ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸುವಿಧ ಯೋಜನೆ: ಸ್ಯಾನಿಟರಿ ನ್ಯಾಪ್‌ಕಿನ್ಸ್‌ 2.50 ರೂಗೆ ಲಭ್ಯ!

By Nayana
|
Google Oneindia Kannada News

ಬೆಂಗಳೂರು, ಜೂನ್ 5: ಸುಲಭವಾಗಿ ಮಣ್ಣಿನಲ್ಲಿ ಕರಗಬಲ್ಲ ಸುವಿಧಾ ಬಯೋ ಡಿಗ್ರೆಡೆಬಲ್ ಸ್ಯಾನಿಟರಿ ನ್ಯಾಪ್‌ಕಿನ್‌ನ್ನು ಕೇಂದ್ರ ಸಚಿವ ಅನಂತ ಕುಮಾರ್ ಮಂಗಳವಾರ ಬಿಡುಗಡೆ ಮಾಡಿದರು.

ಈ ಕುರಿತು ಸಚಿವ ಅನಂತ ಕುಮಾರ್ ಮಾತನಾಡಿ, ನಮ್ಮ ದೇಶದಲ್ಲಿ ಕೇವಲ ಶೇ 48 ರಷ್ಟು ಮಹಿಳೆಯರು ಮಾತ್ರ ಸ್ಯಾನಿಟರಿ ನ್ಯಾಪ್ ಕಿನ್ ಬಳಸುತ್ತಾರೆ, ಇನ್ನುಳಿದ ಮಹಿಳೆಯರಿಗೆ ಸ್ಯಾನಿಟರಿ ‌ನ್ಯಾಪ್‌ ಕಿನ್ ಬಳಕೆ ಮಾಡಲ್ಲ, ನಮ್ಮ ದೇಶದಲ್ಲಿ ಬಳಕೆ ಮಾಡುತ್ತಿರುವ ಬ್ರಾಂಡೆಡ್ ನ್ಯಾಪ್ ಕಿನ್ಸ್ ಒಂದಕ್ಕೆ ಎಂಟು ರೂಪಾಯಿ, ಆದ್ರೆ ಅದ್ಯಾವುದು ಬಯೋ ಡೀಗ್ರೇಡಬಲ್ ಅಲ್ಲ, ದೇಶದಲ್ಲಿ ಮೊದಲ ಬಯೋ ಡೀಗ್ರೇಡಬಲ್ ನ್ಯಾಪ್ ಕಿನ್ ಇದ್ರೆ ಅದು ಕೇಂದ್ರ ಸರ್ಕಾರ ತಂದಿರುವ ಸುವಿಧ ನ್ಯಾಪ್ ಕಿನ್ಸ್ ಎಂದರು.

Now sanitary napkin available at Rs.2.50!

ಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಯಂತ್ರಬೆಂಗಳೂರು ರೈಲ್ವೆ ನಿಲ್ದಾಣಗಳಲ್ಲಿ ಸ್ಯಾನಿಟರಿ ಪ್ಯಾಡ್ ಯಂತ್ರ

ಮಾರ್ಚ್ 8 ರಂದು ವಿಶ್ವ ಮಹಿಳಾ ದಿನದಂದು ನಾವು ಘೋಷಣೆ ಮಾಡಿದ್ದೆವು, ಅದರಂತೆ ಇಂದು ವಿಶ್ವ ಪರಿಸರ ದಿನ ಅಂಗವಾಗಿ ಬಯೋ ಡೀಗ್ರೇಡಬಲ್ ಸ್ಯಾನಿಟರಿ ನ್ಯಾಪ್ ಕಿನ್ಸ್ ಉದ್ಘಾಟನೆ ‌ಮಾಡಿರುವುದು ಖುಷಿ ತಂದಿದೆ ಎಂದರು. ಕೇವಲ 2.50 ರೂಪಾಯಿ ಯಲ್ಲಿ ಒಂದು ಸ್ಯಾನಿಟರಿ ನ್ಯಾಪ್ಕಿನ್ ಲಭ್ಯವಿದೆ. ಮಹಿಳೆಯರ ಸ್ವಚ್ಛತೆ ಗೆ ಆದ್ಯತೆ ನೀಡಲಿರುವ ಈ ಕ್ರಮ ಕೈಗೊಳ್ಳಲಾಗಿದೆ ಎಂದರು.

Now sanitary napkin available at Rs.2.50!

ಬಡ ಹಾಗೂ ಕೆಳವರ್ಗದ ಮಹಿಳೆಯರ ಸ್ವಚ್ಚತಾ - ಸ್ವಾಸ್ಥ್ಯ ಹಾಗೂ ಸುವಿಧಕ್ಕೆ ಆದ್ಯತೆ ನೀಡಲಾಗುತ್ತದೆ.ದೇಶದ 33 ರಾಜ್ಯದಲ್ಲಿ 3600 ಜನ ಔಷದಿ ಕೇಂದ್ರಗಳಲ್ಲಿ ಇವು ಲಭ್ಯ, ಕೆಳವರ್ಗದ ಮಹಿಳೆಯರ ಆರೋಗ್ಯಕ್ಕೆ ಕೇಂದ್ರ ಸರ್ಕಾರದ ಕಾಳಜಿಯಾಗಿದೆ ಎಂದು ಹೇಳಿದರು.

English summary
Union minister Ananth Kumar has launched Suvidha bio degradable sanitary napkin on Tuesday. It will be available at Rs.2.50 per napkin, which is the only bio degradable sanitary napkin, launched by the government of India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X