ಡಿ.28, 29ರಂದು ಬೆಂಗಳೂರಿನಲ್ಲಿ ನೀರು ಬರೋಲ್ಲ

ಬೆಂಗಳೂರು, ಡಿ. 23 : ಕಾವೇರಿ 1 ಮತ್ತು 2ನೇ ಹಂತದ ಯೋಜನೆ ನಿರ್ವಹಣಾ ಕಾರ್ಯ ಕೈಗೊಳ್ಳುವುದರಿಂದ ಡಿ.28 ಮತ್ತು 29ರಂದು ನಗರದ ಕೆಲವು ಭಾಗಗಳಲ್ಲಿ ನೀರು ಪೂರೈಕೆ ಇರುವುದಿಲ್ಲ ಎಂದು ಬೆಂಗಳೂರು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.

ಡಿ.28ರಂದು ಬೆ.9ರಿಂದ ಸಂಜೆ 6ರವರೆಗೆ ಟಿ.ಕೆ.ಹಳ್ಳಿ, ಹಾರೋಹಳ್ಳಿ ಹಾಗೂ ತಾತಗುಣಿಯಲ್ಲಿ ನೀರು ಪಂಪಿಂಗ್ ಕಾರ್ಯ ಸ್ಥಗಿತಗೊಳ್ಳಲಿದೆ. ಪರಿಣಾಮ ನಗರಕ್ಕೆ ಅಗತ್ಯದಷ್ಟು ನೀರು ಪೂರೈಕೆ ಆಗುವುದಿಲ್ಲ. ಒಟ್ಟು 9 ಗಂಟೆ ಪಂಪಿಂಗ್ ಸ್ಥಗಿತಗೊಳ್ಳುವುದರಿಂದ ಎರಡು ದಿನ ನಗರದ ವಿವಿಧ ಬಡಾವಣೆಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. [ಬೆಂಗಳೂರಿಗೆ ಸಿಕ್ತು 10 ಟಿಎಂಸಿ ಹೆಚ್ಚು ಕಾವೇರಿ ನೀರು]

BWSSB

ಕಾವೇರಿ ಮೊದಲ ಹಾಗೂ ಎರಡನೇ ಹಂತದ ಯೋಜನೆಯ ವಿತರಣಾ ಮಾರ್ಗಗಳ ಸೋರಿಕೆ ನಿಯಂತ್ರಿಸಲು ವಾಲ್ವ್‌ಗಳ ಬದಲಾವಣೆ ಕಾಮಗಾರಿ ಸೇರಿದಂತೆ ಇತರ ಕಾಮಗಾರಿಗಳನ್ನು ಕೈಗೊಳ್ಳುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಜಲಮಂಡಳಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಯಾವ ಬಡಾವಣೆಗಳಲ್ಲಿ ನೀರಿಲ್ಲ : ಕೆ.ಎನ್. ಲೇಔಟ್, ಬನಶಂಕರಿ, ಜಯನಗರ, ಬಸವನಗುಡಿ, ಚಾಮರಾಜಪೇಟೆ, ಪದ್ಮನಾಭನಗರ, ಬೈರಸಂದ್ರ, ಜಾನ್ಸನ್ ಮಾರ್ಕೆಟ್, ಬಾಪೂಜಿನಗರ, ಮೈಸೂರು ರಸ್ತೆ, ಶಾಂತಿನಗರ ಪೂರ್ಣ ಪ್ರದೇಶ ಹಾಗೂ ಕೋರಮಂಗಲಗಳಲ್ಲಿ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ವಿಜಯನಗರ, ಚೋಳೂರು ಪಾಳ್ಯ, ಚಿಕ್ಕಲಾಲ್ ಬಾಗ್‌ನ ಕೆಲವು ಪ್ರದೇಶಗಳಲ್ಲಿಯೂ ಎರಡು ದಿನಗಳ ಕಾಲ ನೀರು ಪೂರೈಕೆ ವ್ಯತ್ಯಯವಾಗಲಿದೆ ಎಂದು ಜಲಮಂಡಳಿ ತಿಳಿಸಿದೆ. ಎರಡು ದಿನ ನೀರಿನ ಪೂರೈಕೆ ವ್ಯತ್ಯಯ ಉಂಟಾಗುವುದರಿಂದ ಹಿಂದಿನ ದಿನವೇ ನೀರನ್ನು ಸಂಗ್ರಹಿಸಿಟ್ಟುಕೊಳ್ಳಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+