Bank Holidays: ಬ್ಯಾಂಕ್ ರಜಾ.. ಇಲ್ಲ ಮಜಾ.. ಅಕ್ಟೋಬರ್ ತಿಂಗಳಲ್ಲಿ 15 ದಿನ ಬ್ಯಾಂಕ್‌ಗಳಿಗೆ ಬೀಗ!
ಬ್ಯಾಂಕ್ ಇಲ್ಲದೆ ಆರ್ಥಿಕ ಚಟುವಟಿಕೆ ನಡೆಯುವುದೇ ಇಲ್ಲ, ಅದರಲ್ಲೂ ಬ್ಯಾಂಕ್ ಗಳಿಗೆ ರಜೆ ಇದ್ದರೆ ಪರದಾಟ ತಪ್ಪುವುದಿಲ್ಲ. ಹಣ ಕಳಿಸುವುದಕ್ಕೆ, ಹಣ ಪಡೆಯುವುದಕ್ಕೆ, ಹಣವನ್ನು ಡೆಪಾಸಿಟ್ ಮಾಡುವುದಕ್ಕೆ ಹೀಗೆ ಎಲ್ಲಾ ರೀತಿಯಲ್ಲೂ ದುಡ್ಡಿನ ವಹಿವಾಟು ನಡೆಸಲು ಈ ರಜೆ ಅಡ್ಡಿಯಾಗುತ್ತದೆ. ಹೀಗಿದ್ದಾಗ ದಿಢೀರ್ ಅಕ್ಟೋಬರ್ ತಿಂಗಳಲ್ಲಿ 15 ದಿನ ಬ್ಯಾಂಕ್‌ಗಳಿಗೆ ಬೀಗ ಹಾಕಲು ಆದೇಶ ಬಂದಿದೆ. ಹಾಗಾದ್ರೆ ಯಾವೆಲ್ಲಾ ದಿನ ಬ್ಯಾಂಕ್‌ಗಳಿಗೆ ರಜೆ ಇರಲಿದೆ? ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ ಮುಂದೆ ಓದಿ.
ಭಾರತೀಯರಿಗೆ ಇದೀಗ ಹಬ್ಬಗಳ ಸಮಯ, ಶ್ರಾವಣ ಮುಗಿಯುತ್ತಿದ್ದಂತೆ ಭಾರತದಲ್ಲಿ ಸಾಲು ಸಾಲು ರಜೆಗಳು ಆರಂಭ ಆಗುತ್ತವೆ. ಹೀಗಾಗಿ ಎಲ್ಲಾ ಕಡೆ ಬರೀ ರಜೆಯದ್ದೇ ಚರ್ಚೆ ಕೂಡ ನಡೆಯುತ್ತದೆ. ಅದರಲ್ಲೂ ಬ್ಯಾಂಕ್ ನೌಕರರಿಗೆ ಮತ್ತು ಸರ್ಕಾರಿ ನೌಕರರಿಗೆ ಸಾಲು ಸಾಲು ರಜೆಗಳು ಆರಂಭ ಆಗುತ್ತವೆ. ಹೀಗಿದ್ದಾಗ 2024ರ ಅಕ್ಟೋಬರ್ ತಿಂಗಳಲ್ಲಿ ಒಂದಲ್ಲ ಎರಡಲ್ಲ ಬರೋಬ್ಬರಿ 15 ದಿನ ಬ್ಯಾಂಕ್‌ಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಹಾಗಾದ್ರೆ ಯಾವೆಲ್ಲಾ ದಿನ ಬ್ಯಾಂಕ್‌ಗಳು ಬಂದ್ ಆಗಲಿವೆ? ಸಂಪೂರ್ಣ ಮಾಹಿತಿಯು ಮುಂದೆ ಇದೆ ಓದಿ ತಿಳಿಯಿರಿ.

ಅಕ್ಟೋಬರ್ ಬ್ಯಾಂಕ್ ರಜೆ ಮಾಹಿತಿ
ಅಕ್ಟೋಬರ್-1: ಜಮ್ಮು & ಕಾಶ್ಮೀರ ವಿಧಾನಸಭಾ ಚುನಾವಣೆ ಹಿನ್ನೆಲೆ ಕಣಿವೆ ರಾಜ್ಯದಲ್ಲಿ ಇಂದು ಬ್ಯಾಂಕ್‌ಗಳಿಗೆ ರಜೆ ಘೋಷಣೆ.
ಅಕ್ಟೋಬರ್-2: ಮಹಾತ್ಮ ಗಾಂಧಿ ಜಯಂತಿ & ಮಹಾಲಯ ಅಮಾವಾಸ್ಯೆ ಹಿನ್ನೆಲೆಯಲ್ಲಿ ಭಾರತದ ಎಲ್ಲಾ ರಾಜ್ಯಗಳಲ್ಲೂ ಬ್ಯಾಂಕ್‌ಗಳಿಗೆ ರಜೆ ಘೋಷಣೆ.
ಅಕ್ಟೋಬರ್-3: ನವರಾತ್ರಿ ಹಿನ್ನೆಲೆಯಲ್ಲಿ ರಾಜಸ್ಥಾನ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್-6: ಭಾನುವಾರ ಆಗಿರುವ ಹಿನ್ನೆಲೆ ಅಕ್ಟೋಬರ್ 6 ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ ಇರಲಿದೆ.
ಅಕ್ಟೋಬರ್-10: ಮಹಾ ಸಪ್ತಮಿ ಹಿನ್ನೆಲೆಯಲ್ಲಿ ತ್ರಿಪುರಾ, ಅಸ್ಸಾಂ, ನಾಗಾಲ್ಯಾಂಡ್ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ ಘೋಷಿಸಲಾಗಿದೆ.
ಅಕ್ಟೋಬರ್-11: ದಸರಾ & ಆಯುಧ ಪೂಜೆ ಸೇರಿದಂತೆ ದುರ್ಗಾಷ್ಟಮಿ ಹಿನ್ನೆಲೆ ಬ್ಯಾಂಕ್‌ಗೆ ರಜೆ ಇರುತ್ತದೆ.
ಅಕ್ಟೋಬರ್-12: ಎರಡನೇ ಶನಿವಾರ ಹಿನ್ನೆಲೆ, ಅಕ್ಟೋಬರ್ 6ಕ್ಕೆ ಬ್ಯಾಂಕ್‌ಗೆ ಮಾಮೂಲಿ ರಜೆ ಇರಲಿದೆ.
ಅಕ್ಟೋಬರ್-13: ಭಾನುವಾರ ಆಗಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 13ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ ಇರಲಿದೆ.
ಅಕ್ಟೋಬರ್-14: ದುರ್ಗಾ ಪೂಜೆ (ದಾಸೈನ್) ಪ್ರಯುಕ್ತ ಸಿಕ್ಕಿಂ ರಾಜ್ಯದಲ್ಲಿ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್-16: ಲಕ್ಷ್ಮಿ ಪೂಜೆ ಪ್ರಯುಕ್ತ ತ್ರಿಪುರಾ & ಬಂಗಾಳ ರಾಜ್ಯಗಳಲ್ಲಿ ಬ್ಯಾಂಕ್‌ಗಳ ರಜೆ.
ಅಕ್ಟೋಬರ್-17: ಮಹರ್ಷಿ ವಾಲ್ಮೀಕಿ ಜಯಂತಿ ಹಾಗೂ ಕತಿ ಬಿಹು ಹಿನ್ನೆಲೆಯಲ್ಲಿ ಕರ್ನಾಟಕ, ಅಸ್ಸಾಂ ಮತ್ತು ಹಿಮಾಚಲ ಪ್ರದೇಶದ ರಾಜ್ಯಗಳಲ್ಲಿ ಬ್ಯಾಂಕ್‌ಗಳಿಗೆ ರಜೆ.
ಅಕ್ಟೋಬರ್-20: ಭಾನುವಾರ ಹಿನ್ನೆಲೆ ಅಕ್ಟೋಬರ್ 20 ರಂದು ಬ್ಯಾಂಕ್‌ಗಳಿಗೆ ಮಾಮೂಲಿ ರಜೆ.
ಅಕ್ಟೋಬರ್-26: ಜಮ್ಮು ಮತ್ತು ಕಾಶ್ಮೀರ ಭಾರತ ದೇಶದಲ್ಲಿ ವಿಲೀನವಾದ ದಿನದ ಪ್ರಯುಕ್ತ ಜಮ್ಮು ಮತ್ತು ಶ್ರೀನಗರದಲ್ಲಿ ಇರುವ ಬ್ಯಾಂಕುಗಳು ಬಂದ್ ಆಗಲಿವೆ.
ಅಕ್ಟೋಬರ್-27: ಭಾನುವಾರ ಹಿನ್ನೆಲೆ ಅಕ್ಟೋಬರ್ 27 ರಂದು ಬ್ಯಾಂಕ್‌ಗಳಿಗೆ ರಜೆ ಇದೆ.
ಅಕ್ಟೋಬರ್-31: ದೀಪಾವಳಿ & ನರಕ ಚತುರ್ದಶಿ ಮತ್ತು ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ದಿನ ಬ್ಯಾಂಕ್ ಬಂದ್ ಆಗಲಿವೆ.
ಒಟ್ನಲ್ಲಿ 2024ರ ಅಕ್ಟೋಬರ್ ತಿಂಗಳಲ್ಲಿ ಬ್ಯಾಂಕ್ ರಜಾದಿನ ಸಂಖ್ಯೆ ಹೆಚ್ಚಾಗಿದೆ, ಆದ್ರೆ ನಮ್ಮ ಕರ್ನಾಟಕದಲ್ಲಿ ಒಂದಷ್ಟು ರಿಲೀಫ್ ಇದ್ದರೂ ದಸರಾ & ದೀಪಾವಳಿ ಹಬ್ಬ ಒಂದೇ ತಿಂಗಳು ಬಂದಿರುವ ಕಾರಣ ರಜೆಗಳ ಸಂಖ್ಯೆ ಹೆಚ್ಚಾಗಿ ಇರಲಿದೆ. ಹೀಗಾಗಿ ಅಕ್ಟೋಬರ್ ತಿಂಗಳಲ್ಲಿ, ನಿಮ್ಮ ಬ್ಯಾಂಕ್ ಕೆಲಸಗಳನ್ನು ರಜಾ ಪಟ್ಟಿ ನೋಡಿ ಪ್ಲಾನ್ ಮಾಡಿಕೊಳ್ಳಿ. ಇನ್ನು 15 ದಿನ ಬ್ಯಾಂಕ್ ರಜೆ ಇದ್ದರೂ ಇಂಟರ್ನೆಟ್ ಬ್ಯಾಂಕಿಂಗ್ & ಮೊಬೈಲ್ ಬ್ಯಾಂಕಿಂಗ್ ಸೇವೆ ಸಾಮಾನ್ಯ ರೀತಿಯಲ್ಲೇ ಮುಂದುವರಿಯುತ್ತವೆ. ಹೀಗಾಗಿ ಬ್ಯಾಂಕ್ ರಜೆ ದಿನಗಳನ್ನು ನೋಡಿ ಕೆಲಸವನ್ನ ಮುಗಿಸಿಕೊಳ್ಳಿ, ಇಲ್ಲವಾದರೆ ಬ್ಯಾಂಕ್ ವಹಿವಾಟು ಇಲ್ಲದೆ ಪರದಾಟ ಪಕ್ಕಾ.












Click it and Unblock the Notifications