ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆ ಹೆಸರಲ್ಲಿ ಸುಲಿಗೆ: ಬ್ಲ್ಯಾಕ್‌ಮೇಲ್ ಮಧುಮಗ ಅರೆಸ್ಟ್

|
Google Oneindia Kannada News

ಬೆಂಗಳೂರು, ಜ. 20: ಮ್ಯಾಟ್ರಿಮೊನಿಯಲ್ಲಿ ಯುವತಿಯನ್ನು ಪರಿಚಯಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಬ್ಲ್ಯಾಕ್‌ಮೇಲ್ ಮಾಡಿದ ಮಧುಮಗ ಸೋಗಿನ ವಂಚಕನನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿದ್ದಾರೆ.

ವಿಜಯ್ ಕುಮಾರ್ ಬಂಧಿತ ಆರೋಪಿ. ಕನ್ನಡದ ಮ್ಯಾಟ್ರಿಮೊನಿಯಲ್ಲಿ ತನ್ನ ಹೆಸರು ನೊಂದಣಿ ಮಾಡಿದ್ದ ವಿಜಯ್ ಕುಮಾರ್‌ಗೆ ಯುವತಿಯೊಬ್ಬಳು ಪರಿಚಯವಾಗಿದ್ದಳು. ಇಬ್ಬರು ಪರಸ್ಪರ ಮೊಬೈಲ್ ನಂಬರ್ ವಿನಿಯಮ ಮಾಡಿಕೊಂಡು ಭೇಟಿ ಮಾಡಿದ್ದಾರೆ. ಆ ಬಳಿಕ ಏಕಾಂತವಾಗಿ ಕ್ಷಣಗಳನ್ನು ಕಳೆದಿದ್ದಾರೆ. ಇದಾದ ಬಳಿಕ ವಿಜಯ್ ಕುಮಾರ್ ಯುವತಿಗೆ 50 ಸಾವಿರ ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಹಣ ನೀಡದಿದ್ದರೆ ನಿನ್ನ ಪೋಟೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಬಿಡುಗಡೆ ಮಾಡುವುದಾಗಿ ಹೆದರಿಸಿದ್ದಾನೆ.

ಹಣ ನೀಡದ ಹಿನ್ನೆಲೆಯಲ್ಲಿ ಆ ಯುವತಿ ಹೆಸರಿನಲ್ಲಿ ನಕಲಿ ಇನ್‌ಸ್ಟಾ ಖಾತೆಗಳನ್ನು ತೆರೆದು ಅಶ್ಲೀಲವಾಗಿ ತೆಗೆದಿದ್ದ ಪೋಟೋಗಳನ್ನು ಅಪ್ಲೋಡ್ ಮಾಡಿದ್ದಾನೆ. ಅಲ್ಲದೇ ಆಕೆಯ ಸ್ನೇಹಿತರಿಗೆ ಲಿಂಕ್ ಕಳಿಸಿದ್ದಾನೆ. ಪೋಟೋ ಡಿಲೀಟ್ ಮಾಡುವಂತೆ ಯುವತಿ ಮನವಿ ಮಾಡಿದರೆ, 50 ಸಾವಿರ ರೂ. ಕೊಟ್ಟರೆ ಡಿಲೀಟ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಇದರಿಂದ ನೊಂದ ಯುವತಿ 50 ಸಾವಿರ ರೂ. ಹಣ ಕೊಟ್ಟಿದ್ದಳು. ಆ ಬಳಿಕ ಪೋಟೋಗಳನ್ನು ವಿಜಯ್ ಕುಮಾರ್ ಡಿಲೀಟ್ ಮಾಡಿದ್ದ.

 Bangalore: Police Arrested Vijay Kumar for Allegedly Blackmailing a Woman for Allegedly Marrying Her

ಅಷ್ಟಕ್ಕೆ ಸುಮ್ಮನಾಗದೇ ಮತ್ತೆ ಹಣ ನೀಡುವಂತೆ ಯುವತಿಗೆ ಕರೆ ಮಾಡಿ ಪೀಡಿಸಿದ್ದಾನೆ. ಇದರಿಂದ ನೊಂದ ಯುವತಿ ಈ ಈಶಾನ್ಯ ವಿಭಾಗದ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಅರೋಪಿ ವಿಜಯ್ ಕುಮಾರ್‌ನನ್ನು ಈಶಾನ್ಯ ವಿಭಾಗದ ಸೈಬರ್ ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ. ಹಲವರನ್ನು ಇದೇ ರೀತಿ ಹಲವರಿಗೆ ವಂಚಿಸಿರುವ ಆರೋಪ ಕೇಳಿ ಬಂದಿದ್ದು, ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

English summary
Bangalore: Northeast Division Cyber Police have arrested Vijay Kumar for allegedly blackmailing a woman for allegedly marrying her. The man who introduced himself to the woman in Matrimony was blackmailed into believing he would marry. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X