• search
 • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ನಮ್ಮ ಮೆಟ್ರೋ ನಿಲ್ದಾಣದಲ್ಲಿ ಸ್ಮಾರ್ಟ್‌ ಕಾರ್ಡ್ ರಿಚಾರ್ಜ್ ಮಾಡುವಂತಿಲ್ಲ

|

ಬೆಂಗಳೂರು, ಸೆಪ್ಟೆಂಬರ್ 04: ಕೇಂದ್ರ ಗೃಹ ಇಲಾಖೆ ಸೆಪ್ಟೆಂಬರ್ 7 ರಿಂದ ಮೆಟ್ರೋ ಸಂಚಾರ ಆರಂಭಿಸಲು ಅನುಮತಿ ನೀಡಿದೆ. ಬೆಂಗಳೂರು ನಗರದಲ್ಲಿ ಮೆಟ್ರೋ ರೈಲು ಓಡಿಸಲು ಬಿಎಂಆರ್‌ಸಿಎಲ್ ಸಿದ್ಧತೆಗಳನ್ನು ಮಾಡಿಕೊಂಡಿದೆ.

   Namma Metro ಸಾಮಾಜಿಕ ಅಂತರ ಕಾಯ್ದುಕೊಳ್ಳದ ನಿಲ್ದಾಣಗಳಲ್ಲಿ ನಿಲ್ಲಲ್ಲ | Oneindia Kannada

   ಉಡ್ತಾ 'ಪಂಜಾಬ್‌'ನಿಂದ ಉಡ್ತಾ 'ಬೆಂಗಳೂರ್' ತನಕ!

   ನಮ್ಮ ಮೆಟ್ರೋ ನಿಲ್ದಾಣದಲ್ಲಿ ಮೆಟ್ರೋ ಕಾರ್ಡ್ ರಿಚಾರ್ಜ್ ಮಾಡಿಸಲು ಇದ್ದ ಸೌಲಭ್ಯವನ್ನು ಬಿಎಂಆರ್‌ಸಿಎಲ್ ರದ್ದುಗೊಳಿಸಿದೆ. ಕಾರ್ಡ್ ರಿಚಾರ್ಜ್ ಮಾಡಲು ಅನುಕೂಲವಾಗುವಂತೆ ಅಪ್ಲಿಕೇಶನ್‌ ಅನ್ನು ಸೆಪ್ಟೆಂಬರ್ 7ರಂದು ಬಿಡುಗಡೆ ಮಾಡಲಾಗುತ್ತದೆ.

   ಚಿತ್ರಗಳು: ಮೆಟ್ರೋ ಸಂಚಾರಕ್ಕಾಗಿ ಸಿದ್ಧತೆ ಹೇಗಿದೆ?

   ಮೆಟ್ರೋ ಪ್ರಯಾಣಿಕರು ನಿಲ್ದಾಣ ತಲುಪುವ ಒಂದು ಗಂಟೆ ಮೊದಲು ನಮ್ಮ ಮೆಟ್ರೋ ಮೊಬೈಲ್ ಅಪ್ಲಿಕೇಶನ್ ಅಥವ ಬಿಎಂಆರ್‌ಸಿಎಲ್ ವೆಬ್‌ಸೈಟ್‌ಗೆ ನೀಡುವ ಮೂಲಕ ಕಾರ್ಡ್ ರಿಚಾರ್ಜ್ ಮಾಡಿಕೊಳ್ಳಬಹುದು.

   ಮೋದಿ ಕನಸಿಗೆ ಕೊಳ್ಳಿ ಇಟ್ಟ ಕೆಎಸ್ಎಸ್ಐಡಿಸಿ, ಏನಿದು ಭಾರಿ ಆರೋಪ?

   ಸೆ.7ರಿಂದ ಮೆಟ್ರೋ; 3 ಗಂಟೆ ಮಾತ್ರ ರೈಲು ಸಂಚಾರ

   ಸ್ಮಾರ್ಟ್‌ ಕಾರ್ಡ್‌ ಇಲ್ಲದ ಪ್ರಯಾಣಿಕರು ನಿಲ್ದಾಣದಲ್ಲಿ ಕಾರ್ಡ್‌ ಪಡೆಯಲು ವ್ಯವಸ್ಥೆ ಮಾಡಲಾಗಿದೆ. ಆದರೆ, ಕ್ಯಾಶ್‌ ಲೆಸ್ ವಿಧಾನದಲ್ಲಿ ಕಾರ್ಡ್ ಪಡೆಯಬೇಕು. ಪೇಟಿಯಂ, ಯುಪಿಐ ಮೂಲಕ ಹಣ ಪಾವತಿ ಮಾಡಬಹುದು.

   ಮೆಟ್ರೋ ಸಂಚಾರ; ಬರಲಿದೆ ಪ್ರತ್ಯೇಕ ಮಾರ್ಗಸೂಚಿ

   ಪ್ರವೇಶ ಮತ್ತು ನಿರ್ಗಮನ ಗೇಟ್‌ನಲ್ಲಿ ಕಾರ್ಡ್‌ ತೋರಿಸಬೇಕಿಲ್ಲ. ಗೇಟ್ ಬಳಿ ಇದಕ್ಕಾಗಿಯೇ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಟೋಕನ್ ನೀಡುವ ಪ್ರಕ್ರಿಯೆ ಸದ್ಯಕ್ಕೆ ಇರುವುದಿಲ್ಲ. ಕಾರ್ಡ್‌ ಇದ್ದರೆ ಮಾತ್ರ ಸಂಚಾರ ನಡೆಸಬಹುದು.

   ಸೆಪ್ಟೆಂಬರ್ 7ರಂದು ಮೈಸೂರು ರಸ್ತೆ-ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮಾತ್ರ ರೈಲು ಓಡಲಿದೆ. ನಾಗಸಂದ್ರ-ಯೆಲಚೇನಹಳ್ಳಿ ಹಸಿರು ಮಾರ್ಗದಲ್ಲಿ ಸೆಪ್ಟೆಂಬರ್ 9ರಿಂದ ರೈಲು ಸಂಚಾರ ನಡೆಸಲಿದೆ ಎಂದು ಬಿಎಂಆರ್‌ಸಿಎಲ್ ಹೇಳಿದೆ.

   English summary
   BMRCL will launch mobile application on September 7 to recharge smart card. Smart card recharging facility at all metro stations suspended.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X