ಗಜ ಪಥ ಬದಲು: ಬೆಂಗಳೂರಿಗೆ ಚಂಡಮಾರುತ ಭೀತಿ ಇಲ್ಲ

Recommended Video

      ಬೆಂಗಳೂರಿಗೆ ಗಜ ಚಂಡಮಾರುತದ ಭೀತಿ ಇಲ್ಲ | Oneindia Kannada

      ಬೆಂಗಳೂರು, ನವೆಂಬರ್ 15: ಗಜ ಚಂಡಮಾರುತ ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೆಚ್ಚು ಮಳೆಯನ್ನು ಹೊತ್ತು ತರುವ ಸಾಧ್ಯತೆ ಇದ್ದು ಕರ್ನಾಟಕದ ಮೇಲೆ ಚಂಡಮಾರುತ ಹೆಚ್ಚಿನ ಪರಿಣಾಮ ಬೀರುವುದಿಲ್ಲ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

      ಬೆಂಗಳೂರಿನ ಮೇಲೂ ಪರಿಣಾಮ ಬೀರದ ಕಾರಣ ಭಾರಿ ಮಳೆ ಬೀಳದು, ದಕ್ಷಿಣ ಒಳನಾಡಿನ ಕೆಲವೆಡೆ ಹಾಗೂ ಕರಾವಳಿ ಭಾಗದಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಲ್ಲಿ ಶುಭ್ರ ಆಕಾಶ ಇರಲಿದ್ದು ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದೆ.

      ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ಬೆಂಗಳೂರು ನಗರದಲ್ಲಿ ಮೂರು ದಿನಗಳ ಕಾಲ ಮಳೆಯಾಗುತ್ತದೆ ಎಂದು ಹೇಳಲಾಗಿತ್ತು ಆದರೆ ಮಾರುತ ಪಥ ಸ್ವಲ್ಪ ಮಟ್ಟಿಗೆ ಬದಲಾದ ಕಾರಣ ರಾಜ್ಯದತ್ತ ಮಳೆ ಮೋಡಗಳು ಆವರಿಸಿಕೊಳ್ಳುವುದು ಕ್ಷೀಣಿಸಿದೆ.ಭಾರಿ ಮಳೆ ಬದಲು ಸಾಧಾರಣ ಮಳೆ ಬರುವ ನಿರೀಕ್ಷೆ ಇದೆ.

      No threat of GAJA cyclone effect on Bengaluru

      ಚಂಡಮಾರುತ ತಮಿಳುನಾಡಿಗೆ ಪ್ರವೇಶಿಸಲು ಕೇವಲ 6 ತಾಸುಗಳು ಮಾತ್ರ ಉಳಿದಿದೆ. ತಮಿಳುನಾಡಿನಿಂದ 370 ಕಿ.ಮೀ ದೂರದಲ್ಲಿದೆ. ಚಂಡಮಾರುತ ವೇಗ 100 ಕೆಎಂಪಿಎಚ್‌ನಷ್ಟಿದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶದ ಕರಾವಳಿ ಭಾಗದಲ್ಲಿ ಹೆಚ್ಚು ಮಳೆಯನ್ನು ನಿರೀಕ್ಷಿಸಲಾಗಿದೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+