ಬೆಂಗಳೂರಲ್ಲಿ ಶೀಘ್ರ ಸೋಲಾರ್ ರೀಚಾರ್ಜಿಂಗ್ ಸ್ಟೇಷನ್
ಬೆಂಗಳೂರು, ಮಾರ್ಚ್ 22: ನಗರದಲ್ಲಿ ಎರಡು ಸೋಲಾರ್ ರೀಚಾರ್ಜಿಂಗ್ ಆರಂಭಿಸಲು ಖಾಸಗಿ ಸಂಸ್ಥೆ ಮುಂದೆ ಬಂದಿದೆ. ಈಗಾಗಲೇ ಎಲೆಕ್ಟ್ರಿಕ್ ವಾಹನಗಳ ರೀಚಾರ್ಜಿಂಗ್ ಕೇಂದ್ರವನ್ನು ಬೆಸ್ಕಾಂ ಆರಂಭಿಸಿದೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಮ್ಯಾಗ್ಸಸೆ ಪ್ರಶಸ್ತಿ ಪುರಸ್ಕೃತ ಡಾ. ಹರೀಶ್ ಹಂದೆ ಈ ಯೋಜನೆ ಪ್ರಸ್ತಾವನೆಯನ್ನು ರಾಜ್ಯ ಸರ್ಕಾರದ ಮುಂದಿಟ್ಟಿದ್ದಾರೆ. ಜಯನಗರ ಹಾಗೂ ಯಲಹಂಕ ಭಾಗದಲ್ಲಿ ಸೋಲಾರ್ ರೀಚಾರ್ಜಿಂಗ್ ಕೇಂದ್ರ ಆರಂಭಿಸಲು ಸೂಕ್ತ ಎಂಬ ಮಾಹಿತಿಯನ್ನು ಸೆಲ್ಕೊ ಸಂಸ್ಥೆ ಸಂಗ್ರಹಿಸಿದೆ.
ಇಸ್ರೇಲ್ ಸೇರಿದಂತೆ ವಿದೇಶಗಳಲ್ಲಷ್ಟೇ ಸೋಲಾರ್ ರೀಚಾರ್ಜಿಂಗ್ ಕೇಂದ್ರಗಳು ಇವೆ. ಅದೇ ಮಾದರಿಯಲ್ಲಿ ಬೆಂಗಳೂರಿನಲ್ಲಿಯೂ ಆರಂಭಿಸುವ ಉದ್ದೇಶವನ್ನು ನಮ್ಮ ಸಂಸ್ಥೆ ಹೊಂದಿದೆ ಎಂದು ಹರೀಶ್ ಹಂದೆ ತಿಳಿಸಿದರು.

ಪೆಟ್ರೋಲ್ ಪಂಪ್ ಮಾದರಿಯಲ್ಲಿ ಇಸ್ರೇಲ್ ಕೆಲವೇ ನಿಮಿಷಗಳಲ್ಲಿ ಬ್ಯಾಟರಿ ಬದಲಾವಣೆ ಮಾಡಿಕೊಡುವ ಸ್ಟೇಷನ್ ಗಳು ಇವೆ. ಅಂದರೆ ಬಳಸಿದ ಬ್ಯಾಟರಿ ಕೊಟದಟು ರಿಚಾರ್ಜ್ ಮಾಡಿರುವ ಬ್ಯಾಟರಿ ಪಡೆದುಕೊಂಡು ಹೋಗಬಹುದು. ಇದಕ್ಕಾಗಿ ವಾಹನ ಚಾರ್ಜ್ ಆಗುವವರೆಗೆ ಕಾಯಬೇಕಿಲ್ಲ. ಅದೇ ಮಾದರಿಯಲ್ಲಿ ರಿಚಾರ್ಜಿಂಗ್ ಕೇಂದ್ರ ಆರಂಭಿಸುವ ಆಲೋಚನೆ ಇದೆ. ಮೊದಲು ಆಟೋಗಳಿಗೆ ಅನುಕೂಲವಾಗುವ ಚಾರ್ಜಿಂಗ್ ಕೇಂದ್ರದ ಕಡೆ ಗಮನಹರಿಸಿದ್ದೇವೆ ಎಂದು ಹೇಳಿದರು.











Click it and Unblock the Notifications