• search
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಹಿಳೆಗೆ ಸುರಕ್ಷತೆ ಇನ್ನೂ ಗಗನಕುಸುಮ: ನಿರ್ಭಯಾ ತಾಯಿ ಕಳವಳ

|

ಬೆಂಗಳೂರು, ಮಾರ್ಚ್ 10: ದೇಶದಲ್ಲಿ ಹಲವಾರು ಸರ್ಕಾರಗಳು ಹಲವಾರು ರೀತಿಯ ಅಭಿಯಾನಗಳನ್ನು ಹಮ್ಮಿಕೊಂಡಿದೆ. ಮಹಿಳಾ ಸುರಕ್ಷೆಗಾಗಿ ಯಾವ ಸರ್ಕಾರವೂ ಕೆಳಮಟ್ಟದಲ್ಲಿ ಏನನ್ನು ಮಾಡಲು ಸಾಧ್ಯವಿಲ್ಲ ಎಂದು 2012ರಲ್ಲಿ ಹೊಸ ದೆಹಲಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಸಾವಿಗೀಡಾದ ನಿರ್ಭಯಾ ತಾಯಿ ಆಶಾದೇವಿ ಅಭಿಪ್ರಾಯಪಟ್ಟಿದ್ದಾರೆ.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ಬೆಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಸಾದಕ ಮಹಿಳೆಯರಿಗೆ ನಿರ್ಭಯಾ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಮನದಾಳದ ನೋವನ್ನು ಈ ರೀತಿ ವ್ಯಕ್ತಪಡಿಸಿದರು. ಇಂಡಿಯನ್ ಎಕನಾಮಿಕ್ ಟ್ರೇಡ್ ಆರ್ಗನೈಸೇಷನ್ ಮಹಿಳಾ ಘಟಕ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಆಶಾ ದೇವಿ, ಸರ್ಕಾರ ಈಗಲಾದರೂ ಕಣ್ತೆರೆದು ನೋಡಬೇಕು.

ನಿರ್ಭಯಾ ಘಟನೆಗೆ 5 ವರ್ಷ: ಆ ದಿನ ಮರೆಯುವವರ್ಯಾರು?!

ಯಾವುದೇ ಅಭಿಯಾನಗಳನ್ನು ಹಮ್ಮಿಕೊಂಡರೂ ಕೆಳಮಟ್ಟದಲ್ಲಿ ಮಹಿಳೆಯರ ಸುರಕ್ಷತೆಗಾಗಿ ಏನನ್ನೂ ಸಾಧಿಸಲು ಸಾಧ್ಯವಾಗಿಲ್ಲ, ಕ್ರಿಮಿನಲ್ ಗಳು ಈಗಲೂ ಕೂಡ ಮಹಿಳೆಯರ ಮೇಲೆ ಯಾವುದೇ ಸಮಯದಲ್ಲಿ ದೌರ್ಜನ್ಯ ಎಸಗಬಹುದಾದ ಪರಿಸ್ಥಿತಿ ಈಗಲೂ ಇದೆ ಅದನ್ನು ತಡೆಯಲು ಇದು ಸರಿಯಾದ ಸಮಯ ಎಂದು ಅಭಿಪ್ರಾಯ ಪಟ್ಟರು.

ದೇಶದ ಪ್ರತಿಯೊಬ್ಬ ಮಹಿಳೆಗೆ ಸುರಕ್ಷತೆ ಸಿಗಬೇಕೆಂಬುದು ಆಶಯ, ಆ ನಿಟ್ಟಿನಲ್ಲಿ ನಿರ್ಭಯಾ ನಿಧಿಯಿಂದ ಮಹಿಳೆಯರ ಸುರಕ್ಷತೆಗಾಗಿ ಅನೇಕ ಕಾರ್ಯಕ್ರಮಗಳನ್ನು ಸರ್ಕಾರ ಹಮ್ಮಿಕೊಂಡಿದೆ. ಆ ಪೈಕಿ ದೇಶದ 983 ರೈಲು ನಿಲ್ದಾಣಗಳಲ್ಲಿ 19 ಸಾವಿರ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಸುವ ಕೆಲಸವನ್ನು ಘೋಷಿಸಲಾಗಿತ್ತು ಆದರೆ ಈ ಯೋಜನೆ ಇದುವರೆಗೂ ಪೂರ್ಣಗೊಳ್ಳದಿರುವುದು ಬೇಸರ ತಂದಿದೆ ಎಂದು ಬೇಸರ ವ್ಯಕ್ತಪಡಿಸಿದರು.

Nothing done for women safety: Nirbhaya's mother

ಕರ್ನಾಟಕ ಸರ್ಕಾರ ಇಲ್ಲಿನ ಮಹಿಳೆಯರಿಗೆ ಉದ್ಯೋಗ ಸ್ಥಳವೂ ಸೇರಿದಂತೆ ಎಲ್ಲ ವಲಯಗಳಲ್ಲಿ ಮಹಿಳೆ ಸುರಕ್ಷಿತವಾಗಿರುವಂತೆ ಭದ್ರತಾ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುತ್ತದೆ ಎಂದು ವಿಶ್ವಾಸ ನನನಗಿದೆ ಎಂದು ಆಶಾದೇವಿ ಹೇಳಿದರು.

ನಿರ್ಭಯಾ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದ 79 ಮಹಿಳೆಯರ ಪೈಕಿ 19 ಮಹಿಳೆಯರಿಗೆ ಇದೇ ವೇಳೆ ಆಶಾದೇವಿ ನಿರ್ಭಯಾ ಪ್ರಶಸ್ತಿಯನ್ನು ವಿತರಿಸಿದರು. ಐಪಿಎಸ್ ಅಧಿಕಾರಿ ಡಿ ರೂಪಾ, ಯುವ ರಾಜಕಾರಣಿ ಸೌಮ್ಯ ರೆಡ್ಡಿ, ಕಾರ್ಯಕರ್ತೆ ಗೀತಾ ಮೆನನ್ ಪ್ರಶಸ್ತಿ ಪಡೆದವರಲ್ಲಿ ಪ್ರಮುಖರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು ಬೆಂಗಳೂರು ಸುದ್ದಿಗಳುView All

English summary
Several campaigns have been launched by different governments, but nothing much has been done for the women safety at ground level said Asha devi mother of Nirbhaya, the victim of brutal sexual assault in New Delhi in December 2012.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more