Bengaluru: ಗಂಟೆಗಟ್ಟಲೆ ಕಾದರೂ ಅಂಬ್ಯಲೆನ್ಸ್‌ಗೆ ಇಲ್ಲ ದಾರಿ- ಮೋದಿ ರೋಡ್ ಶೋ ವಿರುದ್ಧ ಜನಾಕ್ರೋಶ- ಜೆಡಿಎಸ್ ಟ್ವೀಟ್

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲವೇ ದಿನ ಬಾಕಿ ಇದೆ. ಹೀಗಾಗಿ ರಾಜ್ಯ ರಾಜಧಾನಿಯಲ್ಲಿ ಕಮಲ ಅರಳಿಸಲು ಬಿಜೆಪಿ ಇನ್ನಿಲ್ಲದ ಕಸರತ್ತು ನಡೆಸಿದೆ. ಸಾಲು ಸಾಲು ರೋಡ್ ಶೋ, ಸಾರ್ವಜನಿಕ ಸಭೆಗಳ ಮೂಲಕ ಮತಬೇಟೆ ಆರಂಭಿಸಿದೆ. ಇದರ ಬೆನ್ನಲ್ಲೆ ಇಂದು ಬೆಂಗಳೂರಿನಲ್ಲಿ ನರೇಂದ್ರ ಮೋದಿ ಬೃಹತ್ ರೋಡ್ ಶೋ ನಡೆಸಿದರು. ಮೋದಿ ಆಗಮನದ ನಿರೀಕ್ಷೆಯಲ್ಲಿದ್ದ ನೂರಾರು ಜನರಿಗೆ ಇಂದು ಸಂತೋಷವಾಗಿದೆ. ಆದರೆ ಇದರಿಂದ ಅದೆಷ್ಟು ಸಮಸ್ಯೆಗಳಾಗಿದೆ ಎನ್ನುವುದನ್ನು ರಸ್ತೆಗಿಳಿದು ನೋಡಿದರೆ ನಮ್ಮ ಮುಂದೆ ಬರುವ ಚಿತ್ರಣಗಳೇ ಬೇರೆ.

ಅಂದಹಾಗೆ ಇಂದು ಮೋದಿ ಆಗಮನದಿಂದಾಗಿ ಬೆಂಗಳೂರಿನ ಹಲವೆಡೆ ರಸ್ತೆಗಳನ್ನು ಬಂದ್ ಮಾಡಲಾಗಿತ್ತು. ಬ್ಯಾರಿಕೇಡ್‌ಗಳನ್ನು ಹಾಕಿ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ತಡೆ ಒಡ್ಡಲಾಗಿತ್ತು. ಇದರಿಂದಾಗಿ ವಾಹನ ಸವಾರರು ಮಾತ್ರವಲ್ಲದೆ ಅಂಬುಲೆನ್ಸ್ ಕೂಡ ಗಂಟೆಗಟ್ಟಲೆ ಕಾಯುವಂತ ಸ್ಥಿತಿ ನಿರ್ಮಾಣವಾಗಿತ್ತು. ಮುಂದಕ್ಕೆ ಚಲಿಸಲಾಗದೆ ಹಿಂದಕ್ಕೂ ಹೋಗಲಾಗದೆ ಅಂಬ್ಯುಲೆನ್ಸ್ ರೋಗಿಯೊಂದಿಗೆ ಮೋದಿ ರೋಡ್ ಶೋ ಮುಗಿಯುವುದನ್ನು ಕಾದು ನಿಲ್ಲಬೇಕಾದ ದುಸ್ಥಿತಿ ಬಂದೊದಗಿತ್ತು.

Bengaluru: No way for Ambulance even if it takes hours - Public outrage against Modi Road Show - JDS Tweet

ಜಯನಗರದಿಂದ ಮಾಗಡಿ ರಸ್ತೆಯ ಗೋವಿಂದರಾಜನಗರದವರೆಗೆ ಮೋದಿ ಇಂದು ರೋಡ್ ಶೋ ನಡೆಸಿದರು. ಮೋದಿಯನ್ನು ಕಾಣಲು ಅಪಾರ ಸಂಖ್ಯೆಯಲ್ಲಿ ಜನ ರಸ್ತೆಯ ಇಕ್ಕಲುಗಳಲ್ಲಿ ಕಾದು ನಿಂತಿದ್ದು ಕಂಡು ಬಂದಿದೆ. ಇದೊಂದು ರೀತಿಯ ಚಿತ್ರಣವಾದರೆ. ಮತ್ತೊಂದೆಡೆ ಸಂಚಾರ ಮಾಡಲು ಸಾಧ್ಯವಾಗದೇ ಜನ ಪರದಾಡಬೇಕಾಯಿತು.

'ಪ್ರಧಾನಿಗಳ ರೋಡ್ ಶೋನಿಂದ ಆಂಬುಲೆನ್ಸ್ ಮತ್ತು ತುರ್ತು ಸೇವೆಗಳಿಗೆ ಯಾವುದೇ ಅನಾನುಕೂಲತೆ ಇಲ್ಲ ಎಂದು ಹೇಳಿದ ಬಿಜೆಪಿ ನಾಯಕರು ಎಲ್ಲಿದ್ದಾರೆ!? ಜಯನಗರದಲ್ಲಿ ಆಂಬ್ಯುಲೆನ್ಸ್‌ಗಳು ಸಿಲುಕಿಕೊಂಡಿದ್ದರೆ ಪೊಲೀಸರು ಅಸಹಾಯಕರಾಗಿ ನಿಂತಿದ್ದಾರೆ' ಎಂದು ಟ್ವೀಟ್ ಮೂಲಕ ವಿಡಿಯೋ ಹಂಚಿಕೊಂಡು ಜನ ಆಕ್ರೋಶ ಹೊರಹಾಕಿದ್ದಾರೆ.

ಮೋದಿ ಆಗಮನಕ್ಕೂ ಮುನ್ನ ರಸ್ತೆ ಬಂದ್ ಮಾಡಿದ್ದರ ವಿರುದ್ಧ ಜನ ಆಕ್ರೋಶ ಹೊರಹಾಕಿದ್ದಾರೆ. ಸಾರ್ವಜನಿಕರಿಗೆ ಒಳ್ಳೆದಾಗುವಂತ ಕೆಲಸ ಮಾಡಬೇಕೇ ಹೊರತು ಕಷ್ಟ ಕೊಡಬಾರದು ಎಂದು ಸವಾರರು ಬೇಸರ ವ್ಯಕ್ತಪಡಿಸಿದ್ದಾರೆ. ಮೋದಿ ರೋಡ್‌ ಶೋದಿಂದಾಗಿ ಜನ ಸಾಮಾನ್ಯರಿಗೆ ಆದ ತೊಂದರೆಗಳ ಬಗ್ಗೆ ಜೆಡಿಎಸ್ ವಿಡಿಯೋದೊಂದಿಗೆ ಟ್ವೀಟ್ ಮಾಡಿದೆ.

'ಚುನಾವಣೆಗಾಗಿ ಗಲ್ಲಿ-ಗಲ್ಲಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಚುನಾವಣಾ ಮಂತ್ರಿ ನರೇಂದ್ರ ಮೋದಿಗೆ ಇಂದು ಮಧ್ಯಾಹ್ನ ಊಟ ಬೇಕಿಲ್ಲ. ಬೆಂಗಳೂರಿನ ಬೀದಿ ಬೀದಿಯಲ್ಲಿ ಸಾಮಾನ್ಯ ಜನರು ಹಾಕುತ್ತಿರುವ ಹಿಡಿಶಾಪದಿಂದಲೆ ಅವರ ಹೊಟ್ಟೆ ತುಂಬಲಿದೆ. ನಾಡಿಗೆ ಸಂಕಷ್ಟ ಬಂದಾಗ ತಿರುಗಿ ಕೂಡಾ ನೋಡದ ವ್ಯಕ್ತಿ ಚುನಾವಣೆ ಬಂದಾಗ ಶೋಕಿ ಮಾಡಲು ಬಂದಿದ್ದಾರೆ' ಎಂದು ಜೆಡಿಎಸ್ ಕಿಡಿ ಕಾರಿದೆ.

'ದುಡಿಮೆಗೆಂದು ಬೆಳ್ಳಂಬೆಳಗ್ಗೆ ಹೊರಟ ಜನರು ಗುರಿ ತಲುಪದೆ ಒಂದು ದಿನದ ಕೂಲಿ ಕಳೆದುಕೊಳ್ಳುವಂತಾಗಿದೆ. ಜನರ ಸಂಕಷ್ಟಗಳ ಬಗ್ಗೆ ಅರಿವೆ ಇಲ್ಲದ ವ್ಯಕ್ತಿ ಮಾತ್ರ ಹೀಗೆ ಬೇಜವಾಬ್ಧಾರಿಯಿಂದ ವರ್ತಿಸಲು ಸಾಧ್ಯ. ಬಿಜೆಪಿ ಕಾರ್ಯಕ್ರಮದಿಂದಾಗಿ ಜನರು ಟ್ರಾಫಿಕ್ ನಿಯಂತ್ರಿಸುವ ಪೊಲೀಸರ ಮೇಲೆ ಆಕ್ರೋಶ ತೋರಿಸುತ್ತಿದ್ದಾರೆ' ಎಂದು ಜೆಡಿಎಸ್ ಕಿಡಿ ಕಾರಿದೆ.

'ಸಾರ್ವಜನಿಕರು ಸಂಯಮ ಕಳೆದುಕೊಳ್ಳದೆ ಇದೇ ಆಕ್ರೋಶವನ್ನು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಬಿಜೆಪಿ ಸೋಲಿಸುವ ಮೂಲಕ ತೋರಿಸಬೇಕು ಎಂದಷ್ಟೆ ನಮ್ಮ ವಿನಂತಿ. ಚುನಾವಣೆಗೆ ತೋರುವ ಈ ಆಸಕ್ತಿ ಜನಕಲ್ಯಾಣಕ್ಕೆ ತೋರಿಸುತ್ತಿದ್ದರೆ ಇಷ್ಟು ಶಾಪಗಳನ್ನು ಜನರಿಂದ ಹಾಕಿಸಿಕೊಳ್ಳುವ ಸ್ಥಿತಿ ಬಿಜೆಪಿಗೆ ಬರುತ್ತಿರಲಿಲ್ಲ' ಎಂದು ಜೆಡಿಎಸ್ ಟ್ವೀಟ್ ಮಾಡಿದೆ.

'ಬೆಳಿಗ್ಗೆ 7 ಗಂಟೆಯಿಂದ ಇಲ್ಲಿಯವರೆಗೆ, ನಮ್ಮ ಆಸ್ಪತ್ರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಈ ಅಡಚಣೆಯು ನಮ್ಮ ನೆರೆಹೊರೆಯವರಾದ ಜಯದೇವ ಆಸ್ಪತ್ರೆಯನ್ನು ಸಹ ಒಳಗೊಂಡಿದೆ. ಮೋದಿಯವರು ರೋಡ್‌ಶೋ ಮಾಡುತ್ತಿರುವುದರಿಂದ ಮತ್ತು ದಾರಿಯುದ್ದಕ್ಕೂ ಎಲ್ಲಾ ಪ್ರಮುಖ HT ಲೈನ್‌ಗಳನ್ನು ಬಂದ್ ಮಾಡಲಾಗಿದೆ ಎಂದು ನಮಗೆ ತಿಳಿಸಲಾಯಿತು. ಇದು ತುಂಬಾ ಅನುಕೂಲಕರ !!' ಎಂದು ಡಾ.ಜಗದೀಶ ಜೆ ಹಿರೇಮಠ ಟ್ವೀಟ್ ಮಾಡಿದ್ದಾರೆ'

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+