ಬೆಂಗಳೂರಲ್ಲಿ 80ರ ಗಡಿ ದಾಟಿದ ಪೆಟ್ರೋಲ್‌ ದರ

Recommended Video

      ಭಾರೀ ದುಬಾರಿ ಆದ ಪೆಟ್ರೋಲ್ ಬೆಲೆ..! | Oneindia Kannada

      ಬೆಂಗಳೂರು, ಆಗಸ್ಟ್ 21: ಬೆಂಗಳೂರಲ್ಲಿ ಪೆಟ್ರೋಲ್‌ ಬೆಲೆ ಇದೀಗ 80ರ ಗಡಿ ದಾಟಿದೆ, ಮಂಗಳವಾರ ಮಾರಾಟವಾಗುವ ಪೆಟ್ರೋಲ್‌ ದರ 80.06 ರೂ, ಡೀಸೆಲ್‌ ದರ 71.31ರೂ ನಿಗದಿ ಮಾಡಲಾಗಿದೆ.

      ಇಂಧನ ದರ ಕಳೆದ ಆರು ತಿಂಗಳಿನಿಂದ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಲೇ ಇದೆ, ದರ ಇಳಿಕೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರವನ್ನು ಎಷ್ಟೇ ಒತ್ತಾಯಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ಕಡಿಮೆ ಇದ್ದರೂ ಇಂಧನ ದರ ಏರಿಕೆಯಾಗುತ್ತಿರುವ ಕುರಿತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.

      ಬೆಲೆ ಇಳಿಕೆ ಮಾಡಲು ಇಂಧನದ ಮೇಲೆ ತೆರಿಗೆ ಕಡಿಮೆ ಮಾಡುವಂತೆ ಒತ್ತಾಯ ಕೇಳಿಬಂದಿದೆ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಕೆಯಾದರೆ ಇತರೆ ಎಲ್ಲ ಉತ್ಪನ್ನಗಳ ಬೆಲೆ ಏರಿಕೆಯಾಗುವ ಸಾಧ್ಯತೆ ಇದೆ, ಇದು ಜನಸಾಮಾನ್ಯರಿಗೆ ಹೊರೆಯಾಗಲಿದೆ.

      Now Rs.80 per liter of Petrol in Bengaluru

      ಈಗಾಗಲೇ ಕೇರಳದಲ್ಲಿ ಸಂಭವಿಸಿದ ಪ್ರವಾಹದಿಂದಾಗಿ ಕೇರಳದಿಂದ ರಾಜ್ಯಕ್ಕೆ ಅದರಲ್ಲೂ ಬೆಂಗಳೂರಿಗೆ ಸರಬರಾಜಾಗುತ್ತಿದ್ದ ತೈಲ ಬಂದ್‌ ಆಗಿದೆ. ಇದರಿಂದ ಬೆಂಗಳೂರಲ್ಲಿ ಸಾಕಷ್ಟು ಎಸ್ಸಾರ್‌ ಪೆಟ್ರೋಲ್ ಬಂಕ್‌ಗಳಲ್ಲಿ ಪೆಟ್ರೋಲ್‌ ದೊರೆಯುತ್ತಿಲ್ಲ.

      ಸಾಕಷ್ಟು ಪೆಟ್ರೋಲ್‌ ಬಂಕ್‌ಗಳಲ್ಲಿ ನೋ ಸ್ಟಾಕ್‌ ಬೋರ್ಡ್‌ ಲಗತ್ತಿಸಲಾಗಿದೆ. ಹೀಗಿರುವಾಗ ದಿನದಿಂದ ದಿನಕ್ಕೆ ಪೆಟ್ರೋಲ್‌ ಬೆಲೆ ಏರುತ್ತಿದ್ದರೆ ಸಾರ್ವಜನಿಕರಿಗೆ ಇದು ಕುತ್ತಾಗಿ ಪರಿಣಮಿಸಲಿದೆ. ಆಗಸ್ಟ್ 14,15ರಂದು 79.65 ರೂ ಇತ್ತು, ಆಗಸ್ಟ್ 16,17ಕ್ಕೆ 79.70 ರೂ ಆಗಿತ್ತು, ಆಗಸ್ಟ್ 18ಕ್ಕೆ 79.79 ತಲುಪಿತ್ತು ಇದೀಗ ಆಗಸ್ಟ್ 19ರಂದು 79.91ರೂ ಆಗಿತ್ತು ಇದೀಗ ಆಗಸ್ಟ್ 21ಕ್ಕೆ 80.6ರೂ ತಲುಪಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+