ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರ್ನಾಟಕದಲ್ಲಿ ಬಿಜೆಪಿ ಸೋಲಿಸಲು ಜಿಗ್ನೇಶ್ ಸಂಕಲ್ಪ

|
Google Oneindia Kannada News

Recommended Video

ಕರ್ನಾಟಕದಲ್ಲಿ ಬಿಜೆಪಿಯನ್ನ ಸೋಲಿಸಲು ಪಣ ತೊಟ್ಟ ಜಿಗ್ನೇಶ್ ಮೇವಾನಿ | Oneindia Kannada

ಬೆಂಗಳೂರು, ಜನವರಿ 30: 'ಕರ್ನಾಟಕದಲ್ಲಿರುವ ಶೇ.20 ರಷ್ಟು ದಲಿತರಲ್ಲಿ 20 ಮತಗಳೂ ಬಿಜೆಪಿ ಪಾಲಾಗಬಾರದು' ಎಂದು ಗುಜರಾತ್ ನ ವಡ್ಗಾಮ್ ಶಾಸಕ ಜಿಗ್ನೇಶ್ ಮೆವಾನಿ ಹೇಳಿದ್ದಾರೆ.

ಪತ್ರಕರ್ತೆ ದಿ.ಗೌರಿ ಲಂಕೇಶ್ ಜನ್ಮದಿನದ ನಿಮಿತ್ತ ಜ.29 ರಂದು ಬೆಂಗಳೂರಿನಲ್ಲಿ ನಡೆದ 'ಗೌರಿದಿನ'ದಲ್ಲಿ ಭಾಗವಹಿಸಿದ್ದ ಜಿಗ್ನೇಶ್ ಮೆವಾನಿ ಕರ್ನಾಟಕದಲ್ಲಿ ಬಿಜೆಪಿಯನ್ನು ಸೋಲಿಸುವ ಸಂಕಲ್ಪ ಮಾಡಿದರು.

ಗೌರಿ ದಿನ: ಮೋದಿಯನ್ನು ಕರ್ನಾಟಕದೊಳಗೆ ಬಿಡಬಾರದು ಎಂದ ದೊರೆಸ್ವಾಮಿಗೌರಿ ದಿನ: ಮೋದಿಯನ್ನು ಕರ್ನಾಟಕದೊಳಗೆ ಬಿಡಬಾರದು ಎಂದ ದೊರೆಸ್ವಾಮಿ

ಕರ್ನಾಟಕ ವಿಧಾನಸಭೆ ಚುನಾವಣೆ ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿದೆ. ಸದ್ಯಕ್ಕೆ ಕರ್ನಾಟಕ್ಕೆ ಆಗಮಿಸುವ ಬೇರೆ ರಾಜ್ಯದ ಯಾವುದೇ ನಾಯಕರು ಆಡುವ ಮಾತು ಕರ್ನಾಟಕ ವಿಧಾನಸಭೆ ಚುನಾವಣೆಯನ್ನೇ ಕೇಂದ್ರೀಕರಿಸಿರುತ್ತದೆ ಎಂಬುದು ಅಚ್ಚರಿಯ ವಿಷಯವಲ್ಲ. ಹಾಗೆಯೇ ಜಿಗ್ನೇಶ್ ಮೆವಾನಿ ಅವರೂ ಮಾತನಾಡಿದ್ದಾರೆ!

ಸೈಂದ್ಧಾಂತಿಕ ರಾಜಿ

ಸೈಂದ್ಧಾಂತಿಕ ರಾಜಿ

ಕೆವೊಮ್ಮೆ ನಾವು ಸೈದ್ಧಾಂತಿಕವಾಗಿ ರಾಜಿ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಸಿದ್ಧಾಂತಕ್ಕೇ ಯಾವಾಗಲೂ ಜೋತು ಬೀಳುವುದರಿಂದ ಪ್ರಜಾಪ್ರಭುತ್ವವನ್ನು ಉಳಿಸುವುದಕ್ಕೆ ಸಾದ್ಯವಿಲ್ಲ. ಪ್ರಜಾಪ್ರಭುತ್ವ ಉಳಿಸಲು ಬೇರೆ ಸಮಾನ ಮನಸ್ಕರೊಂದಿಗೆ ಹೊಂದಾಣಿಕೆ, ರಾಜಿ ಮಾಡಿಕೊಳ್ಳುವುದು ಅಗತ್ಯ ಎಂದು ಅವರು ಹೇಳಿದರು.

ದಲಿತ ಮತ ಬಿಜೆಪಿ ಪಾಲಾಗಬಾರದು!

ದಲಿತ ಮತ ಬಿಜೆಪಿ ಪಾಲಾಗಬಾರದು!

ಕರ್ನಾಟಕದಲ್ಲಿ ಸುಮಾರು ಶೇ.20 ಪ್ರತಿಶತ ದಲಿತರಿದ್ದಾರೆ. ಅವುಗಳಲ್ಲಿ 20 ಮತಗಳೂ ಬಿಜೆಪಿ ಪಾಲಾಗಬಾರದು. ನಾನು ಏಪ್ರಿಲ್ ನಲ್ಲಿ ಎರಡು ವಾರ ಕರ್ನಾಟಕದಲ್ಲಿರುತ್ತೇನೆ. ಬಿಜೆಪಿಗೆ ಯಾರೂ ಮತ ಹಾಕದಂತೆ ಈ ಸಂದರ್ಭದಲ್ಲಿ ನಾನು ದಲಿತರಲ್ಲಿ ಮನವಿ ಮಾಡಿಕೊಳ್ಳುತ್ತೇನೆ ಎಂದು ಅವರು ಬಿಜೆಪಿಯನ್ನು ಸೋಲಿಸುವ ಸಂಕಲ್ಪ ಮಾಡಿಕೊಂಡರು.

ದಲಿತ ನಾಯಕರಾಗಿ ಬೆಳೆದ ಮೆವಾನಿ

ದಲಿತ ನಾಯಕರಾಗಿ ಬೆಳೆದ ಮೆವಾನಿ

ಸದಾ ದಲಿತ ಪರ ನಾಯಕರಾಗಿ ಗುರುತಿಸಿಕೊಂಡ ಜಿಗ್ನೇಶ್ ಮೆವಾನಿ ವಕಿಲರೂ ಹೌದು. ಕಳೆದ ಡಿಸೆಂಬರ್ ನಲ್ಲಿ ನಡೆದ ಗುಜರಾತ್ ವಿಧಾನಸಭೆ ಚುನಾವಣೆಯಲ್ಲಿ ವಡ್ಗಾಮ್ ಕ್ಷೇತ್ರದಿಂದ ಸ್ವತಂತ್ರ್ಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಂತು, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಬೆಂಬಲದೊಂದಿಗೆ ಗೆಲುವು ಸಾಧಿಸಿ ಶಾಸಕರಾಗಿದ್ದರು.

ಮುಂಬೈ ಗಲಭೆ ಹಿಂದೆ ಮೆವಾನಿ ಹೆಸರು!

ಮುಂಬೈ ಗಲಭೆ ಹಿಂದೆ ಮೆವಾನಿ ಹೆಸರು!

ಜನವರಿ ಆರಂಭದಲ್ಲಿ ಮಹಾರಾಷೃದ ಪ್ರಮುಖ ನಗರಗಳಾದ ಪುಣೆ, ಥಾಣೆ, ಮುಂಬೈಗಳಲ್ಲಿ ನಡೆದ ಭೀಮಾ ಕೊರೆಗಾಂವ್ ಗಲಭೆಯಲ್ಲೂ ಜಿಗ್ನೇಶ್ ಮೆವಾನಿ ಹೆಸರು ಕೇಳಿಬಂದಿತ್ತು. ಮೆವಾನಿ ಅವರ ಪ್ರಚೋದನಾಕಾರಿ ಭಾಷಣವೇ ಈ ಗಲಭೆಗೆ ಕಾರಣ ಎಂದು ಅವರನ್ನು ಜರೆದು, ನಂತರ ಥಾಣೆಯಲ್ಲಿ ನಡೆಯಬೇಕಿದ್ದ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು.

English summary
"In April, I will be in Karnataka for 2 weeks, will tell 20% Dalits in the state that not even their 20 votes should go to them (BJP)" Vadgam MLA from Gujarat told in Bengaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X