• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

'ಅಸಾಮಾನ್ಯ ಕೊಡುಗೆ ನೀಡಿದ ಶ್ರೀಸಾಮಾನ್ಯರನ್ನು ಸೂಚಿಸಿ'

By Mahesh
|

ಬೆಂಗಳೂರು, ನ.2: ಸಮಾಜಕ್ಕೆ ಅಸಾಮಾನ್ಯ ಕೊಡುಗೆ ನೀಡಿ ಎಲೆ ಮರೆ ಕಾಯಿಯಂತೆ ಇರುವ ಶ್ರೀಸಾಮಾನ್ಯರನ್ನು ಗುರುತಿಸಿ ಬೆಂಬಲಿಸುವ ಉದ್ದೇಶದಿಂದ 'ನಮ್ಮ ಬೆಂಗಳೂರು ಪ್ರಶಸ್ತಿ"ಯನ್ನು ನೀಡಲಾಗುತ್ತಿದೆ. ಈ ಪ್ರಶಸ್ತಿಗಳಿಗೆ ನಾಗರಿಕರು ಸಹ ನಾಮ ನಿರ್ದೇಶನ ಮಾಡುವ ಅವಕಾಶವಿದೆ.ನಮ್ಮ ಬೆಂಗಳೂರು ಪ್ರತಿಷ್ಠಾನ (ಎನ್‌ಬಿಎಫ್) ನೀಡುವ ನಮ್ಮ ಬೆಂಗಳೂರು ಪ್ರಶಸ್ತಿ 6ನೇ ಆವೃತ್ತಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ನಮ್ಮ ಬೆಂಗಳೂರು ಪ್ರತಿಷ್ಠಾನದ ಅಧ್ಯಕ್ಷ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ

ಬೆಂಗಳೂರಿನ ಬೆಳವಣಿಗೆಯಲ್ಲಿ ಅವಿರತವಾಗಿ ದುಡಿಯುತ್ತಿರುವ ವ್ಯಕ್ತಿ, ಸಂಘಟನೆಯನ್ನು ನಾಗರಿಕರು ಆಯ್ಕೆ ಮಾಡಬಹುದು. ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳು, ಸಾರ್ವಜನಿಕ ಕ್ಷೇಮಾಭಿವೃದ್ಧಿ ಸಂಘಗಳು, ಚುನಾಯಿತ ಪ್ರತಿನಿಧಿ, ಅನಿವಾಸಿ ಬೆಂಗಳೂರಿಗ , ಬೆಂಗಳೂರಿನ ವಿದೇಶಿ ನಿವಾಸಿಗ,ಉದ್ಯಮ ಹಾಗೂ ವ್ಯಕ್ತಿಗಳ ವಿಭಾಗದಲ್ಲಿ ನಾಮ ನಿರ್ದೇಶನ ನಡೆಯಲಿದೆ.

ಅರ್ಜಿ ಎಲ್ಲಿ ಸಿಗುತ್ತದೆ?: 2014 ನೇ ಸಾಲಿನಲ್ಲಿ 10 ವಿಭಾಗಗಳಲ್ಲಿ 14 ಪ್ರಶಸ್ತಿ ನೀಡಲಾಗುತ್ತದೆ. ಅರ್ಜಿಗಳನ್ನು ಆನ್‌ಲೈನ್ ಅಥವಾ ಪತ್ರ ಮೂಲಕ ಕಳುಹಿಸಬಹುದು. www.nammabengaluruawards.org ತಾಣದಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ nba@namma-bengaluru.org ಗೆ ಇ ಮೇಲ್ ಮಾಡಿ. [ಮಣಿವಣ್ಣನ್ ಗೆ ನಮ್ಮ ಬೆಂಗಳೂರು ಪ್ರಶಸ್ತಿ]

* ನಮ್ಮ ಬೆಂಗಳೂರು ಅಂತರ್ಜಾಲ ತಾಣದಿಂದ ನಾಮನಿರ್ದೇಶನ ಫಾರಂಅನ್ನು ಡೌನ್ ಲೋಡ್ ಮಾಡಬಹುದು.

* ಬೆಂಗಳೂರು ಒನ್ ಕಚೇರಿ, ಕೆಫೆ ಕಾಫಿ ಡೇಯಿಂದ ನಾಮನಿರ್ದೇಶನ ಫಾರಂಅನ್ನು ಪಡೆಯಬಹುದು.

* ಬಿಬಿಎಂಪಿ ಮುಖ್ಯ ಕಚೇರಿ, ಜಗದೀಶ್ ಟೂರ್ಸ್ ಆ್ಯಂಡ್ ಟ್ರಾವೆಲ್ಸ್ , ಸಿ. ಕೃಷ್ಣಯ್ಯ ಚೆಟ್ಟಿ ಅಂಡ್ ಸನ್ಸ್ ಔಟ್ ಲೆಟ್ಸ್‌ಗಳಲ್ಲೂ ಲಭ್ಯವಿವೆ.

* ಭರ್ತಿ ಮಾಡಿದ ಅರ್ಜಿಯನ್ನು ಅಥವಾ ಫಾರಂಅನ್ನು ಫೋಟೋ, ವಿಡಿಯೋ ಸಹಿತ ಸಲ್ಲಿಸಬೇಕು.

* ಖುದ್ದಾಗಿ ಅಥವಾ ಆನ್ ಲೈನ್ ಕೂಡ ಅರ್ಜಿಯನ್ನು ಸಲ್ಲಿಸಬಹುದು.

* ನಾಮನಿರ್ದೇಶನ ಫಾರಂಗಳು ಇಂಗ್ಲಿಷ್ ಮತ್ತು ಕನ್ನಡದಲ್ಲಿ ಲಭ್ಯವಿವೆ.

* ಹೆಚ್ಚಿನ ಮಾಹಿತಿಗೆ ರೇಡಿಯೋ ಇಂಡಿಗೋ ಎಫ್ ಎಂ ವಾಹಿನಿ ಕೇಳುತ್ತಿರಿ.

* ನಮ್ಮ ಬೆಂಗಳೂರು ಫೌಂಡೇಷನ್ ಜೊತೆ ಕೈ ಜೋಡಿಸಿರುವ ಸುವರ್ಣ ನ್ಯೂಸ್ ವಾಹಿನಿಯಲ್ಲಿ ವಿವರಗಳನ್ನು ಪಡೆಯಬಹುದು.

* ಎಲ್ಲಾ ವಿಭಾಗಗಳ ಅರ್ಜಿಯನ್ನು ಸಲ್ಲಿಸಲು ಕೊನೆ ದಿನಾಂಕ ಡಿ.15,2014.

* ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಶ್ರೀಧರ್ ಪಬ್ಬಿಸೆಟ್ಟಿ, 95919 82287/080-4110 2457

ಆಯ್ಕೆ ಸಮಿತಿ ಸದಸ್ಯರು: ಪ್ರಶಸ್ತಿಗೆ ಸೂಕ್ತರನ್ನು ಆರಿಸಲು 23 ಸದಸ್ಯರ ಆಯ್ಕೆ ಸಮಿತಿ ರಚಿಸಿದ್ದು, ವಿವಿಧ ಕ್ಷೇತ್ರಗಳ ಪರಿಣಿತರನ್ನು ಸಮಿತಿಗೆ ಆರಿಸಲಾಗಿದೆ. ನ್ಯಾ. ಸಂತೋಷ್ ಹೆಗ್ಡೆ, ಪ್ರದೀಪ್ ಖರ್, ಆರ್.ಕೆ ಮಿಶ್ರಾ, ಡಾ. ಅಶ್ವಿನ್ ಮಹೇಶ್, ಡಾ. ಅನಿಲ್ ಮೆನನ್, ಪ್ರೊ.ಜಿ.ಎಸ್ ಸಿದ್ಧಲಿಂಗಯ್ಯ , ಸೃಜನ್ ಪೂವಯ್ಯ , ವಸಂತಿ ಹರಿಪ್ರಕಾಶ್, ಎಚ್.ಎಸ್ ಬಲರಾಂ, ಸುಭಾಷಿನಿ ವಸಂತ್ , ಎನ್.ಎಸ್. ಮುಕುಂದ, ಮರ್ರೇ ಕಲ್ಶಾ, ರವಿ ಚಂದರ್, ಸಯದ್ ಎಂ.ಎಚ್ ಕಿರ್ಮಾನಿ, ಮಹೇಂದ್ರ ಮಿಶ್ರಾ, ತಾರಾ ಅನುರಾಧ, ಟಿ. ಆರ್ ರಘುನಂದನ್, ಗೌತಮ್ ಮಾಚಯ್ಯ, ಜಿಶ್ನು ದಾಸ್ ಗುಪ್ತ, ಡಿವಿಎಸ್ ಗುಪ್ತ, ಎಚ್ ಎಸ್ ವೆಂಕಟೇಶಮೂರ್ತಿ, ಟಿಎನ್ ಸೀತಾರಾಂ, ಡಾ. ಸುದರ್ಶನ ಬಲ್ಲಾಳ ಸಮಿತಿಯಲ್ಲಿದ್ದಾರೆ.

ಅನೇಕ ಕ್ಷೇತ್ರಗಳಲ್ಲಿ ಬೆಂಗಳೂರನ್ನು ಬೆಳೆಸಲು ಕಾರಣರಾದ ಸಾಧಕರನ್ನು ಸಾರ್ವಜನಿಕರೇ ಗುರುತಿಸಬೇಕಾಗಿದೆ. ನಗರದ ಅಭಿವೃದ್ಧಿಗೆ ಕಾರಣರಾದ ಸಾಧಕರನ್ನು ಸಾರ್ವಜನಿಕರೇ ಗುರುತಿಸಬೇಕಾಗಿದೆ. ಕಳೆದ ಸಾಲಿನಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಸುಮಾರು 61,000 ನಾಮಾಂಕಣ ಬಂದಿತ್ತು ಎಂದು ನಮ್ಮ ಬೆಂಗಳೂರು ಫೌಂಡೇಶನ್ ನ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The sixth Namma Bengaluru Awards 2014 to recognize the unsung heroes, common man of the Bangalore city. Namma Bengaluru Award has called for nominations from the public said Rajya Sabha member Rajeev Chandrashekar. Nominations will be open till December 15, 2014
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more