡಿದರು.

   English summary
   BBMP administrator Gaurav Gupta and commissioner N Manjunatha Prasad have directed officials to complete the eight-lane Okalipuram Junction-Fountain Circle corridor at the earliest.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X