ಖಾಸಗಿಗಿಲ್ಲ ಆಸಕ್ತಿ: ಬಿಬಿಎಂಪಿಯಿಂದ ತ್ಯಾಜ್ಯ ವಿದ್ಯುತ್ ಘಟಕ ನಿರ್ಮಾಣ
ಬೆಂಗಳೂರು, ಜುಲೈ 2: ಬಿಬಿಎಂಪಿಯು ಒಂದು ಸಾವಿರ ಟನ್ ಸಾಮರ್ಥ್ಯದ ತ್ಯಾಜ್ಯದಿಂದ ವಿದ್ಯುತ್ ಉತ್ಪಾಧಿಸಬಲ್ಲ ಘಟಕ ಸ್ಥಾಪನೆಗೆ ಮುಂದಾಗಿದೆ. ಖಾಸಗಿ ಸಂಸ್ಥೆಗಳಿಂದ ಟೆಂಡರ್ ಆಹ್ವಾನಿಸಿದ್ದರು ಆದರೆ ಸಂಸ್ಥೆಗಳು ಹೆಚ್ಚು ಆಸಕ್ತಿ ತೋರದ ಕಾರಣ ಬಿಬಿಎಂಪಿಯೇ ಸ್ವತಃ ಕೇಂದ್ರವನ್ನು ಸ್ಥಾಪಿಸಲು ಚಿಂತನೆ ನಡೆಸಿದೆ.
ಬಿಬಿಎಂಪಿಯು ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸುವ ಘಟಕ ಸ್ಥಾಪನೆಗೆ ಎರಡು ವಿದೇಶಿ ಕಂಪನಿಗಳೊಂದಿಗೆ ಬಿಬಿಎಂಪಿ ಒಪ್ಪಂದ ಮಾಡಿಕೊಂಡಿದೆ. ಇನ್ನು ಬಿಬಿಎಂಪಿ ಸಂಗ್ರಹವಾದ 3 ಸಾವಿರ ಟನ್ ಕಸ ವಿಲೇವಾರಿಗೆ ಕನ್ನಹಳ್ಳಿ ಮತ್ತು ಮಾವಳ್ಳಪುರದಲ್ಲಿ ತಲಾ 50 ಕೋಟಿ ರೂ. ವೆಚ್ಚದಲ್ಲಿ ಕಸದಿಂದ ವಿದ್ಯುತ್ ತಯಾರಿಸುವ 2 ಘಟಕ ನಿರ್ಮಾಣಕ್ಕೆ ಸಿದ್ಧತೆ ನಡೆಸುತ್ತಿದೆ.

ಈಗಾಗಲೇ ತ್ಯಾಜ್ಯ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಹೊಸ ಘಟಕ ಸ್ಥಾಪನೆ ಹೇಗೆ ಮಾಡಬೇಕೆಂಬುದರ ಕುರಿತು ಯೋಜನಾ ವರದಿಯನ್ನು ಬಿಬಿಎಂಪಿ ಅಧಿಕಾರಿಗಳು ಸಿದ್ಧಪಡಿಸುವುದಕ್ಕೆ ಆರಂಭಿಸಿದ್ದು, ಪಾಲಿಕೆ ಸದಸ್ಯರ ಅಭಿಪ್ರಾಯ ಪಡೆದು ಟೆಂಡರ್ ಮೂಲಕ ಘಟಕ ನಿರ್ಮಾಣ ಮಾಡುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅನುದಾನದ ಕೊರತೆ ಉಂಟಾಗುವ ಕಾರಣ ಬಿಬಿಎಂಪಿಗೆ ಹೊರೆ ಆಗದಂತೆ ಸರ್ಕಾರದಿಂದಲೂ ಅನುದಾನ ಪಡೆಯಲು ಚಿಂತನೆ ನಡೆಸಿದೆ.












Click it and Unblock the Notifications