Get Updates
Get notified of breaking news, exclusive insights, and must-see stories!

Karnataka Election 2023 LIVE: ಕಡಲನಗರಿಗೆ ಪ್ರಿಯಾಂಕ ಗಾಂಧಿ: ನಾಳೆಯಿಂದ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ

ಕರ್ನಾಟಕ ವಿಧಾನಸಭಾ ಚುನಾವಣೆ 2023 ಲೈವ್ ಸುದ್ದಿ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ನಾಳೆ (ಮೇ 7) ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮೂಡಬಿದರೆ ಕ್ಷೇತ್ರದ ವ್ಯಾಪ್ತಿಯ ಕೊಲ್ನಾಡು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಪ್ರಿಯಾಂಕ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಸಿದ್ದತೆ ನಡೆಸಿದೆ.

ಕಾಂಗ್ರೆಸ್‌ ನಿಂದ ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಈಗಾಗಲೇ ಮಿಂಚಿನ ಸಂಚಾರ ನಡೆಸಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನಲ್ಲಿ ಮತಯಾಚನೆ ಮಾಡಿದ್ದು, ನಾಳೆಯೂ ಬೆಂಗಳೂರಿನಲ್ಲಿ ಬೃಹತ್ ರೋಡ್ ಶೋ ನಡೆಸಲಿದ್ದಾರೆ. ಇಂದು ಬೆಂಗಳೂರಿನಲ್ಲಿ ಪ್ರಚಾರಕ್ಕೆ ಉತ್ತಮ ಜನ ಬೆಂಬಲ ಸಿಕ್ಕಿದ್ದು, ನಾಳೆ ಕೂಡ ಮೋದಿ ಆಗಮನಕ್ಕೆ ಬೇಕಾದ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಬಿಜೆಪಿ ಕಾರ್ಯಕರ್ತರು, ಅಭಿಮಾನಿಗಳು, ಜನಸಾಗರವೇ ಮೋದಿಯನ್ನು ನೋಡಲು ಸೇರುವ ಸಾಧ್ಯತೆ ಇದೆ.

Karnataka Election 2023 LIVE News Updates Today On PM Modis 36 Km Mega Road Show in Bengaluru Highlights in Kannada

ರಾಜ್ಯದ 224 ಕ್ಷೇತ್ರಗಳಿಗೆ ಒಂದೇ ಹಂತದ ಚುನಾವಣೆ ನಡೆಯಲಿದ್ದು, ಮೇ 8ರಂದು ಬಹಿರಂಗ ಪ್ರಚಾರಕ್ಕೆ ಅಂತಿಮ ದಿನವಾಗಿದೆ. ಇನ್ನು ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಶನಿವಾರ ಚುನಾವಣಾ ಫಲಿತಾಂಶ ಪ್ರಕಟಗೊಳ್ಳಲಿದೆ. ಮೇ 15 ರೊಳಗೆ ಚುನಾವಣಾ ಪ್ರಕ್ರಿಯೆ ಮುಕ್ತಾಯಗೊಳ್ಳಲಿದೆ.

Karnataka Election 2023 LIVE News Updates Today On PM Modis 36 Km Mega Road Show in Bengaluru Highlights in Kannada

'ಒನ್ ಇಂಡಿಯಾ ಕನ್ನಡ' ಜಾಲತಾಣ ಓದುಗರಿಗೆ ಚುನಾವಣಾ ಬೆಳವಣಿಗೆಯ ಮಾಹಿತಿಯನ್ನು ಲೈವ್ ಬ್ಲಾಗ್ ಮೂಲಕ ನೀಡಲಿದೆ. ನೀವು ಇಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ನಾಯಕರ ಪ್ರಚಾರ, ಭರವಸೆ, ಸಾರ್ವಜನಿಕ ಸಭೆಗಳು, ಹೇಳಿಕೆಗಳು, ಚರ್ಚೆಗಳು, ಪ್ರಚಾರದ ಸದ್ದು-ಗದ್ದಲಗಳ ಕ್ಷಣ ಕ್ಷಣದ ಮಾಹಿತಿ ತಿಳಿದುಕೊಳ್ಳಬಹುದು

May 06, 2023, 9:30 pm IST

ಕರ್ನಾಟಕದ ಜನರು ವಿವಿಧ ಕ್ಷೇತ್ರಗಳಲ್ಲಿ ದೇಶದ ಹೆಸರನ್ನು ಬೆಳಗಿಸಿದ್ದೀರಿ. ಇಂದಿರಾ ಗಾಂಧಿಯವರು ರಾಜಕೀಯ ಜೀವನದಲ್ಲಿ ಹೋರಾಡುತ್ತಿದ್ದಾಗ ಚಿಕ್ಕಮಗಳೂರು ಜನರು ಕೈಹಿಡಿದಿದ್ದರು. ಇದೇ ರೀತಿ 24 ವರ್ಷಗಳ ಹಿಂದೆ ನನಗೂ ಬಳ್ಳಾರಿ ಜನರು ಬೆಂಬಲಿಸಿದ್ದರು. ಈ ಬಾರಿಯೂ ಕರ್ನಾಟಕದ ಅಭಿವೃದ್ಧಿಗಾಗಿ ನೀವು ಕಾಂಗ್ರೆಸ್‌ ಅನ್ನು ಬೆಂಬಲಿಸಬೇಕು ಎಂದು ಸೋನಿಯಾ ಗಾಂಧಿ ಹುಬ್ಬಳ್ಳಿ ಸಾರ್ವಜನಿಕ ಸಭೆಯಲ್ಲಿ ಮನವಿ.
May 06, 2023, 6:51 pm IST

ನಾಳೆ ಪ್ರಧಾನಿ ನರೇಂದ್ರ ಮೋದಿಯ ಎರಡನೇ ದಿನದ ರೋಡ್‌ಶೋ ಹಿನ್ನೆಲೆ, ರಾಜಭವನ ರಸ್ತೆ, ಮೇಖ್ರಿ ವೃತ್ತ, ರೇಸ್ ಕೋರ್ಸ್ ರಸ್ತೆ, ಟಿ.ಚೌಡಯ್ಯ ರಸ್ತೆ, ರಮಣ ಮಹರ್ಷಿ ರಸ್ತೆ, ಹಳೆ ವಿಮಾನ ನಿಲ್ದಾಣ ರಸ್ತೆ, ಸುರಂಜಂದಾಸ್ ರಸ್ತೆ, ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆ, ಜಗದೀಶ್ ನಗರ ಕ್ರಾಸ್, ಜೆ.ಬಿ.ನಗರ ಮುಖ್ಯರಸ್ತೆ, ಬಿಇಎಂಎಲ್ ಜಂಕ್ಷನ್, ಹೊಸ ತಿಪ್ಪಸಂದ್ರ ಮಾರುಕಟ್ಟೆ, 80 ಅಡಿ ರಸ್ತೆ ಇಂದಿರಾನಗರ, ಹೊಸ ತಿಪ್ಪಸಂದ್ರ ರಸ್ತೆ, 12ನೇ ಮುಖ್ಯರಸ್ತೆ 100 ಅಡಿ ರಸ್ತೆ ಇಂದಿರಾನಗರ, ಕಾವೇರಿ ಶಾಲೆ, ಸಿಎಂಎಚ್ ರಸ್ತೆ, 17ನೇ ಎಫ್ ಕ್ರಾಸ್ ಆದರ್ಶ ಜಂಕ್ಷನ್, ಹಲಸೂರು ಮೆಟ್ರೋ ನಿಲ್ದಾಣ, ಮತ್ತು ಟ್ರಿನಿಟಿ ಜಂಕ್ಷನ್ ಮಾರ್ಗಗಳು ಬೆಳಗ್ಗೆ 8 ರಿಂದ ಮಧ್ಯಾಹ್ನ 12 ರವರೆಗೆ ಬಂದ್.
May 06, 2023, 6:09 pm IST

ರೇಣುಕಾಚಾರ್ಯ ಪರ ದರ್ಶನ್ ಪ್ರಚಾರ

ರೇಣುಕಾಚಾರ್ಯ ಪರ ದರ್ಶನ್ ಪ್ರಚಾರ
ಹೊನ್ನಾಳಿ - ನ್ಯಾಮತಿ ಪಟ್ಟಣದಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಪಿ. ರೇಣುಕಾಚಾರ್ಯರ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ತೂಗುದೀಪ ಭರ್ಜರಿ ಪ್ರಚಾರ. ಸಾವಿರಾರು ಯುವಕರು ದರ್ಶನ್ ನೋಡಲು ಮುಗಿಬಿದ್ದರು. ಹೊನ್ನಾಳಿ ಪಟ್ಟಣ ಹಾಗೂ ನ್ಯಾಮತಿಯಲ್ಲಿ ಬಿಜೆಪಿ ರೋಡ್ ಶೋಗೆ ಭರ್ಜರಿ ರೆಸ್ಪಾನ್ಸ್
May 06, 2023, 6:05 pm IST

ಕಡಲನಗರಿಗೆ ಪ್ರಿಯಾಂಕ ಗಾಂಧಿ

ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ನಾಳೆ (ಮೇ 7) ದಕ್ಷಿಣ ಕನ್ನಡ ಜಿಲ್ಲೆ ಮೂಲ್ಕಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಮೂಡಬಿದರೆ ಕ್ಷೇತ್ರದ ವ್ಯಾಪ್ತಿಯ ಕೊಲ್ನಾಡು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಪ್ರಿಯಾಂಕ ಅವರನ್ನು ಅದ್ದೂರಿಯಾಗಿ ಸ್ವಾಗತಿಸಲು ಜಿಲ್ಲಾ ಕಾಂಗ್ರೆಸ್ ಸಿದ್ದತೆ ನಡೆಸಿದೆ.
May 06, 2023, 6:02 pm IST

ಪ್ರವಾಸೋದ್ಯಮ ಇಲಾಖೆಯು ರಾಜ್ಯದ ಮತದಾರರಿಗೆ ಆಫರ್ ಒಂದನ್ನು ನೀಡಿದ್ದು, ಮೇ 10ರಂದು ನಡೆಯುವ ಮತದಾನ ದಿನದಂದು ಬೆಂಗಳೂರು ಸೇರಿ ರಾಜ್ಯದ ಸಾರ್ವಜನಿಕರು ಮತ ಚಲಾವಣೆ ಮಾಡಿದ ನಂತರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ವಿಶ್ವವಿಖ್ಯಾತ ನಂದಿ ಗಿರಿಧಾಮದಲ್ಲಿರುವ ಮಯೂರ ಹೋಟೆಲ್‌ ಫೈನ್ ಟಾಪ್‌ನಲ್ಲಿ ವಾಸ್ತವ್ಯ ಹೂಡಲು ಶೇ.50 ರಿಯಾಯಿತಿ ನೀಡಲು ನಿರ್ಧರಿಸಿದೆ.
May 06, 2023, 6:02 pm IST

ಮರಿತಿಬ್ಬೇಗೌಡ ಮನವಿ

ಜಿಲ್ಲೆಯಲ್ಲಿ ರಾಜಕೀಯ ಅನಾಯಕತ್ವ ಕಾಡುತ್ತಿದ್ದು, ಅಭಿವೃದ್ಧಿಯಲ್ಲಿ ತೀವ್ರ ಹಿಂದುಳಿದಿರುವ ಮಂಡ್ಯದ ಏಳೂ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುವ ಮೂಲಕ ಹೊಸ ನಾಯಕತ್ವಕ್ಕೆ ಮತದಾರರು ಮುನ್ನುಡಿ ಹಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಮನವಿ
May 06, 2023, 4:22 pm IST

ಪ್ರಚಾರದ ಸಂದರ್ಭದಲ್ಲಿ ಕಣ್ಣೀರು ಹಾಕಿದ ಡಿಕೆ ಸುರೇಶ್

ಕನಕಪುರ ಕ್ಷೇತ್ರದಲ್ಲಿ ಅಣ್ಣ ಡಿಕೆ ಶಿವಕುಮಾರ್ ಪರವಾಗಿ ಪ್ರಚಾರ ಮಾಡುವ ಸಂದರ್ಭದಲ್ಲಿ ಸಂಸದ ಡಿಕೆ ಸುರೇಶ್ ಕಣ್ಣೀರು ಹಾಕಿದ್ದಾರೆ. ಕೆಲವರು ಡಿಕೆಶಿ ಯಾಕೆ ಗಡ್ಡ ಬಿಟ್ಕೊಂಡವ್ರೆ ಅಂತಾ ಕೇಳ್ತಿದ್ದಾರೆ, ಅದಕ್ಕೆ ಕ್ಷೇತ್ರದ ಜನ ಉತ್ತರ ಕೊಡಬೇಕು. ಗಡ್ಡ ಯಾಕೆ ಬಿಟ್ಟವ್ರೆ ಎನ್ನೋದು 13ನೇ ತಾರೀಖು ತೀರ್ಮಾನ ಆಗುತ್ತೆ ಎಂದು ಹೇಳುತ್ತಾ ಗದ್ಗದಿತರಾದರು.
May 06, 2023, 4:22 pm IST

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಇದೇ ಮೊದಲ ಬಾರಿಗೆ ಕಾಂಗ್ರೆಸ್‌ ಅಧಿನಾಯಕಿ ಸೋನಿಯಾ ಗಾಂಧಿ ಅವರು ಹುಬ್ಬಳ್ಳಿಗೆ ಬಂದಿಳಿದಿದ್ದಾರೆ.
May 06, 2023, 2:44 pm IST

'ಕಾಂಗ್ರೆಸ್ ಗ್ಯಾರಂಟಿಯನ್ನು ಜನರು ನಂಬುವುದಿಲ್ಲ, ಖರ್ಗೆಯವರೇ ನೀವು ಬಿಜೆಪಿಯನ್ನು ಬೈಯುತ್ತೀರಿ, ಜನರು ನಿಮಗೆ ಬೈಯುತ್ತಿದ್ದಾರೆ. ಪ್ರಧಾನಿಯವರ ಗ್ಯಾರಂಟಿಯನ್ನು ಮಾತ್ರ ಜನರು ನಂಬುವುದು' ಬೆಳಗಾವಿ ಜಿಲ್ಲೆ ಅಥಣಿ ಸಾರ್ವಜನಿಕ ಸಭೆಯಲ್ಲಿ ಅಮಿತ್ ಶಾ.
May 06, 2023, 2:21 pm IST

ಬೆಂಗಳೂರಿನ ರೋಡ್ ಶೋ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ರಸ್ತೆ ಬದಿಯ ಆಂಜನೇಯ ಮೂರ್ತಿಗೆ ನಮಸ್ಕರಿಸಿದ್ದು ವಿಶೇಷವಾಗಿತ್ತು.
May 06, 2023, 2:18 pm IST

ಶನಿವಾರ ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪ್ರಧಾನಿ ನರೇಂದ್ರ ಮೋದಿ ರೋಡ್‌ ಶೋ ಮುಗಿದ ನಂತರ ನಿರ್ಬಂಧಿಸಲಾಗಿದ್ದ ಎಲ್ಲ ರಸ್ತೆಗಳನ್ನು ಸಂಚಾರಕ್ಕೆ ಟ್ರಾಫಿಕ್‌ ಪೊಲೀಸರು ಮುಕ್ತಗೊಳಿಸಿದ್ದಾರೆ
May 06, 2023, 2:13 pm IST

ವರುಣ ಕ್ಷೇತ್ರದ ಜನ ಯಾವತ್ತೂ ಜಾತಿ ಆಧಾರದಲ್ಲಿ ಮತದಾನ ಮಾಡಿಲ್ಲ. ನಾನು ಸ್ಪರ್ಧಿಸಿದ ಚುನಾವಣೆಗಳಲ್ಲಿ ಅಧಿಕ ಮತಗಳ ಅಂತರಲ್ಲಿ ಗೆಲ್ಲಿಸಿದ್ದಾರೆ. ನನ್ನ ರಾಜಕೀಯ ಜೀವನದ ಕಡೇ ಚುನಾವಣೆಯನ್ನು ವರುಣದಿಂದಲೇ ಎದುರಿಸುತ್ತಿದ್ದೇನೆ. ಹಾಗಾಗಿ ಈ ಬಾರಿಯೂ ಆಯ್ಕೆ ಮಾಡಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ ಜನರಿಗೆ ಮನವಿ ಮಾಡಿದರು.
May 06, 2023, 2:10 pm IST

ಈ ರೋಡ್ ಶೋ ಅನ್ನು ಮರೆಯಲು ಸಾಧ್ಯವೇ? ಕೆಪಿಸಿಸಿ ಪ್ರಶ್ನೆ
May 06, 2023, 2:08 pm IST

ಬೆಂಗಳೂರು ಮತ್ತು ಮೈಸೂರಿನ ಹಲವು ಸ್ಥಳಗಳಲ್ಲಿ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಟಿ ದಾಳಿ ವೇಳೆ ಸುಮಾರು 20 ಕೋಟಿ ಹಣ ಪತ್ತೆಯಾಗಿದೆ.
May 06, 2023, 1:11 pm IST

ಖರ್ಗೆ ಕುಟುಂಬವನ್ನು ಹತ್ಯೆ ಮಾಡಿಸಲು ರೌಡಿ ಶೀಟರ್‌ಗೆ ಟಿಕೆಟ್ ನೀಡಿದ್ದಿರಾ ಎಂದ ಕಾಂಗ್ರೆಸ್?

ಖರ್ಗೆ ಕುಟುಂಬವನ್ನು ಹತ್ಯೆ ಮಾಡುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್ ಹೇಳಿದ್ದಾರೆ ಎನ್ನಲಾದ ಆಡಿಯೋವನ್ನು ಕೆಪಿಸಿಸಿ ತನ್ನ ಅಧಿಕೃತ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದು, ಖರ್ಗೆ ಕುಟುಂಬದ ಹತ್ಯೆಗೆ ನೀಡಿದ ಸುಪಾರಿಗಾಗಿಯೇ ರೌಡಿ ಶೀಟರ್‌ಗೆ ಟಿಕೆಟ್ ನೀಲಾಗಿದೆಯೇ ನರೇಂದ್ರ ಮೋದಿಯವರೇ ಎಂದು ಪ್ರಶ್ನೆ ಮಾಡಿದೆ. ಖರ್ಗೆ ಕುಟುಂಬದ ಹತ್ಯೆಗಾಗಿಯೆ ರೌಡಿ ಶೀಟರ್‌ಗೆ ಟಿಕೆಟ್ ನೀಡಲಾಗಿದೆಯೇ ಎಂದು ಕೆಪಿಸಿಸಿ ಕೇಳಿದೆ.
May 06, 2023, 1:11 pm IST

ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿಯಿದೆ: ಬಸವರಾಜ ಬೊಮ್ಮಾಯಿ‌

ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿಯಿದೆ. ನಿಮ್ಮ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆದೆ‌. ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿ ಇದೆ. ಹುದ್ದೆಯ ಗೌರವ ನಿಮಗೆ ಸಲುತ್ತದೆ. ಈ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ನಿಮ್ಮೆಲ್ಲರ ಆಶೀರ್ವಾದ ಇದೆ ಎಂದರು.
May 06, 2023, 1:11 pm IST

ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿಯಿದೆ: ಬಸವರಾಜ ಬೊಮ್ಮಾಯಿ‌

ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿಯಿದೆ. ನಿಮ್ಮ ಆಶೀರ್ವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ನಿಮ್ಮೆಲ್ಲರ ಆಶೀರ್ವಾದದಿಂದ ನಾನು ಸಿಎಂ ಆದೆ‌. ನಿಮ್ಮ ಮತಕ್ಕೆ ಮುಖ್ಯಮಂತ್ರಿ ಮಾಡುವ ಶಕ್ತಿ ಇದೆ. ಹುದ್ದೆಯ ಗೌರವ ನಿಮಗೆ ಸಲುತ್ತದೆ. ಈ ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿ ಮಾಡಲು ನಿಮ್ಮೆಲ್ಲರ ಆಶೀರ್ವಾದ ಇದೆ ಎಂದರು.
May 06, 2023, 12:51 pm IST

ಪ್ರಧಾನಿ ರೋಡ್ ಶೋ: ಬೆಂಗಳೂರಿಗರ ಆಕ್ರೋಶ

ಪ್ರಧಾನಿ ಮೋದಿ ರೋಡ್ ಶೋಗೆ ಬೆಂಗಳೂರು ನಿವಾಸಿಗಳು, ಬಸ್ ಸಿಗದೇ ಪರದಾಡಿದವರು ಆಕ್ರೋಶ ವ್ಯಕ್ತಪಡಿಸಿ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಜೆಡಿಎಸ್ ಚುನಾವಣೆಗಾಗಿ ಗಲ್ಲಿ-ಗಲ್ಲಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಚುನಾವಣಾ ಮಂತ್ರಿ ನರೇಂದ್ರ ಮೋದಿಯವರಿಗೆ ಇಂದು ಮಧ್ಯಾಹ್ನ ಊಟ ಬೇಕಿಲ್ಲ.ಬೆಂಗಳೂರಿನ ಬೀದಿ ಬೀದಿಯಲ್ಲಿ ಸಾಮಾನ್ಯ ಜನರು ಹಾಕುತ್ತಿರುವ ಹಿಡಿಶಾಪದಿಂದಲೆ ಅವರ ಹೊಟ್ಟೆ ತುಂಬಲಿದೆ. ನಾಡಿಗೆ ಸಂಕಷ್ಟ ಬಂದಾಗ ತಿರುಗಿ ಕೂಡಾ ನೋಡದ ವ್ಯಕ್ತಿ ಚುನಾವಣೆ ಬಂದಾಗ ಶೋಕಿ ಮಾಡಲು ಬಂದಿದ್ದಾರೆ ಎಂದು ವ್ಯಂಗ್ಯವಾಡಿದೆ ಎಂದು ಟೀಕಿಸಿದೆ.
May 06, 2023, 12:39 pm IST

ಅಭಿವೃದ್ಧಿಯ ಶೋ ಮಾಡಿ

ಮೋದಿ ರೋಡ್ ಶೋ ಟೀಕಿಸಿ ಕರ್ನಾಟಕ ಕಾಂಗ್ರೆಸ್ ಟ್ವೀಟ್ ಮಾಡಿದ್ದು, "ನರೇಂದ್ರ ಮೋದಿಯವರೇ ನೀವು ಮಾಡಬೇಕಿರುವುದು ರೋಡ್ ಶೋ ಅಲ್ಲ, ಅಭಿವೃದ್ಧಿಯ ಶೋ. ಇಲ್ಲಿ ನಿಮ್ಮವರು ಅಧಿಕಾರದುದ್ದಕ್ಕೂ ಭ್ರಷ್ಟಾಚಾರದ ಶೋ ನಡೆಸಿದ್ದರು, ಸಿಡಿ ಶೋ ನಡೆಸಿದ್ದರು, ಬೇಜವಾಬ್ದಾರಿತನದ ಶೋ ನಡೆಸಿದ್ದರು. ಈಗ ನೀವು ರೋಡ್ ಶೋಕಿಗೆ ಬಂದಿದ್ದೀರಿ, ಏಕೆ ನಿಮ್ಮ ಬಾಯಲ್ಲಿ ಒಂದೇ ಒಂದು ಜನಪರ ಯೋಜನೆಗಳ ಹೆಸರು ಬರುತ್ತಿಲ್ಲ?" ಎಂದು ಪ್ರಶ್ನೆ ಮಾಡಿದೆ.
May 06, 2023, 12:26 pm IST

"ಲಿಂಗಾಯತ ಸಮುದಾಯದ ಬಗ್ಗೆ ಮಾತಾಡಿ, ಈಗ ಕ್ಷಮಿಸಿ ಎನ್ನುತ್ತಿದ್ದಾರೆ. ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಎಷ್ಟು ಜನರನ್ನುಬೆಳೆಸಿದರು" ಹನೂರಿನಲ್ಲಿ ಸಿದ್ದರಾಮಯ್ಯ ವಿರುದ್ದ ಕುಮಾರಸ್ವಾಮಿ ವಾಗ್ದಾಳಿ. ಜೆಡಿಎಸ್ ಪಕ್ಷಕ್ಕೆ ತತ್ವ, ಸಿದ್ದಾಂತ ಇಲ್ಲ ಎಂದು ಸಿದ್ದರಾಮಯ್ಯ ಲೇವಡಿ ಮಾಡಿದ್ದರು.
May 06, 2023, 12:20 pm IST

ಕಾಫಿನಾಡಿನಲ್ಲಿ ಯೋಗಿ ಆದಿತ್ಯನಾಥ್ ಮತ ಬೇಟೆ

ಚಿಕ್ಕಮಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನೆಲೆಯಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಂದು ಚಿಕ್ಕಮಗಳೂರಿಗೆ ಆಗಮಿಸಿದ್ದು, ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಆರಂಭಿಸಿದ್ದಾರೆ. ಕೊಪ್ಪ ಪಟ್ಟಣದ ಲಾಲ್ ಬಹಾದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಬಹಿರಂಗ ಸಭೆಯಲ್ಲಿ ಯೋಗಿ ಆದಿತ್ಯನಾಥ್ ಶೃಂಗೇರಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಪರ ಮತಯಾಚನೆ ಮಾಡಿದ್ದಾರೆ.
May 06, 2023, 12:10 pm IST

ಸಂಚಾರ ಮಾಹಿತಿ: ಬುಲ್ ಟೆಂಪಲ್ ರಸ್ತೆಯಿಂದ ರಾಮಕೃಷ್ಣ ಆಶ್ರಮದವರೆಗೆ ಸಂಚಾರಕ್ಕೆ ಈಗ ಅನುಮತಿ ನೀಡಲಾಗಿದೆ. ಸಂಚಾರ ಸಲಹೆ : ಈಗ ನೆಟ್‌ಕಲ್ಲಪ್ಪ ವೃತ್ತ ಮತ್ತು ಎನ್‌ಆರ್‌ ಕಾಲೋನಿ ಬುಲ್‌ ಟೆಂಪಲ್‌ವರೆಗೆ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
May 06, 2023, 12:06 pm IST

ಚಾಮರಾಜಪೇಟೆಯಲ್ಲಿ ಪ್ರಧಾನಿ ಮೋದಿ ರೋಡ್ ಶೋ

ಚಾಮರಾಜಪೇಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಆರಂಭವಾಗಿದೆ. ತೆರೆದ ವಾಹನದಲ್ಲಿ ಬರುತ್ತಿರುವ ಮೋದಿಗೆ ಪುಷ್ಪ ಮಳೆಯಿಂದ ಸ್ವಾಗತ ಕೋರಲಾಗುತ್ತಿದೆ. ಬಿಜೆಪಿ, ಭಜರಂಗಿ ಬಾವುಟ ಹಿಡಿದು ಮೋದಿಗೆ ಜೈಕಾರವನ್ನು ಜನ ಹಾಕುತ್ತಿದ್ದಾರೆ. ರೋಡ್‌ ಶೋ ವೇಳೆ ತೇಜಸ್ವಿ ಸೂರ್ಯ, ಪಿಸಿ ಮೋಹನ್ ಮೋದಿ ಅವರಿಗೆ ಸಾಥ್ ನೀಡಿದ್ದಾರೆ. ಕೇಸರಿ ಟೋಪಿ ಧರಿಸಿ ರಾಜಮಾರ್ಗದಲ್ಲಿ ಮೋದಿ ಸಂಚಾರ ನಡೆಸಿದ್ದಾರೆ.
May 06, 2023, 12:01 pm IST

ನಿಮ್ಮ ಹಣ ಖರ್ಚು ಮಾಡದೇ ಪ್ರಚಾರ ಮಾಡುವುದು ಹೇಗೆ ? ಉಪೇಂದ್ರ ಟ್ವೀಟ್
May 06, 2023, 11:38 am IST

ಮೋದಿ ರೋಡ್ ಶೋ ವಿರುದ್ಧ ಬೆಂಗಳೂರಿನ ಜನ ಆಕ್ರೋಶ

ಮೋದಿ ರೋಡ್ ಶೋ ವಿರುದ್ಧ ಬೆಂಗಳೂರಿನ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಬೆಂಗಳೂರಿನ ಜನರಿಗೆ ತೊಂದರೆ ನೀಡಿ ಮೋದಿ ಬರುವಂತ ಅವಶ್ಯಕತೆ ಏನಿದೆ..?? ಕೊರೊನಾ ಸಮಯದಲ್ಲಿ ಮೋದಿ ಬರಲಿಲ್ಲ, ನೆರೆ ಬಂದಾಗ ಬರಲಿಲ್ಲ ಈಗ ಯಾಕೆ ಬರುತ್ತಿದ್ದಾರೆ? ಸಮಯಕ್ಕೆ ಸರಿಯಾಗಿ ಕೆಲಸಕ್ಕೆ ಹೋಗದಿದ್ದರೆ ಅರ್ಧ ದಿನದ ಸಂಬಳ ಕಟ್ ಮಾಡ್ತಾರೆ. ಮೋದಿ ಬಂದು ಹೋಗಿ ಬಿಡ್ತಾರೆ, ಸಂಬಳ ಯಾರು ಕೊಡ್ತಾರೆ? ಕಂಪನಿಗಳಿಗೆ ನಾವು ಮೋದಿ ಬಂದಿದ್ರು ಅಂತ ಹೇಳಿದ್ರೆ ಕೇಲ್ತಾರಾ?' ಎಂದು ಸಿಲಿಕಾನ್ ಸಿಟಿ ಜನ ಪ್ರಶ್ನೆ ಮಾಡುತ್ತಿದ್ದಾರೆ.
May 06, 2023, 10:46 am IST

ಮೋದಿ ರೋಡ್ ಶೋನಲ್ಲಿ 40 ಟನ್ ಹೂವು ಬಳಕೆ

ಮೋದಿ ರೋಡ್ ಶೋನಲ್ಲಿ ಹೂವಿನ ಮಳೆ ಸುರಿಸಲು ಬಿಜೆಪಿ ಮುಂದಾಗಿದೆ. ಮೋದಿ ಸಂಚರಿಸುವ ಮಾರ್ಗದುದ್ದಕ್ಕೂ ಹೂವನ್ನು ಮೋದಿ ಮೇಲೆ ಎಸೆಯಲು ವ್ಯವಸ್ಥೆ ಮಾಡಲಾಗಿದೆ. ಇದಕ್ಕಾಗಿ 6 ವಿಧದ ಸುಮಾರು 40 ಟನ್ ಹೂವನ್ನು ಬಳಸಲಾಗುತ್ತಿದೆ.
May 06, 2023, 10:20 am IST

ಮೋದಿ ರೋಡ್ ಶೋ ನೀಡಲು ಆಗಮಿಸಿದ ಸುಬುಧೇಂದ್ರ ತೀರ್ಥ ಶ್ರೀ

ಬೆಂಗಳೂರಿನಲ್ಲಿ ನಡೆಯಲಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ವೀಕ್ಷಿಸಲು ಮಂತ್ರಾಲಯದ ರಾಘವೇಂದ್ರ ಸ್ವಾಮಿ ಮಠದ ಸುಬುಧೇಂದ್ರ ತೀರ್ಥ ಶ್ರೀಗಳು ಆಗಮಿಸಿದ್ದಾರೆ. ಜಯನಗರದ ಸೌತ್‌ಎಂಡ್ ಸರ್ಕಲ್‌ನಲ್ಲಿ ಸಾಂಪ್ರದಾಯಿಕ ನೃತ್ಯದ ಮೂಲಕ ನರೇಂದ್ರ ಮೋದಿಯವರಿಗೆ ಭರ್ಜರಿ ಸ್ವಾಗತ ನೀಡಲು ಸೃಷ್ಟಿಕಲಾ ವಿದ್ಯಾಲಯದ ಕಲಾ ತಂಡ ಸಜ್ಜಾಗಿದೆ.
May 06, 2023, 10:07 am IST

ಆಡಳಿತರೂಢ ಬಿಜೆಪಿ ಸರ್ಕಾರದ ಮೇಲೆ 40% ಭ್ರಷ್ಟಾಚಾರದ ನಿರಂತರ ಆರೋಪ ಮಾಡುತ್ತಿರುವ ಕಾಂಗ್ರೆಸ್‌ ಈಗ ಪಕ್ಷವನ್ನು ಭಾರತದ ಇತಿಹಾಸದಲ್ಲೇ ಅತ್ಯಂತ ಭ್ರಷ್ಟ ಸರ್ಕಾರ ಎಂದು ಜರೆದಿದೆ.
May 06, 2023, 9:45 am IST

'ಪಾಪ ನಮ್ಮ ಪ್ರಧಾನಿ ಮೋದಿಯವರು, ದಿನಕ್ಕೆ 18 ಗಂಟೆ ಕೆಲಸ ಮಾಡುವವರು, ಜೀವನದಲ್ಲಿ ಒಂದು ದಿನವೂ ರಜೆ ಪಡೆಯದವರು, ನಿರಂತರ ದೇಶದ ಕೆಲಸಗಳಲ್ಲಿ ತೊಡಗಿಸಿಕೊಳ್ಳುವವರು, ಅತ್ಯಂತ ಬ್ಯುಸಿ ಇರುವ ಅವರು ಈಗ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಕಳೆದ ಒಂದು ತಿಂಗಳಿಂದ ಕರ್ತವ್ಯಕ್ಕೆ ರಜೆ ಪಡೆದು ಕರ್ನಾಟಕದಲ್ಲೇ ಠಿಕಾಣಿ ಹೂಡಿದ್ದು ನೋಡಿ ಬೇಸರವಾಗುತ್ತದೆ!' ಟ್ವೀಟ್ ಮೂಲಕ ಕೆಪಿಸಿಸಿ ವ್ಯಂಗ್ಯ.
May 06, 2023, 9:45 am IST

ಬೆಂಗಳೂರಿಗೆ ಬಂದಿರೋದು ಮೋದಿನಾ ಅಥವಾ ಕೊರೊನಾ ವೈರಸ್ಸಾ?

ಬೆಂಗಳೂರಿನಲ್ಲಿ ನರೇಂದ್ರ ಮೋದಿ ರೋಡ್ ಶೋ ಬಗ್ಗೆ ಕಾಂಗ್ರೆಸ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, "ಜನರಿಗೆ ವಿಧಿಸಿದ ಕಟ್ಟಪ್ಪಣೆಗಳನ್ನು ನೋಡಿದರೆ ಬೆಂಗಳೂರಿಗೆ ಬಂದಿದ್ದು ಕರೋನಾ ವೈರಸ್ಸಾ ಅಥವಾ ಮೋದಿನಾ ಎಂಬ ಅನುಮಾನ ಮೂಡುತ್ತಿದೆ. ಬೆಂಗಳೂರು ನಿವಾಸಿಗಳನ್ನು ಹೌಸ್ ಅರೆಸ್ಟ್ ಮಾಡಿ ಶೋ ಮಾಡುವಂತಾದ್ದೇನಿದೆ ನರೇಂದ್ರ ಮೋದಿಯವೇ? ಜನರಿಗೆ ಕೋವಿಡ್ ಲಾಕ್ಡೌನ್‌ಗಿಂತಲೂ ಮಿಗಿಲಾದ ಹಿಂಸೆ ನೀಡಿ ಕರ್ನಾಟಕ ಬಿಜೆಪಿ ಏನು ಸಾಧಿಸುತ್ತದೆ?" ಎಂದು ಪ್ರಶ್ನೆ ಮಾಡಿದೆ.
READ MORE

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+